ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸಂಘಟನೆಯ ಮುಖ್ಯಸ್ಥರ ಪಾದಗಳಿಗೆ ನಮಸ್ಕಾರ.
ದಯವಿಟ್ಟು ನಿಮ್ಮ ವೇತನ ಪರಿಷ್ಕರಣೆ, ವೇತನ ಆಯೋಗ, ಸರ್ಕಾರಿ ನೌಕರರ ಸರಿ ಸಮನಾದಂತ ವೇತನ, ಇವನ್ನು ಮೊದಲು ಪಕ್ಕಕ್ಕಿಡಿ. ವಜಾಗೊಂಡಿರುವ ಕಾಯಂ ನೌಕರರ ಮರು ನೇಮಕಾತಿಗೆ ಮೊದಲು ಸ್ಟೆಪ್ ತಕೊಳ್ಳಿ.
ಸರ್ಕಾರ ಮಳೆನಿಂತ ನಂತರ ಬಿಬಿಎಂಪಿ ಚುನಾವಣೆ, ನಂತರ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ. ಅದಾದ ನಂತರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹೋದರೆ ನೀತಿ ಸಂಹಿತೆ ನೆಪದಲ್ಲಿ ವೇತನ ಪರಿಷ್ಕರಣಿಯೂ ಗೋವಿಂದ. ವಜಾಗೊಂಡಿರುವವರ ಕಥೆಯು ಗೋವಿಂದ.
ಹಿಂದಿನ ಸರ್ಕಾರದಲ್ಲೇ ಹಿಂಬಾಕಿ ತಗೊಳ್ಳಬೇಕಿತ್ತು ನಾವು ಕೊಡೋದಿಕ್ಕೆ ಸಾಧ್ಯ ಇಲ್ಲ. ಸಂಸ್ಥೆಯು ನಷ್ಟದಲ್ಲಿದೆ ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಬೇಕಾದರೆ ಹಿಂಬಾಕಿ ಇಲ್ದೆ ಬೇಷರತ್ ಮರು ನೇಮಕಾತಿ ಮಾಡಿಕೊಳ್ಳುತ್ತೇವೆ. ಅಂತೇನಾದ್ರೂ ಮುಂದೆ ಬರುವ ಸರ್ಕಾರ ಅಂದ್ರೆ. ಏಳೆಂಟು ತಿಂಗಳ ಸಂಬಳಕ್ಕೂ ಚೊಂಬು.
ಈಗಾಗಲೇ ಜಂಟಿ ಮೆಮೋಗೆ ಸಹಿ ಮಾಡಿದ್ದವರದೇ ಸರಿ ಹೋಯಿತು ಅಂತ ಹಲವರು ವಜಾಗೊಂಡಿರುವವರು ಅಂದುಕೊಂಡು ಹತ್ತನೇ ತಾರೀಖಿನ ನಂತರ ಜಂಟಿ ಮೆಮೋಗೆ ಸಹಿ ಮಾಡಲು ರೆಡಿಯಾಗುತ್ತಿದ್ದಾರೆ. ಅಷ್ಟರೊಳಗೆ ದಯವಿಟ್ಟು ಏನಾದರೂ ಮಾಡಿ.
ಇಂತಿ ನೊಂದ ವಜಾಗೊಂಡ ನೌಕರ ಮ…