KSRTC: ಸರಿ ಸಮಾನ ವೇತನಕ್ಕಾಗಿ ದೃಢ ನಿರ್ಧಾರ ತೆಗೆದುಕೊಳ್ಳಿ ಇಲ್ಲ ಡಿ.31ರ ಮುಷ್ಕರ ಬೆಂಬಲಿಸಿ- ಒಕ್ಕೂಟಕ್ಕೆ ಮಲ್ಲೇಶ್ ಆಗ್ರಹ
- ಸರ್ಕಾರಿ ನೌಕರರ ಸಂಘಟನೆಯಂತೆ ದೃಢವಾಗಿ ನಿಲುವು ತೆಗೆದುಕೊಳ್ಳಬೇಕು ಇಲ್ಲ ಅಗ್ರಿಮೆಂಟ್ ಮಾಡುವುದಕ್ಕಾದರೂ ಬಿಡಬೇಕು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ಬಂಧುಗಳೇ ಮುಷ್ಕರ ನಡೆಯುತ್ತಾ ಇಲ್ವಾ? ಎರಡು ವಿಧದಲ್ಲಿ ನಡೆಯಲ್ಲ. ಸರ್ಕಾರ ಬೆಳಗಾವಿ ಅಧಿವೇಶನದ ಒಳಗೆ ವೇತನ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಒಂದು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡರೆ, ಅದು ಆಗಲಿಲ್ಲ ಅಂದ್ರೆ ಇದೇ ಡಿ. 20ನೇ ತಾರೀಖು ಕಳೆದ ನಂತರ ಈಗ ಮುಷ್ಕರಕ್ಕೆ ಕರೆ ಕೊಟ್ಟಿರುವಂತಹ ಸಂಘಟನೆಗಳ ಮುಖ್ಯಸ್ಥರನ್ನು ಕರೆದು ವೇತನ ಒಪ್ಪಂದವನ್ನು ಮಾಡಿದರೆ ಡಿ.31ರಂದು ಮುಸ್ಕರ ನಡೆಯಲ್ಲ.
ಇನ್ನು ಈಗೇನು ಸರಿಸಮಾನ ವೇತನ, ಸರ್ಕಾರಿ ನೌಕರರು, ಆರನೇ ವೇತನ ಆಯೋಗ, ಸರ್ಕಾರದ ನಿಗಮ ಮಂಡಳಿಗಳಿಗೆ ಸರಿಸಮಾನವಾದ ವೇತನವನ್ನು ಕೊಡುಸ್ತೀವಿ ಅಂತ ಹೇಳಿ ಬರಿ ವಾಟ್ಸಪ್ ಗಳಲ್ಲಿ ಹಾರಾಟ ಚೀರಾಟ ಮಾಡಿಕೊಂಡು ಬಾಯಿ ಮಾತಿನಲ್ಲೇ ಕಾಲ ಕಳಿತವರಲ್ಲ ಆ ಸಂಘಟನೆಗಳ ನಾಯಕರು ಅವರ ಬೆಂಬಲ ಇಲ್ಲದೆ ಇರುವುದರಿಂದ ಮುಷ್ಕರ ನಡೆಯಲ್ಲ.
ಅದು ಆಡಳಿತ ವರ್ಗದವರಿಗೂ ಗೊತ್ತು ಗೊತ್ತು, ಸರ್ಕಾರಕ್ಕೂಗೊತ್ತು ಜತೆಗೆ ಮುಷ್ಕರ ಕರೆ ಕೊಟ್ಟಿರುವರಿಗೂ ಗೊತ್ತು, ಎಲ್ಲರಿಗೂ ಗೊತ್ತು ನೌಕರರಿಗೂ ಗೊತ್ತು. ಒಂದು ಅರ್ಥಮಾಡ್ಕೋಬೇಕು ಸಾರಿಗೆ ಸಂಸ್ಥೆಗಳು ಕಷ್ಟದಲ್ಲಿವೆ ಸರ್ಕಾರ ಕಷ್ಟದಲ್ಲಿದೆ ಸರಿಸಮಾನ ವೇತನ ಕೊಟ್ರೆ ನಮ್ಮದೇನು ಅಭ್ಯಂತರ ಇಲ್ಲ. 5000 ಬರುವ ಬದಲು 10000 ಸಂಬಳ ಜಾಸ್ತಿ ಆದ್ರೆ ಏನು ಬಿಟ್ಟುಬಿಡ್ತೀವಾ? ಬಿಡಲ್ಲ ಅದನ್ನ ಎಲ್ಲಿ ಕೊಡಿಸಬೇಕು?
ಈ ಹಿಂದಿನ ಸರ್ಕಾರದಲ್ಲಿ ಸರ್ಕಾರಿ ನೌಕರರು ನಮಗೆ ಏಳನೇ ವೇತನ ಜಾರಿ ಮಾಡಿ ಅಂತ ಅಂದಾಗ ಏನ್ಮಾಡಿದ್ರು ಅರ್ಧ ದಿನ ಸ್ಟ್ರೈಕ್ ಮಾಡಿದ್ರು. ಕೂಡಲೇ ಮಧ್ಯಂತರ ಪರಿಹಾರ ತಗೊಂಡ್ರು. ಮತ್ತೆ ಬೆಂಗಳೂರಿನಲ್ಲಿ ವಿಧಾನಸಭೆ ಅಧಿವೇಶನ ನಡೀತಾ ಇತ್ತು.
ಈ ಕಾಂಗ್ರೆಸ್ ಸರ್ಕಾರ ಬಂದ ಎರಡನೇ ಅಧಿವೇಶನದಲ್ಲಿ ಮುಷ್ಕರ ನಡೆದೆ ನಡೆಯುತ್ತದೆ ಅಂತ ಹೇಳಿ ಯಾವಾಗ ಗುಪ್ತಚರ ವರದಿ ಸರ್ಕಾರಕ್ಕೆ ತಲುಪಿತೋ ಅಧಿವೇಶನ ಮುಗಿದಂಗೆ ರಾತ್ರಿ 11ಗಂಟೆಯಲ್ಲಿ ನಿರ್ಧಾರ ಮಾಡ್ತಾರೆ ಸರ್ಕಾರದ ಮುಖ್ಯಸ್ಥರು, ಆಗಸ್ಟ್ ತಿಂಗಳಿಂದ ಜಾರಿಮಾಡಿವಿ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಅಂಥ.
ಇನ್ನು ಸಾರಿಗೆ ನೌಕರರಿಗೆ ಸರಿಸಮಾನ ಅಂತ ಹೋರಾಟ ಮಾಡ್ತಾ ಇರೋರು ಬೆಳಗ್ಗೆ ಎದ್ದರೆ ಎಡಿಟಿಂಗ್ ವಿಡಿಯೋಗಳು ಹಾಕೊಂಡು ಆಡಿಯೋಗಳು ಹಾಕೊಂಡು ಪೋಸ್ಟರ್ ಹಾಕೊಂಡು ಕಾಲ ಕಳಿತಾ ಇದ್ದಾರೆ. ಇವರು ಹೋರಾಟ ಏನು ಮಾಡಿದ್ರು ಹನಿಮೂನ್ ಪಿರಿಯಡ್ ಸರ್ಕಾರದ ಆರು ತಿಂಗಳು ಇರುತ್ತದೆ.
ಮುಗಿತು ಅಲ್ಲಿಗೆ ಅದಾದ್ಮೇಲೆ ಹೋಗಿ ದಂಡಿಸಿ ಕೇಳಲೇ ಇಲ್ವಲ್ಲ ಇವರು ಪುರಭವನದಲ್ಲಿ ಒಂದು ಸಭೆ ಮಾಡಿದ್ರು ಅವತ್ತೇ ದಂಡಿಸಿ ಕೇಳಬೇಕಾಯಿತು ಪ್ರಣಾಳಿಕೆಯಲ್ಲಿಇದೇ. ಯಾವಾಗ ಜಾರಿ ಮಾಡಿದ್ದೀರಿ ಸ್ವಾಮಿ ಮಾಡ್ತೀರಾ ಮಾಡಲ್ವಾ? ಮಾಡದೆ ಇದ್ದರೆ ವೇತನ ಒಪ್ಪಂದ ಮಾಡಿ ಕೊಡಿ ಒಂದು ಶೇ. 40ರಷ್ಟು ಅಂತ ಕೇಳಬೇಕೋ ಇಲ್ವೋ? ಕೇಳಲಿಲ್ಲ.
ಅಂದ್ರೆ ಸರ್ಕಾರ ಬರ್ತದ ಇವರ ಆಫೀಸ್ ಹತ್ರ ಸರಿಸಮಾನ ಜಾರಿ ಮಾಡಿವೀ ಕಣ್ರಪ್ಪ ನಿಮಗೆ ಅಂತ ಹೇಳೋಕೆ. ಯಾಕೆಂದರೆ ಸರ್ಕಾರಕ್ಕೆ ಗೊತ್ತು ಇಬ್ಬರ ಜಗಳ ಮೂರನೆಯವನಿಗೆ ಲಾಭ ಅಂತ ಹೇಳಿ ಸಾರಿಗೆ ಸಂಸ್ಥೆಯಲ್ಲಿ ಇರುವಂತಹ ಸಂಘಟನೆಗಳಲ್ಲಿ ಎರಡು ಬಣ ಇದೆ.
ಅವರಿಬ್ಬರು ಕಿತ್ತಾಡಿದಲ್ಲಿ ನಾವು ಸೇಫ್ಟಿಯಾಗಿ ಹೋಯ್ತಾ ಇದೆ. ಇಂದು ಸರ್ಕಾರ 38 ತಿಂಗಳು ಈವರೆಗೂ ಕೊಟ್ಟಿಲ್ಲ. ಮತ್ತೆ ನಾವು ಒಂದು 38 ತಿಂಗಳು ಅಲ್ಲಿಗೆ ಹಾಕಿಬಿಟ್ಟು ಚುನಾವಣೆ ಒಂದು ಆರು ತಿಂಗಳು, ವರ್ಷ ಇದ್ದಾಗ ಒಂದಷ್ಟು ಪರ್ಸೆಂಟೇಜ್ ಹೆಚ್ಚು ಕೊಟ್ಟುಬಿಟ್ಟು ಬರುವ ಸರ್ಕಾರದ ಮೇಲೆ 60-70 ತಿಂಗಳ ಹಿಂಬಾಕಿ ಹೊರೆ ಹೊರೆಸಿಬಿಟ್ಟು ಹೊರಟರೆ ಆಯಿತು ಅನ್ನೋ ಲೆಕ್ಕದಲ್ಲಿ ಸರ್ಕಾರ ಇರುತ್ತದೆ.
ಆಗ ಸಮಸ್ಯೆ ಆಗುವುದು ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾಗೆ ತೊಂದರೆಯಾಗುವುದು ಸಂಸ್ಥೆ ನೌಕರರಿಗೆ. ಸಾರಿಗೆ ಸಂಸ್ಥೆಯ ಅಧಿಕಾರಿ ವರ್ಗದವರು ಕೇಳಿದರು ಬಂದು ಪತ್ರಿಕಾ ಗೋಷ್ಠಿ ಮಾಡಿದರು. ಆದರೆ ಒಕ್ಕೂಟದರದ್ದೇನು ಆ ರೀತಿ ಯಾವುದೇ ಒಂದು ಹೋರಾಟ ಇಲ್ವಲ್ಲ.
ನಾವು ಹೋಗಿ ಸರ್ಕಾರವನ್ನು ದಂಡಿಸಿ ಕೇಳಿದ್ದೇವೆ, ಮುಖ್ಯಮಂತ್ರಿಗಳನ್ನು ಕೇಳಿದ್ದೇವೆ, ಸಾರಿಗೆ ಸಚಿವರನ್ನು ಕೇಳಿದ್ದೇವೆ ಅವರು ಈ ರೀತಿ ಭರವಸೆ ಕೊಟ್ಟಿದ್ದಾರೆ. ನಾವು 2025 ಜನವರಿಯಿಂದ ಮಾಡ್ತೀವಿ ಅಂತ ಹೇಳುವವರಿಲ್ಲ. ಇಲ್ಲ 2025 ಏಪ್ರಿಲ್ ಇಂದ ಮಾಡ್ತೀವಿ ಅಂತ ಹೇಳುವವರೆ ಏನು ಒಂದೇ ಒಂದು ಹೇಳಿಕೆ ಇಲ್ವಲ್ಲರೀ.
ಆ ರೀತಿ ಹೇಳಿಕೆ ಇಲ್ಲದೆ ಇದ್ದಾಗ ಏನು ಮಾಡಬೇಕು ಮಾನವೀಯತೆ ಹಿನ್ನೆಲೆಯಲ್ಲಿ ಈಗ ಮುಷ್ಕರಕ್ಕೆ ಕರೆ ಕೊಟ್ಟಿರುವಂತಹ ಸಂಘಟನೆಗಳ ಮುಖ್ಯಸ್ಥರ ಜತೆ ನಾವಿದ್ದೀವಿ. ನಮ್ಮದು ಸರಿಸಮಾನ ವೇತನ ಹೋರಾಟ ಯಥಾವತ್ತಾಗಿ ನಡೀತಾನೆ ಇರುತ್ತದೆ ಈ ಸರ್ಕಾರ ಇರುವ ತನಕ ಅಂತ ಹೇಳಿಕೆ ಕೊಡಬೇಕೋ ಇಲ್ವೋ.
ಇಲ್ಲ ದೃಢ ಸರಿ ಸಮಾನ ವೇತನ ಕೊಡಬೇಕು ಎಂದು ಒಂದು ಡೆಡ್ಲೈನ್ ಹಾಕಿಕೊಂಡು ಸರ್ಕಾರಕ್ಕೆ ಎಚ್ಚರಿಸಬೇಕಲ್ಲವೇ ಅದೇನನ್ನು ಮಾಡದೆ ಈರೀತಿ ಕಾಲಹರಣ ಮಾಡುವುದು ನೌಕರರಿಗೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಸಾರಿಗೆ ನೌಕರ ಮಲ್ಲೇಶ್ ನೋವಿನ ಆಕ್ರೋಶದಲ್ಲೇ ಎಚ್ಚರಿಸಿದ್ದಾರೆ.