NEWSನಮ್ಮಜಿಲ್ಲೆನಮ್ಮರಾಜ್ಯ

ನೌಕರರಿಗೆ 38 ತಿಂಗಳ ವೇತನ ಹಿಂಬಾಕಿ ಕೊಡದಿದ್ದರೂ ಯಾವ ಪುರುಷಾರ್ಥಕ್ಕಾಗಿ ಈ ಸಾರಿಗೆ ಸಂಭ್ರಮ!?

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸುಮಾರು 1.25 ಲಕ್ಷ ಅಧಿಕಾರಿಗಳು, ನೌಕರರಿಗೆ ಕಳೆದ 2020ರ ಜನವರಿಯಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಈವರೆಗೂ ಕೊಡುವ ಬಗ್ಗೆ ಮಾತನಾಡದ ಸರ್ಕಾರದ ಪರವಾಗಿ ಯಾವ ಪುರುಷಾರ್ಥಕ್ಕೆ ಈ ಸಾರಿಗೆ ಸಂಭ್ರಮ ಆಚರಿಸುತ್ತಿದ್ದಾರೋ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಗೊತ್ತಿಲ್ಲ.

ಕಾಂಗ್ರೆಸ್‌ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಶಕ್ತಿಯೋಜನೆಯನ್ನು ಘೋಷಣೆ ಮಾಡಿತೆ ವಿನಾಃ ಸಾರಿಗೆ ನೌಕರರ ಅನುಕೂಲಕ್ಕಾಗಿ ಮಾಡಿಲ್ಲ. ಇನ್ನು ಸಾರಿಗೆ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬಗ್ಗೆ ನಿಜವಾಗಲು ಸಿಎಂ ಸಿದ್ದರಾಮಯ್ಯ ಅವರಿಗಾಗಲೀ ಇಲ್ಲ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗಾಗಲೀ ಕಾಳಜಿ ಇದ್ದಿದ್ದರೆ ಮೊದಲು 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡುವ ಬಗ್ಗೆ ಘೋಷಣೆ ಮಾಡುತ್ತಿದ್ದರು.

ಆದರೆ, ನೌಕರರ ಪರವಾದ ಯಾವುದೇ ಒಂದೇವೊಂದು ಯೋಜನೆಯನ್ನು ಜಾರಿಗೊಳಿಸದ ಈ ಸರ್ಕಾರದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಮೈಸೂರಿನಲ್ಲಿ ಅದೂಕೂಡ ಬೃಹತ್‌ ಕಾರ್ಯಕ್ರಮ ಮಾಡಿ ಸನ್ಮಾನಿಸಲಾಗುವುದು ಎಂದು ಹೇಳುತ್ತಿದ್ದೀರಲ್ಲ ನಿಮಗೆ ನಾಚಿಕೆ ಆಗುವುದಿಲ್ಲವೇ?

ಮೊದಲು ನೌಕರರಿಗೆ ಬರಬೇಕಿರುವ ಅರಿಯರ್ಸ್‌ ಕೊಡಿಸಿ ಇದರ ಜತೆಗೆ ಈವರೆಗೂ ಸರ್ಕಾರ ಕೊಡಬೇಕಿರುವ 4500 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಲು ಹೋರಾಟ ಮಾಡಿ, ಇದಿಷ್ಟೇ ಅಲ್ಲ ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು ಪ್ರಯಾಣಿಸಿರುವ ಟಿಕೆಟ್‌ ಮೌಲ್ಯದ ಹಣವನ್ನು ಕೂಡ ಬಾಕಿ ಉಳಿಸಿಕೊಂಡು ಅರ್ಧಂಬರ್ಧ ಕೊಟ್ಟಿದೆ. ಅದನ್ನೂ ಬಿಡುಗಡೆ ಮಾಡಲು ಒತ್ತಾಯಿಸಿ.

ಸಾರಿಗೆಯ ನಾಲ್ಕೂ ನಿಗಮಗಳಿಗೂ ಸಾವಿರಾರು ಕೋಟಿ ರೂ.ಗಳನ್ನು ಕೊಡದೆ ಬಾಕಿ ಉಳಿಸಿಕೊಂಡಿರುವ ಸಿಎಂ, ಡಿಸಿಎಂ ಮತ್ತು ಸಾರಿಗೆ ಸಚಿವರನ್ನು ತರಾಟೆಗೆ ತೆಗೆದುಕೊಂಡು ಬಿಡುಗಡೆ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡದೆ, ನೌಕರರನ್ನು ಯಾಮಾರಿಸುವ ನಿಟ್ಟಿನಲ್ಲಿ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಿಂದ ಬಲ ಬಂದಿದೆ ಎಂದು ಹೇಳಿ ಇವರಿಗೆ ಹಾರ ತುರಾಯಿ ಹಾಕಲು ಮುಂದಾಗಿರುವುದು ನಿಮಗೆ ಸರಿ ಎನಿಸುತ್ತಿದೆಯೇ ಹೇಳಿ?

ಇನ್ನು 2024ರ ಜನವರಿ 1ರಿಂದ ಮತ್ತೊಮ್ಮೆ ವೇತನ ಹೆಚ್ಚಳವಾಗಬೇಕು. ಆದರೆ, 2020ರ ಜನವರಿಯಿಂದ ಆಗಿರುವ ವೇತನ ಹೆಚ್ಚಳದ ಹಿಂಬಾಕಿಯನ್ನೇ ಉಳಿಸಿಕೊಂಡಿರುವುದನ್ನು ಕೊಡಿಸುವ ನಿಟ್ಟಿನಲ್ಲಿ ಯೋಚನೆ ಮಾಡದ ನೀವು ಈ ಸಂಭ್ರಮವನ್ನು ಮಾಡಲು ಹೊರಟಿದ್ದೀರಲ್ಲ ನಿಮ್ಮನ್ನು ಏನೆಂದು ಕರೆಯಬೇಕು ಹೇಳಿ?

ನೌಕರರ ಪರವಾಗಿದ್ದೇವೆ ಎಂದು ಹೇಳಿ ಸಾರಿಗೆ ನೌಕರರ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ನೌಕರರಿಂದ ಸಾವಿರಾರು ರೂ.ಗಳನ್ನು ವಸೂಲಿ ಮಾಡಿ ಬಳಿಕ ಅವರನ್ನೇ ಬೀದಿಗೆ ನಿಲ್ಲಿಸುವ ಇಂಥ ಸಂಘಟನೆಗಳು ಬೇಕಾ? ಈಗಲೂ ಪ್ರಜ್ಞಾವಂತ ನೌಕರರು ಹೇಳುತ್ತಿರುವಂತೆ ಸಾರಿಗೆಯ ಅಧಿಕಾರಿಗಳು ಒಟ್ಟಾಗಿ ಯಾವುದೇ ಕಾರ್ಯಕ್ರಮ ಮಾಡಿದರೂ ಅದರಲ್ಲಿ ಭಾಗವಹಿಸಿ.

ಇಲ್ಲ ಬರಿ ಸಾರಿಗೆ ಕಾರ್ಮಿಕರ ಸಂಘಟನೆಗಳು ಕರೆ ನೀಡುವ ಯಾವುದೇ ಹೋರಾಟ, ಸಮಾರಂಭಗಳಿಗೆ ಹೋಗುವ ಮುನ್ನಾ ಯೋಚನೆ ಮಾಡಿ. ಇನ್ನು ಇಲ್ಲಿ ಸಾರಿಗೆ ನೌಕರರ ಬದಲಿಗೆ ಈಗಲೂ ಸಾರಿಗೆ ಕಾರ್ಮಿಕರು ಎಂದು ಕರೆಯುತ್ತಿದ್ದಾರೆ. ಇಲ್ಲಿ ಯಾರು ಕಾರ್ಮಿಕರು ಅನ್ನೋದನ್ನು ಈ ಸಂಘಟನೆಗಳು ಖಚಿತಪಡಿಸಬೇಕು.

ನೌಕರರು ತಾವು ದುಡಿದ ಹಣವನ್ನು ಈ ರೀತಿಯ ಹೋರಾಟ ಸಮಾವೇಶಗಳಿಗೆ ಹಾಕಿ ದಿವಾಳಿಯಾಗುವ ಜತೆಗೆ ಹೋರಾಟದಲ್ಲೂ ಮುಂದೆ ಹೋಗಿ ಕೆಲಸವನ್ನೇ ಕಳೆದುಕೊಂಡು ಬೀದಿಗೆ ಬರುತ್ತಿರುವುದನ್ನು ನೋಡಿದ್ದೇವೆ. ಆದರೆ, ಸಾರಿಗೆಯ ಯಾವುದೇ ಒಬ್ಬ ಅಧಿಕಾರಿಯೂ ಈ ರೀತಿಯ ಸಮಾರಂಭಗಳಿಗೆ ಒಂದೇ ಒಂದು ರೂಪಾಯಿಯನ್ನು ಕೊಟ್ದಟಿರುವ ನಿದರ್ಶನ ನಮ್ಮ ಮುಂದೆ ಇಲ್ಲ. ಜತೆಗೆ ಯಾವುದೇ ಹೋರಾಟದಲ್ಲೂ ಭಾಗವಹಿಸಿಲ್ಲ. ಆದರೆ ನಿಮ್ಮ ಹೋರಾಟದಿಂದ ಮಾತ್ರ ವೇತನ ಹೆಚ್ಚಳ ಮಾಡಿಸಿಕೊಂಡು ನಿಮ್ಮನ್ನು ಬೀದಿಗೆ ತಳ್ಳುವ ಕೆಲಸ ಮಾಡಿರುವುದನ್ನು ಮಾತ್ರ ಮರೆಯುವಂತ್ತಿಲ್ಲ.

ಅಂದರೆ ಇದು ಏಣಿ ಹತ್ತಿ ಮೇಲೆ ಹೋದ ನಂತರ ಏಣಿಯನ್ನೇ ಒದೆಯುವಂತೆ ನಿಮ್ಮ ಹೋರಾಟದಿಂದಲೇ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ಇರುವ ನಿಮ್ಮನ್ನೇ ಅಮಾನತು, ವಜಾ, ವರ್ಗಾವಣೆ ಅಂತ ಮಾಡಿ ಸರ್ಕಾರದ ಮುಂದೆ ಒಳ್ಳೆಯವರಾಗುತ್ತಿದ್ದಾರೆ. ಆದರೆ ನೀವು ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿ ಇತ್ತ ಕೆಲಸವು ಇಲ್ಲದೆ ಅಲೆಯುವ ಸ್ಥಿತಿ ತಲುಪುತ್ತೀರಿ. ಇತ್ತ ಸಂಘಟನೆಗಳು ಯಾವುದೇ ಅಧಿಕಾರಿಗಳನ್ನು ಹೋರಾಟಕ್ಕೆ ಕರೆಯದೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿವೆ.

ಹೀಗಾಗಿ ಯೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಿ. ಇದರ ಜತೆಗೆ ಯಾವುದೇ ನೌಕರರು ಸಮಾರಂಭಗಳಿಗೆ ಯಾವುದೇ ಹಣಕಾಸಿನ ನೆರವು ನೀಡದಿರುವುದು ಒಳಿತು. ಕಾರಣ ಇಂಥ ಸಮಾರಂಭಗಳಿಗೆ ಲಕ್ಷಾಂತರ ರೂಪಾಯಿ ಎಲ್ಲೆಲ್ಲಿಂದಲೋ ಹರಿದು ಬರುತ್ತದೆ. ಹಾಗಾಗಿ ಈ ಬಗ್ಗೆಯೂ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಪ್ರಜ್ಞಾವಂತ ನೌಕರರು ಮತ್ತು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...