NEWSನಮ್ಮಜಿಲ್ಲೆನಮ್ಮರಾಜ್ಯ

ಬೀದರ್‌: ವಿಭಾಗದ ಸಾರಿಗೆ ನೌಕರರು ಭಾಗವಹಿಸಿ ವೇತನ ಆಯೋಗ ಬೆಂಬಲಿಸಿ – ಕೂಟ ಕರೆ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಸರಕಾರ ಕೊಟ್ಟ ಲಿಖಿತ ಭರವಸೆಯಂತೆ ರಾಜ್ಯದ ಸಾರಿಗೆ ನೌಕರರಿಗೆ ವೇತನ ಆಯೋಗ ಜಾರಿಮಾಡುವಂತೆ ಸಾರಿಗೆ ಸಚಿವರ ತವರು ಜಿಲ್ಲೇ ಬೀದರ ವಿಭಾಗದ ವಿಭಾಗೀಯ ಕಚೇರಿ, ವಿಭಾಗೀಯ ಕಾರ್ಯಾಗಾರ, ಬೀದರ ಘಟಕ 1 ಮತ್ತು 2, ಹುಮನಾಬಾದ, ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ ಘಟಕದ ಸಿಬ್ಬಂದಿ ನಾಳೆ ಸೈಕಲ್ ಜಾಥಾದಲ್ಲಿ ಭಾಗವಹಿಸಲಿದ್ದಾರೆ.

ವಾರದ ರಜೆ, ದೀರ್ಘ ರಜೆ , ಬದಲಿ ರಜೆ ,ಕರ್ತವ್ಯದಿಂದ ಇಳಿದವರು ಹಾಗೂ ಸಂಜೆ ಪಾಳೆಯ ಕರ್ತವ್ಯಕ್ಕೆ ಹೋಗುವವರು ಕೆಲವರು ಸಂದಿಗ್ಧ ಪರಸ್ಥಿತಿಯಲ್ಲಿ ಇದ್ದರೆ ಕುಟುಂಬದ ಸದಸ್ಯರನ್ನೊ , ಸ್ನೇಹಿತರನ್ನೋ ಅಥವಾ ಸಂಬಂಧಿಕರನ್ನೋ ಕಳುಹಿಸುವಂತೆ ಬೀದರ್‌ ವಿಭಾಗದ ಕೂಟದ ಅಧ್ಯಕ್ಷ ಬಸವರಾಜ ಚಾಮರೆಡ್ಡಿ ಮನವಿ ಮಾಡಿದ್ದಾರೆ.

ಅ.21ರಂದು ಬೆಳಗ್ಗೆ 10ಗಂಟೆಗೆ ಬೀದರ್‌ ಕೇಂದ್ರ ಬಸ್ ನಿಲ್ದಾಣದಲ್ಲಿ ಸಮಾವೇಶಗೊಳ್ಳಲಿದ್ದು, ಎಲ್ಲ ನೌಕರರು 15 ನಿಮಿಷ ಮುಂಚಿತವಾಗಿ ಬಂದು ಸೇರಬೇಕು. ಈ ಕೇಂದ್ರ ಬಸ್ ನಿಲ್ದಾಣ ದಿಂದ ಜಿಲ್ಲಾಧಿಕಾರಿ ಕಚೇರಿ ಯವರೆಗೆ ಜಾಥಾ ಹೊರಟು ಅಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಇಂದು ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ಸಚಿವರ ತವರು ಜಿಲ್ಲೆಯಿಂದ ಇದೇ ಅ.10ರಿಂದ ಪ್ರಾರಂಭವಾಗಿರುವ ಕೂಟದ ರಾಜಾಧ್ಯಕ್ಷರ ನೇತೃತ್ವದ ಬೃಹತ್‌ ಸೈಕಲ್ ಜಾಥಾ ಬೀದರ್‌ ವಿಭಾಗ ಪ್ರವೇಶ ಮಾಡಿದೆ.

ಈ ಹಿನ್ನೆಲೆಯಲ್ಲಿ ಬೀದರನಲ್ಲಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಸಮಸ್ತ ನೌಕರರು ಭಾಗವಹಿಸಬೇಕು ಎಂದು ಬೀದರ್‌ ವಿಭಾಗದ ಕೂಟದ ಗೌರವಾಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯ ದರ್ಶಿ ಜಗನಾಥ ಶಿವಯೋಗಿ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ