NEWSನಮ್ಮರಾಜ್ಯಸಂಸ್ಕೃತಿ

ಚುಂಚನಗಿರಿ: 250 ಒಕ್ಕಲಿಗ ವಧುಗಳನ್ನು ವರಿಸಲು ಬಂದಿದ್ದು ಬರೋಬರಿ 12 ಸಾವಿರಕ್ಕೂ ಹೆಚ್ಚು ವರರು- ವಧುಗಾಗಿ ನೂಕು ನುಗ್ಗಲು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ರಾಜ್ಯದಲ್ಲಿ ಒಕ್ಕಲಿಗ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎಂಬುವುದಕ್ಕೆ ಚುಂಚನಗಿರಿಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ವಧು – ವರ ಸಮಾವೇಶವೇ ಸಾಕ್ಷಿಯಾಗಿದೆ ಎಂಬಂತಿತ್ತು.

ಹೌದು ಆದಿಚುಂಚನಗಿರಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ 25 ಸಾವಿರಕ್ಕೂದ ಸಮಾವೇಶಕ್ಕೆ 250 ಒಕ್ಕಲಿಗ ಹುಡುಗಿಯರು ಬಂದಿದ್ದರೆ, 12 ಸಾವಿರಕ್ಕೂ ಅಧಿಕ ಗಂಡು ಮಕ್ಕಳು ಬಾಳ ಸಂಗಾತಿಯನ್ನು ಅರಸಿ ಬಂದಿದ್ದರು.

ನಾಗಮಂಗಲ ತಾಲೂಕಿನ ಚುಂಚನಗಿಯಲ್ಲಿ ಇಂತಹ ದೃಶ್ಯ ಹಾಗೂ ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶ ಆಯೋಜಿಸಿದ್ದವರೇ ಸುಸ್ತಾಗಿ ಹೋದರು. ಹುಡುಗಿಯರಿಗಾಗಿ ಸಮಾವೇಶದಲ್ಲಿ ಸಾವಿರಾರು ಹುಡುಗರು ತಮ್ಮ ಹೆತ್ತವರೊಂದಿಗೆ ಕ್ಯೂ ನಿಂತಿದ್ದರು. ಮತ್ತೊಂದೆಡೆ ಈ ಹೆಚ್ಚಿನ ಜಮಸ್ತೋಮದಿಂದಾಗಿ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿಯಿತು. ಇದರಿಂದ ವಾಹನ ಸವಾರರು ಪರದಾಡಿದರು.

ಈ ಒಕ್ಕಲಿಗ ವಧು-ವರರ ಸಮಾವೇಶದಲ್ಲಿ 250 ವಧುಗಳನ್ನು ವರಿಸಲು 12 ಸಾವಿರಕ್ಕೂ ಹೆಚ್ಚು ಅವಿವಾಹಿತ ಪುರುಷರು ಭಾಗಿಯಾಗಿದ್ದರು. ಈ ಸಮಾವೇಶವು ಒಂದು ಆಘೋಷಿತ ಸ್ವಯಂವರದ ರೀತಿಯಲ್ಲಿ ಏನೋ ನಡೆಯಿತು. ಆದರೆ ಇದು ಲಿಂಗಾನುಪಾತದಲ್ಲಿನ ಅಸಮಾನತೆಯನ್ನು ಸಾಕ್ಷೀಕರಿಸಿತು ಎಂಬುದರಲ್ಲಿ ಎರಡು ಮಾತಿಲ್ಲ.

ವಧುಗಾಗಿ ವರರ ಸಾಗರವೇ ಮಠಕ್ಕೆ ಹರಿದುಬಂದಿದ್ದನ್ನು ನೋಡಿ ಆಶ್ಚರ್ಯವೂ ಉಂಟಾಯಿತು. ಜತೆಗೆ ಸರತಿ ಸಾಲಿನಲ್ಲಿ ನಿಂತಿರುವ ವರರ ಸಾಲು ನೋಡಿ ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸವಿದೆ. ಹೆಣ್ಣು ಮಕ್ಕಳು ಬೇಡವೆಂಬ ತಾತ್ಸಾರ ಮತ್ತು ಹೆಣ್ಣು ಭ್ರೂಣ ಹತ್ಯೆಯೂ ಇಂತಹ ಘಟನೆಗಳಿಗೆ ಕಾರಣವಿರಬಹುದು ಎಂಬುದನ್ನು ಮತ್ತೆ ಮತ್ತೆ ನೆನಪಿಸುವಂತಿತ್ತು.

ಇನ್ನು ವಧು- ವರರ ಪರೀಕ್ಷೆಗಾಗಿ ನಿಂತ ವೇಳೆ ನೂಕುನುಗ್ಗಲು ಉಂಟಾಗಿ ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆಯೂ ನಡೆಯಿತು. ಆದರೆ, ಇಲ್ಲಿ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿರುವ ರೈತರು ಮತ್ತು ರೈತರ ಮಕ್ಕಳೇ ಭಾಗವಹಿಸಿದ್ದು ಕಂಡುಬಂತು.

ಬಹುತೇ ಎಲ್ಲರೂ ಗ್ರಾಮೀಣ ಪ್ರದೇಶದಿಂದ ಬಂದಿವರೆ ಹೆಚ್ಚಾಗಿ ಕಾಣಿಸುತ್ತಿದ್ದರು. 25 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಮಠದ ಆವರಣದಲ್ಲಿ ಒಂದು ರೀತಿ ಜಾತ್ರೆಯ ಅನುಭವ ಕೂಡ ಆಗುತ್ತಿತ್ತು.

ಇನ್ನು ಈ ಮೊದಲೇ ಹೇಳಿದಂತೆ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನಾಗಮಂಗಲ ತಾಲೂಕಿನ ಅಂಬಲಜೀರಹಳ್ಳಿ ಗ್ರಾಮದಿಂದ ಆದಿಚುಂಚನಗಿರಿ ಮಠದವರೆಗೆ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಮಾವೇಶ ಮುಗಿದ ನಂತರವೂ ಟ್ರಾಫಿಕ್​ ಜಾಮ್​ ಉಂಟಾಯಿತು.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...