ಬೆಂಗಳೂರು: ಆಮ್ ಆದ್ಮಿ ಪಕ್ಷದ ವತಿಯಿಂದ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಇಂದು ತ್ರಿವರ್ಣ ಸಂಭ್ರಮ ಪಾದಯಾತ್ರೆ ನಡೆಯಿತು.
ಭ್ರಷ್ಟಾಚಾರ ರಹಿತ ಬೆಂಗಳೂರಿಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಆಯೋಜಿಸಿದ್ದ ಈ “ತ್ರಿವರ್ಣ ಸಂಭ್ರಮ” ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸುಹಾಸಿನಿ ಅವರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಒಂದು ಅವಕಾಶ ಕೊಡಿ ಎಂದು ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಮನವಿ ಮಾಡಿದರು.
ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯ ವಕ್ತಾರ ಕೆ.ಮಥಾಯಿ, ಮುಖಂಡರಾ ಶಿವಪ್ಪ, ಕೊಪ್ಪಲ್ಕರ್, ಮೀರಾ, ಯಲಹಂಕ ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್, ಗೋವರ್ಧನ್, ಅರುಣ್ ಕುಮಾರ್, ಉಮೇಶ್ ಬಾಬು, ಭಾಸ್ಕರ್ ಬಾಬು, ರತ್ನಮ್ಮ, ನುಸ್ರತ್ ಇನ್ನೂ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.