Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ನಮ್ಮ ಸಾರಿಗೆ ನಿಗಮಗಳಲ್ಲಿ  ಕುತಂತ್ರಿಗಳಿಂದ ನೌಕರರು ಈ ಸಮಸ್ಯೆ ಎದುರಿಸುತ್ತಿದ್ದಾರೆ, ಇದಕ್ಕೆ ಮುಕ್ತಿ ಎಂದೋ???

ವಿಜಯಪಥ ಸಮಗ್ರ ಸುದ್ದಿ

ಆತ್ಮೀಯರೇ,
ಡಿಸೆಂಬರ್ 2020ರಲ್ಲಿ ಸಾರಿಗೆ ನೌಕರರು ನಮಗೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಬೇಡ ಸರ್ಕಾರಿ ನೌಕರರು ಎಂದು ಗುರುತಿಸಿ (ಸಾರ್ವಜನಿಕ ಸೇವೆ ಮಾಡುವವರು ಸರ್ಕಾರಿ ನೌಕರರು. ಅದರಂತೆ ಸಮಾನ ವೇತನ ಪಡೆಯುವುದು ಹಕ್ಕು, ಸುಪ್ರೀಂ ಕೋರ್ಟ್ ಮಹತ್ವದ ಆದೇಶ) ಎಂದು ಕೆಲವರು ವಿಧಾನಸೌಧದಲ್ಲಿ ಮನವಿ ಕೊಡಲು ಹೋದ ಸಂದರ್ಭದಲ್ಲಿ ಸರ್ಕಾರ ಅವರನ್ನು ಬಂಧಿಸಿ ಜೈಲಿಗೆ ಹಾಕಲು ನೋಡಿತು.

ಆ ವಿಚಾರ ಸಾಮಾಜಿಕ ಜಾಲ ತಾಣದ ಮೂಲಕ ತಿಳಿಯುತ್ತಿದ್ದಂತೆಯೇ ಸಾರಿಗೆ ನೌಕರರು ಯಾವ ಸಂಘಟನೆಯವರೂ ಕರೆ ಕೊಡದಿದ್ದರೂ, ಸ್ವಯಂ ಪ್ರೇರಿತವಾಗಿ ಕರ್ತವ್ಯಕ್ಕೆ ಹಾಜರಾಗದೆ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಆಗಿನ ಸಮಯದಲ್ಲಿ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರು 9 ಲಿಖಿತ ಭರವಸೆ ನೀಡಿದ್ದಾರೆ.

ಭರವಸೆಯೊಂದಿಗೆ ಮುಂದೆ ಸಾರಿಗೆ ನೌಕರರ ಕೂಟ ಸಂಘಟನೆ ಹುಟ್ಟಿಕೊಂಡಿತು. ನಂತರ ಭರವಸೆ ಕೊಟ್ಟ ಬೇಡಿಕೆಗಳು ಈಡೇರಿಸದಿದ್ದರೆ ಮುಷ್ಕರಕ್ಕೆ ಕರೆ ಕೊಡುವುದಾಗಿ ಸಂಘಟನೆ ಎಚ್ಚರಿಕೆ ಕೂಡ ನೀಡಿತ್ತು. ತದನಂತರ ಸರ್ಕಾರ ಆಗಿನ ಸಮಯದಲ್ಲಿ ಉಪ ಚುನಾವಣೆ, ಕೊರೊನಾ ಹೀಗೆ ಅಧಿಕಾರದ ಮದದಲ್ಲಿ ಸರ್ಕಾರ ಕೊಟ್ಟ ಮಾತನ್ನೇ ಮರೆತೇ ಹೋಯಿತು.

ಸರ್ಕಾರ ಮರೆಯಲಿಕ್ಕೆ ಹಾಗೂ ಮುಷ್ಕರಕ್ಕೆ ಕರೆ ಕೊಟ್ಟರೆ, ಆಡಳಿತ ಮಂಡಳಿಯವರಿಂದ ಏನೆಲ್ಲಾ ಶಿಕ್ಷೆಗಳು ನೌಕರರಿಗೆ ಕೊಡಬೇಕು ಎನ್ನುವುದು ಕೆಲವೊಂದು ಬಕಿಟ್ ಹಿಡಿಯುವ ಸಂಘಟನೆಗಳು ಹೇಳಿಕೊಟ್ಟವು. ಅದರಂತೆಯೇ ಮುಂದೆ ಮುಷ್ಕರಕ್ಕೆ ಕರೆ ನೀಡಿದರು. ಆ ವೇಳೆ ವಜಾ, ಅಮಾನತು, ವರ್ಗಾವಣೆ, fir ಹೀಗೆ ಸರ್ಕಾರ ಹಾಗೂ ಕುತಂತ್ರಿ ಸಂಘಟನೆಗಳು ಕೂಡಿಕೊಂಡು ಆಡಳಿತ ಮಂಡಳಿಯವರಿಗೇ ಒತ್ತಡ ತಂದು ಇಷ್ಟೆಲ್ಲ ಕಷ್ಟವನ್ನು ನೌಕರರಿಗೆ ಕೊಡಲಾಯಿತು.

ತದನಂತರ ಹೈಕೋರ್ಟ್ ಆಗಿನ ಸಮಯದಲ್ಲಿ ಮಾನವೀಯತೆ ಆಧಾರದ ಮೇಲೆ ಶಿಕ್ಷೆಗಳು ಹಿಂದೆ ತಗೆದುಕೊಂಡು ವಜಾ , ಅಮಾನತು, ವರ್ಗಾವಣೆ ಆದವರನ್ನು ಪುನರ್ ನೇಮಕ ಮಾಡಿ ಕೊಳ್ಳಬೇಕು. ಇಲ್ಲ ಅಂದರೆ ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸುವ ಮೂಲಕ ಸಮಸ್ಯೆ ಬಗೆ ಹರಿಸುವುದಾಗಿ ಕೋರ್ಟ್ ಸರ್ಕಾರಕ್ಕೆ ಚಾಟಿ ಬಿಸಿತ್ತು.

ತದನಂತರ ಮುಂದೆ ಸರಕಾರದಲ್ಲಿ ಸಚಿವ ಸಂಪುಟ ಬದಲಾವಣೆ ಆಯಿತು. ಬದಲಾವಣೆ ಆದ ನಂತರ ನಮ್ಮ ಬಡವರ ಬಂದು ದಿನ ದಲಿತರ ಉದ್ಧಾರಕ ಕರೆಸಿ ಕೊಳ್ಳುವ ಸಚಿವ ಹಾಗೂ ಈಗ ನೌಕರರ ರಕ್ತ ಹೀರುವ ಸಚಿವರಾಗಿದ್ದಾರೆ. ಹೀಗೆ ಮುಂದುವರೆದು 2 ವರ್ಷಗಳ ಆಗಲಿಕ್ಕೆ ಬಂತು ಇನ್ನು ಜ್ವಲಂತ ಸಮಸ್ಯೆಗಳು ಹಾಗೆಯೇ ಉಳಿದಿವೆ.

ಈಗಲೂ ಅಲ್ಪ ಸ್ವಲ್ಪ, ಮೂಗಿಗೆ ತುಪ್ಪದ ವಾಸನೆ ತೋರಿಸಿ ಬಿಟ್ಟು ನಮ್ಮನ್ನು ಗುಂಡಿ ತೊಡಲಿಕ್ಕೆ ನಿಂತ ಹಾಗೆ ಕಾಣುತ್ತಿದೆ. ಇನ್ನು KKRTC, KSRTC ಯಲ್ಲಿನ ಆದೇಶಗಳು. ನಮ್ಮ NWKARTCಯಲ್ಲಿ ಪಾಲನೆ ಆಗುತ್ತಿಲ್ಲ. ಕಾರಣ ಕೆಲವೊಂದು ಕುತಂತ್ರಿ ಸಂಘಟನೆಗಳು ಕೆಲವು ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಇನ್ನು ಕೆಲವೊಂದಿಷ್ಟು ವಜಾ ಇನ್ನೂ ಉಳಿದಿವೆ. ವರ್ಗಾವಣೆ ಆದವರು ಕೆಲವು ನೌಕರರು ಮರಳಿ ಘಟಕಕ್ಕೆ ಕಳುಹಿಸುವಂತೆ ಆದೇಶ ಮಾಡಿದ್ದರೂ ಉದ್ದೇಶ ಪೂರ್ವಕವಾಗಿ ವರ್ಗಾವಣೆ ಮಾಡದೆ, ತಾರತಮ್ಯ ನೀತಿಯನ್ನು ಅಧಿಕಾರಿಗಳು ಈಗಲೂ ಅನುಸರಿಸುತ್ತಿದ್ದಾರೆ.

ಇನ್ನು ಅಮಾನತು ಆದವರನ್ನು ಇಲ್ಲಿಯತನಕ ಮೂಲ ಘಟಕಕ್ಕೆ ವರ್ಗಾವಣೆ ಮಾಡದೆ ನಮಗೂ ಅದಕ್ಕೂ ಸಂಬಂದ ಇಲ್ಲ ಎನ್ನುವ ಮಾತನಾಡುತ್ತಿದ್ದಾರೆ. ಈಗಾಗಲೇ ಎರಡು ನಿಗಮಗಳಲ್ಲಿ ವರ್ಗಾವಣೆ, ಅಮಾನತು ಆದವರನ್ನು ಮೂಲ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ NWKRTCಯಲ್ಲಿ ಆದೇಶಗಳು ಆಗುತ್ತಿಲ್ಲ ಎಂದು ನೌಕರರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಯಾವಾಗ ನಮಗೆ ಬೇರೆಯವರ ತರಹ ನಮ್ಮ ಘಟಕಕ್ಕೆ ಹೋಗುತ್ತೇವೋ ಇಲ್ಲ ಇಲ್ಲಿಯೇ ಕೊಳೆಯಲು ಬಿಡುತ್ತಾರೋ ಎಂದು ಗೋಳು ಹೇಳಿ ಕೊಳ್ಳುತ್ತಾರೆ.

ಇನ್ನು 20- 30 ವರ್ಷಗಳಿಂದ ನಡೆದು ಕೊಂಡು ಬಂದ ಸಮಸ್ಯೆಗಳು. ಈಗಂತೂ ಘಟಕಗಳಲ್ಲಿ ಕೊಡಬಾರದ ಕಿರುಕುಳ, ಮಾನಸಿಕ ಹಿಂಸೆಗಳನ್ನು ಕೊಡುತ್ತಿದ್ದಾರೆ. ನಾವು ದಿನಾಲೂ ಒಂದಿಲ್ಲ ಒಂದು ಘಟಕದಲ್ಲಿ ಸಮಸ್ಯೆಗಳು ಇರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗುತ್ತಲೇ ಇವೆ. ಇನ್ನು ರಜೆ ಪಡೆಯಬೇಕಾದರೆ, ಹಿಂದಿನ ಬಾಗಿಲಿನಿಂದ ರಜೆ ಪಡೆಯಬೇಕು. ರಜೆ ಹಾಕಬೇಕಾದರೆ, ರಾತ್ರಿ 12 ಗಂಟೆ ತನಕ ಎಚ್ಚರವಿದ್ದು ಹಾಕಬೇಕು. ಆ ವೇಳೆ ಕೋಟಾ ಫುಲ್. ಇಲ್ಲ ನಿಮ್ಮ ಹಾಜರಿ 22 ದಿನಗಳು ಇಲ್ಲ. ಇನ್ನು 7 ದಿನದ ಒಳಗೆ ರಜೆ ಹಾಕಬೇಕು. ಅಂದರೆ 22 ದಿವಸ ಕರ್ತವ್ಯ ಮಾಡಿದರೂ ಕೆಲ ಅಧಿಕಾರಿಗಳು ಅಪ್ಲೋಡ್ ಮಾಡಿರುವುದಿಲ್ಲ.

ಅಪ್ಲೋಡ್ ಮಾಡಲಿಕ್ಕೆ ಜಿ ಜೀ ಅನ್ನಬೇಕು ಅವರು ತಮ್ಮವರಿಗೆ ಮಾತ್ರ ಅನುಕೂಲ ಮಾಡಿ ಕೊಡುತ್ತಾರೆ. ಇಲ್ಲ ಅಂದರೆ ಅವರ ಕಷ್ಟ ಆ ದೇವರೇ ಬಲ್ಲ. .ವಾಯುವ್ಯದಲ್ಲಿ ನೌಕರರ ರಜಾ ಸರಿಯಾಗಿ ಕೊಡುವುದಿಲ್ಲ. ಇದಕ್ಕೆ ಪರಿಹಾರ ಏನು ಎಂದು ಪ್ರಶ್ನಿಸುತ್ತಾರೆ.

ಇಂತಹ ಸಮಸ್ಯೆಗಳು ಸಾಕಷ್ಟಿವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನಮ್ಮ ನಿಗಮಗಳಲ್ಲಿ ಉನ್ನತ ಅಧಿಕಾರಿಗಳ ಮಾತನ್ನೇ ಕೇಳದ ಕೆಳಹಂತದ ಅಧಿಕಾರಿಗಳಿಂದ ನೌಕರರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಮುಕ್ತಿ ಎಂದೋ???

ಇಂತಿ              
ನೊಂದ ಸಾರಿಗೆ ನೌಕರರು.

Leave a Reply

error: Content is protected !!
LATEST
ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ಕೊಡಿ: BMS ತಾಕೀತು NWKRTC: ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ ನಡುವೆ ಹೊಸ ಬಸ್‌ಗಳ ಸಂಚಾರ- ವಕೀಲರ ಮನವಿ ಸ್ಪಂದಿಸಿದ ಅಧಿಕಾರಿಗಳು ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ