NEWSದೇಶ-ವಿದೇಶನಮ್ಮರಾಜ್ಯ

ಯೂಟ್ಯೂಬ್‍ನ ಸೆಕ್ಸ್ ಜಾಹೀರಾತಿನಿಂದ ಪರೀಕ್ಷೆ ಸಿದ್ಧತೆಗೆ ಅಡ್ಡಿ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿ

75 ಲಕ್ಷ ರೂ. ಪರಿಹಾರ ಕೇಳಿದ ನಿರುದ್ಯೋಗಿಗೆ ಬಿದ್ದು 25 ಸಾವಿರ ರೂ. ದಂಡ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಯೂಟ್ಯೂಬ್‍ನಲ್ಲಿ ಬರುವ ಸೆಕ್ಸ್ ಸಂಬಂಧಿತ ಪ್ರಚೋದನಕಾರಿ ಜಾಹೀರಾತುಗಳಿಂದ ನಾನು ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಅಡ್ಡಿಯಾಯಿತು ಎಂದು ಆರೋಪಿಸಿ ಮಧ್ಯಪ್ರದೇಶದ ನಿರುದ್ಯೋಗಿ ಯುವಕನೊಬ್ಬ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಯೂಟ್ಯೂಬ್‍ನಿಂದ 75 ಲಕ್ಷ ರೂಪಾಯಿ ಪರಿಹಾರ ಕೋರಿದ್ದಾನೆ.

ಮಧ್ಯಪ್ರದೇಶದ ನಿರುದ್ಯೋಗಿ ಯುವಕ ಆನಂದ ಕಿಶೋರ ಚೌಧರಿ ಎಂಬಾತನೆ ಕೋರ್ಟ್ ಮೆಟ್ಟಿಲೇರಿದ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿ.

ಈತ ಪೊಲೀಸ್ ಹುದ್ದೆಯ ಆಕಾಂಕ್ಷಿಯಾಗಿದ್ದು, ಪರೀಕ್ಷೆಗೆ ತಯಾರಿ ನಡೆಸಿದ್ದ. ಆದರೆ ಯೂ ಟ್ಯೂಬ್‍ನಲ್ಲಿ ಬರುವ ಸೆಕ್ಸ್ ಸಂಬಂಧಿತ ಪ್ರಚೋದನಕಾರಿ ಜಾಹೀರಾತಿನಿಂದ ತನಗೆ ಓದಲು ಸಾಧ್ಯವಾಗಿಲ್ಲ, ಇದರಿಂದ ನಾನು ಪರಿಕ್ಷೆಗೆ ಸಿದ್ಧವಾಗುವುದಕ್ಕೆ ಅಡ್ಡಿಯಾಯಿತು ಎಂದು ಆರೋಪ ಮಾಡಿದ್ದ.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‍ನ ದ್ವಿಸದಸ್ಯರನ್ನೊಳಗೊಂಡ ನ್ಯಾಯಪೀಠ ಈತನ ಆರೋಪವನ್ನು ತಳ್ಳಿ ಹಾಕಿತು. ಅಲ್ಲದೆ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರಿದ್ದ ಈ ನ್ಯಾಯಪೀಠ ಜಾಹೀರಾತು ಇಷ್ಟವಾಗದಿದ್ದರೆ ಅದನ್ನು ನೋಡುವ ಅಗತ್ಯವಿರಲಿಲ್ಲ, ಇಂಥ ಕ್ಷುಲ್ಲಕ ದೂರುಗಳನ್ನು ತಂದು ಕೋರ್ಟ್‌ನ ಸಮಯ ಹಾಳು ಮಾಡಬೇಡಿ ಎಂದು ಛೀಮಾರಿ ಹಾಕಿತು.

ಅಲ್ಲದೆ ಅಭ್ಯರ್ಥಿ ನಿರುದ್ಯೋಗಿ ಯುವಕ ಆನಂದ ಕಿಶೋರ ಚೌಧರಿಗೆ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಇನ್ನು ದಂಡದ ಹಣವನ್ನು ಸುಪ್ರೀಂ ಕೋರ್ಟ್‌ನ ಧ್ಯಾನ ಕೇಂದ್ರಕ್ಕೆ ನೀಡುವಂತೆ ನ್ಯಾಯಪೀಠ ಸೂಚಿಸಿದೆ.

ಈ ವೇಳೆ ಆನಂದ ಕಿಶೋರ ಚೌಧರಿ ತಾನು ನಿರುದ್ಯೋಗಿ ನನಗೆ ದಂಡ ವಿಧಿಸಿದರೆ ಅದನ್ನು ಬರಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಬೇಡಿಕೊಂಡನು. ಹೀಗಾಗಿ ಪ್ರಾರಂಭದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿದ್ದ 1 ಲಕ್ಷ ರೂಪಾಯಿ ದಂಡವನ್ನು  ಬಳಿಕ  25,000 ರೂಪಾಯಿಗಳಿಗೆ ಇಳಿಕೆ ಮಾಡಿತು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...