CrimeNEWSನಮ್ಮಜಿಲ್ಲೆ

ದೈಹಿಕ ಸಂಪರ್ಕ ಬೆಳೆಸಲು ಪೀಡಿಸುತ್ತಿದ್ದ ವೈದ್ಯ ವಿದ್ಯಾರ್ಥಿ   

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ವೈದ್ಯಕೀಯ ವಿದ್ಯಾರ್ಥಿಯೊಬ್ಬ  ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು ದೈಹಿಕ ಸಂಪರ್ಕ ಬೆಳೆಸಲು ಪೀಡಿಸುತ್ತಿದ್ದರಿಂದ ಭಯಗೊಂಡ   ಸಂತ್ರಸ್ತ ಯುವತಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೈಸೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ರಾಬರ್ಟ್ ರೋಷನ್ ಎಂಬುವವನ ವಿರುದ್ಧ ವೈಟ್ ಫೀಲ್ಡ್ ಸೈಬರ್ ಪೊಲೀಸರಿಗೆ ಮಾರತ್‌ಹಳ್ಳಿಯ 20 ವರ್ಷದ ಯುವತಿ ದೂರು ನೀಡಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ಕೆಲವು ತಿಂಗಳ ಹಿಂದೆ ಪರಿಚಿತನಾಗಿದ್ದ ಆರೋಪಿ ತಾನು ವೈದ್ಯಕೀಯ ವಿದ್ಯಾರ್ಥಿ ಎಂದು ಹೇಳಿಕೊಂಡು ನನ್ನೊಂದಿಗೆ ಚಾಟ್ ಮಾಡುತ್ತಿದ್ದು, ನಂತರದಲ್ಲಿ ಇಬ್ಬರು ಸ್ನೇಹಿತರಾಗಿದ್ದವು.

ಹೀಗಾಗಿ ಮಾರ್ಚ್ ನಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ ನನ್ನೊಂದಿಗೆ ಸುತ್ತಾಡಿದ್ದ.  ಈ ವೇಳೆ ನನ್ನೊಂದಿಗಿದ್ದ ಕ್ಷಣಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ಫೋಟೋಗಳನ್ನು ಕಳುಹಿಸಿ ಅಶ್ಲೀಲವಾಗಿ ಚಾಟಿಂಗ್ ಮಾಡುತ್ತಿದ್ದ ಆತ ದೈಹಿಕ ಸಂಪರ್ಕ ಬೆಳೆಸುವಂತೆ ಬಲವಂತ ಮಾಡುತ್ತಿದ್ದ. ಅಲ್ಲದೆ ನನ್ನ ಸಹೋದರಿಯ ಖಾಸಗಿ ಫೋಟೋ ಕಳುಹಿಸಿಕೊಡುವಂತೆ  ಪೀಡಿಸಿದ್ದಾನೆ ಎಂದು ಯುವತಿ ಆರೋಪಿಸಿ ದೂರು ನೀಡಿದ್ದಾರೆ.  ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

error: Content is protected !!
LATEST
ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ ಮೈಸೂರಿನಲ್ಲಿ ಸಚಿವರಿಗೆ ಕಪಾಳ ಮೋಕ್ಷ: ಎಚ್‌ಡಿಕೆ ಆರೋಪ ಸುಳ್ಳು ಎಂದ ಡಿಸಿಎಂ ಶಿವಕುಮಾರ್‌ ಮುಡಾ ಪ್ರಕರಣದ ಹೈಕೋರ್ಟ್‌ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಚಿವ ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಾಪಾಲರ ಸೂಚನ... ₹35 ಟಿಕೆಟ್‌ ಪಡೆದು ಓವರ್‌ಟ್ರಾವಲ್‌ ಮಾಡಿದ್ದು ಯುವತಿ- ತನಿಖಾ ಸಿಬ್ಬಂದಿ ಮೆಮೋ ಕೊಟ್ಟಿದ್ದು ಮಾತ್ರ ನಿರ್ವಾಹಕರಿಗೆ ಅದೃಷ್ಟ ತಂದುಕೊಟ್ಟ ಕಾರಿಗೆ ಅಂತ್ಯಕ್ರಿಯೆ ನೆರವೇರಿಸಿದ ಸಂಜಯ್ ಪೋಲ್ರಾ ಕುಟುಂಬ BMTC ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲನಾ ಸಿಬ್ಬಂದಿಯೇ ಕಸಗುಡಿಸಬೇಕು- ಕಂಡು ಕಾಣದಂತೆ ವರ್ತಿಸುವ ಡಿಸಿ ಆಶಾಲತಾ ಮೇಡಂ! KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ