NEWSದೇಶ-ವಿದೇಶನಮ್ಮರಾಜ್ಯ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ಟೋಲ್ ನೀತಿ ಪರಿಚಯಿಸಲು ಮುಂದಾದ ಸರ್ಕಾರ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ಟೋಲ್ ನೀತಿಯನ್ನು ಪರಿಚಯಿಸಲು ಭಾರತ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಮೂಲಕ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ ಜಾರಿಗೆ ತರಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿದೆ.

ಈ ಹೊಸ ನೀತಿಯಲ್ಲಿ ವಾಹನದಲ್ಲಿ ತಾವು ಪ್ರಯಾಣಿಸಿದ ನಿಖರವಾದ ಕಿಲೋಮೀಟರ್ ದೂರದ ಆಧಾರದ ಮೇಲೆ ಟೋಲ್ ಶುಲ್ಕವನ್ನು ಪಾವತಿಸಬಹುದು. ಈ ಬದಲಾವಣೆಯಿಂದ ಟೋಲ್ ಸಂಗ್ರಹಣೆ ಹೆಚ್ಚು ಪಾರದರ್ಶಕವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಬದಲಾಣೆಯಿಂದ ಲಾಭ ಯಾರಿಗೆ?: ಕಿಲೋಮೀಟರ್ ಆಧಾರಿತ ಶುಲ್ಕದ ಹೊಸ ವ್ಯವಸ್ಥೆಯಡಿ, ವಾಹನಗಳು ಹೆದ್ದಾರಿಯಲ್ಲಿ ಪ್ರಯಾಣಿಸಿದ ನಿಖರ ಕಿಲೋಮೀಟರ್‌ಗೆ ಅನುಗುಣವಾಗಿ ಟೋಲ್ ಶುಲ್ಕವನ್ನಷ್ಟೇ ಪಾವತಿಸುವುದು. ಇದು ಸ್ಥಿರ ಟೋಲ್ ಶುಲ್ಕದ ಪ್ರಸ್ತುತ ವಿಧಾನವನ್ನು ಬದಲಾಯಿಸುತ್ತದೆ. ಸ್ಥಿರ ಟೋಲ್‌ನಲ್ಲಿ ದೂರವನ್ನು ಲೆಕ್ಕಿಸದೆ ಏಷ್ಟೇ ದೂರಹೋದರು ಒಂದೇ ಶುಲ್ಕ ನೀಡಲಾಗುತ್ತಿತ್ತು. ಇದು ಬದಲಾದರೆ ವಾಹನ ಸವಾರರಿಗೆ ಲಾಭವಾಗಲಿದೆ.

ಇನ್ನು ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಜಿಪಿಎಸ್ ಆಧಾರಿತ ಟೋಲ್ ಸಂಗ್ರಹಣೆ ತಂತ್ರಜ್ಞಾನವನ್ನು ಬಳಸಲಾಗುವುದು. ವಾಹನಗಳ ಚಲನೆಯನ್ನು ಟ್ರ‍್ಯಾಕ್ ಮಾಡಲು ಜಿಯೋ-ಫೆನ್ಸಿಂಗ್ ಮತ್ತು ಉಪಗ್ರಹ ಆಧಾರಿತ ಟ್ರ‍್ಯಾಕಿಂಗ್ ವ್ಯವಸ್ಥೆಗ  ಬಳಸಲು ಯೋಜನೆ ರೂಪಿಲಾಗುತ್ತಿದೆ.

ಈ ಹೊಸ ವ್ಯವಸ್ಥೆಯಿಂದ ಟೋಲ್ ಬೂತ್‌ಗಳ ಅಗತ್ಯ ಕಡಿಮೆ ಮಾಡುವ ಜತೆಗೆ ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಇದನ್ನು ಕೆಲವು ಆಯ್ದ ಹೆದ್ದಾರಿಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುವುದು. ಪರೀಕ್ಷೆ ಯಶಸ್ವಿಯಾದರೆ ದೇಶಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಿಗೆ ವಿಸ್ತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

Megha
the authorMegha

Leave a Reply

error: Content is protected !!