NEWSದೇಶ-ವಿದೇಶನಮ್ಮಜಿಲ್ಲೆ

ಕಾರವಾರ: ಬಾಲ್ಯದ ಗೆಳೆಯನೊಂದಿಗೆ ಓಡಿ ಬಂದ ಎರಡು ಮಕ್ಕಳ ತಾಯಿ – ಪ್ರಿಯತಮನ ಮಗುವಿಗೂ ಆಗುತ್ತಿದ್ದಾರೆ ಅಮ್ಮ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಕಾರವಾರ: ತಮಿಳುನಾಡಿನಿಂದ ಬಾಲ್ಯದ ಗೆಳೆಯ ಹಾಗೂ ಪ್ರಿಯತಮನ ಜತೆ ಓಡಿ ಬಂದಿದ್ದ ಎರಡು ಮಕ್ಕಳ ತಾಯಿಗೆ ಬುದ್ದಿವಾದ ಹೇಳಿ ಆರು ತಿಂಗಳುಗಳ ಕಾಲ ಪ್ರೇಮಿಯೊಂದಿಗೆ ಸಂಸಾರ ಮಾಡಿದ ಮಹಿಳೆಯನ್ನು ಕಾರವಾರ ಪೊಲೀಸರು ಬುದ್ಧಿಹೇಳಿ ವಾಪಸ್‌ ಕಳುಗಿಸಿದ್ದಾರೆ.

ಮಕ್ಕಳನ್ನು ಬಿಟ್ಟು ಕಾರವಾರಕ್ಕೆ ಓಡಿ ಬಂದ ಪ್ರೇಮಿಗಳನ್ನು ಆರು ತಿಂಗಳ ಬಳಿಕ ಟ್ರ್ಯಾಕ್ ಮಾಡಿದ ಕಾರವಾರ ಪೊಲೀಸರು ತಮಿಳುನಾಡಿನ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಆಕೆ ಈಗ ಬಾಲ್ಯದ ಗೆಳೆಯನ ಮಗುವಿಗೂ ತಾಯಿಯಾಗುತ್ತಿದ್ದಾಳೆ.

ತನ್ನ ಬಾಲ್ಯದ ಗೆಳತಿಯ ಪ್ರೀತಿಯ ಬಲೆಯಲ್ಲಿ ಚಿಕ್ಕಂದಿನಲ್ಲೇ ಸಿಲುಕಿಕೊಂಡಿದ್ದ ಯುವಕ ಆಕೆ ಎರಡು ಮಕ್ಕಳ ತಾಯಿಯಾದರೂ ಆ ಬಲೆಯಿಂದ ಹೊರಬರಲಾಗದೇ ಕೊನೆ ಆಕೆಯನ್ನು ತಮಿಳುನಾಡಿನಿಂದ ಕಾರವಾರಕ್ಕೆ ಕರೆದುಕೊಂಡು ಬಂದು ನೆಲೆಸಿದ್ದ.

ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶ್‌ ನಗರದ ನಿವಾಸಿಗಳಾದ ಅಯಿಷಾ ರೆಹಮತುಲ್ಲಾಹ (24) ಹಾಗೂ ಬೀರ್ ಮೈದಿನ್ (27) ಓಡಿ ಬಂದಿದ್ದ ಪ್ರೇಮಿಗಳು.

ಬಾಲ್ಯದಿಂದಲೂ ಇವರಿಬ್ಬರು ಸ್ನೇಹಿತರಾಗಿದ್ದು, ನಂತರ ಇವರ ಸ್ನೇಹ ಪ್ರೇಮಕ್ಕೆ ತಿರುಗಿದೆ. ಆದರೂ ಪಾಲಕರು ಇವರ ಮದುವೆಗೆ ಒಪ್ಪದೆ ಬೇರೆಯವರೊಂದಿಗೆ ಮದು ಮಾಡಿಕೊಟ್ಟಿದ್ದಾರೆ. ಈ ಎರಡು ಮಕ್ಕಳಿಗೂ ತಾಯಿಯಾಗಿದ್ದಾರೆ. ಆದರೂ ಇವರ ನಡುವೆ ಪ್ರೇಮಾಂಕುರದ ಕೊಂಡಿ ಗಟ್ಟಿಯಾಗುತ್ತಲೇ ಹೋಗಿದೆ. ಹೀಗಾಗಿ ಆರು ತಿಂಗಳ ಹಿಂದೆಯೇ ಓಡಿಬಂದ ಪ್ರೇಮಿಗಳು ಕಾರವಾರದ ಸೋನಾರವಾಡದಲ್ಲಿ ನೆಲೆಸಿದ್ದರು.

ಈಗ ಆ ಮಹಿಳೆ ಪ್ರಿಯತಮನ ಮಗುವಿಗೆ ತಾಯಿಯಾಗುತ್ತಿದ್ದು, ಆಕೆಗೆ ಮೂರು ತಿಂಗಳು ಎಂದು ತಿಳಿದು ಬಂದಿದೆ. ಈ ನಡುವೆ ತನಗೆ ಇಷ್ಟವಿಲ್ಲದೇ ಪೋಷಕರ‌ ಒತ್ತಾಯಕ್ಕೆ ಮದುವೆಯಾಗಿದ್ದಾಗಿ ಆಯಿಷಾ ಹೇಳಿಕೆ ನೀಡಿದ್ದಾರೆ. ಈ ಕಾರಣದಿಂದ ತನ್ನ ಪ್ರೇಮಿಯೊಂದಿಗೆ ಓಡಿ ಬಂದಿರುವುದಾಗಿ ತಿಳಿಸಿದ್ದಾರೆ.

ಇನ್ನು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರುವ ಬೀರ್ ಮೈದಿನ್ ಜತೆ ಆಯಿಷಾ ಓಡಿಬಂದಿದ್ದು, ಕೆಲಸವಿಲ್ಲದ ಕಾರಣ ಹೊಟ್ಟೆ, ಬಟ್ಟೆ, ಮನೆಗಾಗಿ ಮೈದಿನ್ ಬಿಇ ಪದವೀಧರನಾಗಿದ್ದರೂ ಗಾರೆ ಕೆಲಸ ಮಾಡಿ ತನ್ನ ಪ್ರೇಮಿಯೊಂದಿಗೆ ಜೀವನ ನಡೆಸುತ್ತಿದ್ದ.

ಇನ್ನು ಈತ ಆಯಿಷಾಳಿಗೆ ಬಾಲ್ಯದ ಗೆಳೆಯನಾಗಿದ್ದಾನೆ. ಇತ್ತ ತನ್ನ ಬಾಲ್ಯದ ಗೆಳತಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಮೈದಿನ್ ಹಾರಿಸಿಕೊಂಡು ಬಂದಿದ್ದ. ಆದರೆ ಪ್ರೇಮಿಗಳನ್ನು ಪತ್ತೆ ಮಾಡಿದ ಪೊಲೀಸರು ತಮಿಳುನಾಡಿನ ಪೊಲೀಸರಿಗೆ ಮತ್ತು ಮಹಿಳೆಯ ಮಾವನಿಗೆ ಒಪ್ಪಿಸಿದ್ದು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.

Leave a Reply

error: Content is protected !!
LATEST
ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ...