NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರ ಪರಿಶ್ರಮದಿಂದಲೇ ಕಚೇರಿಯಲ್ಲಿ ಕುಳಿತ ಅಧಿಕಾರಿಗಳಿಗೂ ಸಂಬಳ ಸಿಗುತ್ತಿರುವುದು – ಅನ್ಬುಕುಮಾರ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಿಗೆ ನೌಕರರು ಮತ್ತು ಪ್ರಯಾಣಿಕರೆ ಜೀವಾಳವಾಗಿದ್ದಾರೆ. ಹೀಗಾಗಿ ನೌಕರರ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಭರವಸೆ ನೀಡಿದ್ದಾರೆ.

ಗುರುವಾರ ನೌಕರರ ಜಂಟಿ ಕ್ರಿಯಾ ಸಮಿತಿ ನಗರದ ಫ್ರೀಡಂಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿ ನೌಕರರ ಮನವಿ ಪತ್ರ ಸ್ವೀಕರಿ ಮಾತನಾಡಿದರು.

ನಿಮ್ಮ ಸಮಸ್ಯೆಗಳು ನಮಗೆ ನಿಮ್ಮಿಂದಲೇ ಗೊತ್ತಾಗಬೇಕು, ಇಲ್ಲದಿದ್ದರೆ ನಮಗೆ ಏನು ಕೂಡ ತಿಳಿಯುವುದಿಲ್ಲ. ಕಾರಣ ನಾವು ಇಲ್ಲಿಗೆ ನೇಮಕವಾದಾಗ ಸಂಸ್ಥೆಯ ಎಬಿಸಿಡಿ ಗೊತ್ತಿರುವುದಿಲ್ಲ. ನಿಮ್ಮನ್ನು ಭೇಟಿ ಮಾಡಿದಾಗಲೇ ಇಲ್ಲಿನ ಎಲ್ಲ ಆಗುಹೋಗುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದ್ದು. ಇನ್ನು ನಿಮಗೆ ಆಗುತ್ತಿರುವ ತೊಂದರೆಯ ಬಗ್ಗೆ ಸಂಘಟನೆಗಳ ಮುಖಂಡರು ತಿಳಿಸಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಇನ್ನು ನೀವು ಕೊಟ್ಟ ಬೇಡಿಕೆಗಳ ಈಡೇರಿಕೆ ಬರಿ ಅಧಿಕಾರಿಗಳಿಂದ ಆಗುವುದಿಲ್ಲ, ನಾವು ಸರ್ಕಾರದ ಗಮನಕ್ಕೆ ತಂದು ಸರ್ಕಾರ ನಮಗೆ ಸೂಚನೆ ನೀಡಿದ ಮೇಲೆ ನಾವು ಅದನ್ನು ಜಾರಿಗೆ ತರುವ ಬಗ್ಗೆ ಆದೇಶ ಮಾಡುತ್ತೇವೆ. ಹೀಗಾಗಿ ನೀವು ಕೊಟ್ಟಿರುವ ಮನವಿ ಪತ್ರವನ್ನು ಸರ್ಕಾರಕ್ಕೆ ಇಂದೇ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇನ್ನು ನಮ್ಮ ರಾಜ್ಯದ ಸಾರಿಗೆ ನಿಗಮಗಳಲ್ಲಿ ಮಾತ್ರ 24500 ಬಸ್‌ಗಳು ಇದ್ದು ನಿತ್ಯ ಒಂದು ಕೋಟಿ ಜನರಿಗೂ ಹೆಚ್ಚು ಪ್ರಯಾಣಿಸುತ್ತಿದ್ದಾರೆ. ಇಡೀ ದೇಶದಲ್ಲೇ ಇಷ್ಟು ಉತ್ತಮವಾದ ಮತ್ತು ಸಪರ್ಮಕವಾಗಿ ಜನರಿಗೆ ಸೇವೆ ನೀಡುವುದಕ್ಕೆ ಬೇರೆ ರಾಜ್ಯಗಳಿಂದ ಸಾಧ್ಯವಾಗುತ್ತಿಲ್ಲ. ಇದಕ್ಕೆ ನೌಕರರ ಪರಿಶ್ರಮವೇ ಪ್ರಮುಖ ಕಾರಣವಾಗಿದೆ ಎಂದರು.

ಅಲ್ಲದೆ ನಿಮ್ಮ ಸೇವೆಯಿಂದಲೇ ಕಚೇರಿಯಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳಿಗೂ ವೇತನ ಸಿಗುವುದು, ನೀವು ಇಲ್ಲದಿದ್ದರೆ ಅಧಿಕಾರಿಗಳು ಇರುತ್ತಿರಲಿಲ್ಲ. ಹಾಗಾಗಿ ಅಧಿಕಾರಿಗಳು ನೌಕರರಿಗೆ ಗೌರಕೊಡಬೇಕು, ಸಮಸ್ಯೆ ಆಲಿಸಿ ಬಗೆಹರಿಸಬೇಕು  ಎಂದೇ ಅವರನ್ನು ಪ್ರತಿ ಬಾರಿಯೂ ಕರೆದುಕೊಂಡು ಬರುತ್ತಿದ್ದೇವೆ. ಎಂದು ಹೇಳಿದರು.

ಒಟ್ಟಾರೆ ನಿಮ್ಮ ಬೇಡಿಕೆಗಳನ್ನು ಮಾರ್ಚ್‌ ಮೊದಲವಾರದಲ್ಲಿ ಸರ್ಕಾರದ ಮಟ್ಟದಲ್ಲಿ ಸಭೆ ಕರೆದು ಪರಿಶೀಲನೆ ಮಾಡಿ ಬಗೆಹರಿಸುವ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಉಪವಾಸ ಸತ್ಯಾಗ್ರಹಕ್ಕೆ ಅಂದುಕೊಂಡಷ್ಟು ನೌಕರರು ಭಾಗವಹಿಸದೆ ನೀರಸ ಪ್ರಕ್ರಿಯೆ ವ್ಯಕ್ತವಾದರೂ ನಿಗಮದ ಎಂಡಿ ಉನ್ನತ ಮಟ್ಟದ ಅಧಿಕಾರಿಗಳು ಬಂದಿದ್ದರಿಂದ ಒಂದು ಹಂತದಲ್ಲಿ ಯಶಸ್ವಿಯಾಯಿತು ಎಂದೇ ಹೇಳಬಹುದು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ