NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಜ.6ರಂದು ಸಿಎಂ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಬಹು ವರ್ಷಗಳ ಬೇಡಿಕೆಗಳಲ್ಲಿ ಒಂದಾದ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಅನುಷ್ಠಾನಕ್ಕೆ ಮುಹೂರ್ತ ನಿಗದಿಯಾಗಿದ್ದು, ಜ.6ರಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಚಾಲನೆ ನೀಡಲಿದ್ದಾರೆ.

ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ನೌಕರರು ಮೊದಲಿಗೆ ಹಣ ಪಾವತಿಸಿ ನಂತರ ಆ ಹಣವನ್ನು ನಿಗಮದಿಂದ ಮರುಪಾವತಿ, ಅದರಲ್ಲೂ ಶೇ.25ರಷ್ಟನ್ನು ಮಾತ್ರ ಮಾಡಿಸಿಕೊಳ್ಳುವ ಪದ್ಧತಿ ಇತ್ತು. ಜತೆಗೆ, ಈ ವ್ಯವಸ್ಥೆಯಿಂದ ನೌಕರರು ವೈದ್ಯಕೀಯ ತುರ್ತು ಬಂದಾಗ ಹಣಕ್ಕಾಗಿ ಪರದಾಡಬೇಕಾಗುತ್ತಿತ್ತು.

ಹೀಗಾಗಿ ನೌಕರರು ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗಾಗಿ ಹಲವು ವರ್ಷಗಳಿಂದ ನಿಗಮಗಳ ಮುಂದೆ ಬೇಡಿಕೆ ಇಡುತ್ತಿದ್ದರು. ಇದೀಗ ಮೊದಲಿಗೆ ನಿಗಮವು ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಮಾಡುತ್ತಿದ್ದು, ಅದಕ್ಕೆ ‘ಕೆಎಸ್ಸಾರ್ಟಿಸಿ ಆರೋಗ್ಯ’ ಎಂದು ಹೆಸರಿಡಲಾಗಿದೆ. ಇದಕ್ಕೆ ಜ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದು, ಈ ವೇಳೆ ನೌಕರರಿಗೆ ಕೆಎಸ್ಸಾರ್ಟಿಸಿ ಆರೋಗ್ಯ ಕಾರ್ಡ್ ವಿತರಿಸಲಿದೆ.

ಆಸ್ಪತ್ರೆಗಳೊಂದಿಗೆ ಒಪ್ಪಂದ: ಕೆಎಸ್ಸಾರ್ಟಿಸಿ ಆರೋಗ್ಯ ಯೋಜನೆ ಅಡಿ ನೌಕರರಿಗೆ ಚಿಕಿತ್ಸೆ ನೀಡಲು ರಾಜಾದ್ಯಂತ 250 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸಾಮಾನ್ಯ ಆಸ್ಪತ್ರೆಗಳಿಂದ ಹಿಡಿದು ಮಲ್ಟಿ ಸ್ಪೆಷಾಲಿಟಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೂ ಸೇರಿವೆ. ಆ ಆಸ್ಪತ್ರೆಗಳಲ್ಲಿ ನೌಕರರು ನಿಗಮ ನೀಡಿರುವ ಆರೋಗ್ಯ ಕಾರ್ಡ್‌ ನ್ನು ತೋರಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಯೋಜನೆ ಅಡಿ ನೌಕರರು, ಪತಿ ಅಥವಾ ಪತ್ನಿ, ಮಕ್ಕಳು ಹಾಗೂ ತಂದೆ-ತಾಯಿ ನಗದು ರಹಿತ ಚಿಕಿತ್ಸೆ ಪಡೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

ಈ ಯೋಜನೆಗಾಗಿ ನೌಕರರಿಂದ650 ರೂ. ಪಡೆಯಲಾಗುತ್ತಿದ್ದು, ಅದರ ಜತೆಗೆ ನಿಗಮವು 20 ಕೋಟಿ ರೂ. ಮೀಸಲಿಡುತ್ತಿದೆ. ಆ ಹಣವನ್ನು ಯೋಜನೆ ಜಾರಿಗಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗುವ ಟ್ರಸ್ಟ್‌ಗೆ ನೀಡಲಾಗುವುದು. ಇದು ಯೋಜನೆಯ ಮೊದಲ ವರ್ಷಕ್ಕೆ ಮೀಸಲಿಡುವ ಹಣವಾಗಿದ್ದು, ಮುಂದಿನ ಪ್ರತಿ ವರ್ಷ ಕೆಎಸ್ಸಾರ್ಟಿಸಿಯು ಶೇ.5ರಷ್ಟು ಮೊತ್ತವನ್ನು ಹೆಚ್ಚಿಸಿದರೆ, ನೌಕರರ ವಂತಿಗೆ 50 ರೂ. ಹೆಚ್ಚಳವಾಗಲಿದೆ.

ಆಸ್ಪತ್ರೆಗಳ ಬಿಲ್‌ಗಳ ಆಡಿಟ್: ಈ ಯೋಜನೆ ಅಡಿ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳು ನೌಕರರು ಅಥವಾ ಅವರ ಕುಟುಂಬದವರು ಪಡೆದ ಚಿಕಿತ್ಸೆಯ ಬಿಲ್‌ಗಳನ್ನು ನಿಗಮಕ್ಕೆ ಕಳುಹಿಸಬೇಕಿದೆ. ಆ ಬಿಲ್‌ಗಳು ಸಮರ್ಪಕವಾಗಿವೆಯೇ ಅಥವಾ ಸರ್ಕಾರ ನಿಗದಿ ಮಾಡಿರುವ ಮೊತ್ತದಷ್ಟಿದೆಯೇ ಎಂಬುದನ್ನು ಪರಿಶೀಲಿಸಲು ಕೆಎಸ್ಸಾರ್ಟಿಸಿಯು ಮೆಡ್ ಅಸಿಸ್ಟ್ ಎಂಬ ಖಾಸಗಿ ಸಂಸ್ಥೆಯನ್ನು ನೇಮಿಸಿದೆ. ಆ ಸಂಸ್ಥೆಯು ಬಿಲ್‌ಗಳನ್ನು ಆಡಿಟ್ ಮಾಡಿ ಕೆಎಸ್ಸಾರ್ಟಿಸಿಗೆ ಸಲ್ಲಿಸಲಿದೆ. ಅದನ್ನಾಧರಿಸಿ ನಿಗಮವು ಆಸ್ಪತ್ರೆಗೆ ಆರ್‌ಟಿಜಿಎಸ್ ಮೂಲಕ ಚಿಕಿತ್ಸಾ ವೆಚ್ಚ ಪಾವತಿಸಲಿದೆ. ಇದರಿಂದಾಗಿ ನೌಕರರು ಆಸ್ಪತ್ರೆ ಬಿಲ್‌ಗಳನ್ನು ನಿಗಮಕ್ಕೆ ಸಲಿಸುವ ಗೊಂದಲವೂ ಇಲ್ಲ.

ಸಾರಿಗೆ ನಿಗಮಗಳ ನೌಕರರ ಹಲವು ದಿನಗಳ ಬೇಡಿಕೆಯಂತೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ನೌಕರರು ಮತ್ತು ಕುಟುಂಬದವರು ವೈದ್ಯಕೀಯ ತುರ್ತು ಎದುರಾದಾಗ ಹಣವಿಲ್ಲದಿದ್ದರೂ, ಚಿಕಿತ್ಸೆ ಪಡೆಯಬಹುದಾಗಿದೆ. ಯೋಜನೆಗಾಗಿ ರಾಜ್ಯಾದ್ಯಂತ 250 ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
l ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ   

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ