ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ತರಬೇತಿ ಕೇಂದ್ರದಲ್ಲಿ ಚಾಲನಾ ವೃತ್ತಿ ಪರೀಕ್ಷೆಯನ್ನು ಇದೇ ಡಿ.16ರಿಂದ ಪ್ರಾರಂಭಿಸುತ್ತಿದೆ.
ಈಗಾಗಲೇ ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾಗಿ ಹಾಸನ ತರಬೇತಿ ಕೇಂದ್ರದಲ್ಲಿ ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಇಚ್ಛಿಸಿರುವ ಅಭ್ಯರ್ಥಿಗಳಿಗೆ ಡಿ.16 ರಿಂದ ಚಾಲನಾ ವೃತ್ತಿ ಪರೀಕ್ಷೆಯನ್ನು ನೀಡಲಾಗುವುದು.
ಈ ಸಂಬಂಧ ಅಭ್ಯರ್ಥಿಗಳು ಡಿ.10ರಂದು ಮಧ್ಯಾಹ್ನ 1 ಗಂಟೆಯಿಂದ ನಿಗಮದ ಅಧಿಕೃತ ವೆಬ್-ಸೈಟ್ ksrtcjobs.karnataka.gov.in ನಲ್ಲಿ ಕರಪತ್ರವನ್ನು ಡೌನ್-ಲೋಡ್ ಮಾಡಿಕೊಂಡು ಕರಪತ್ರದಲ್ಲಿ ತಿಳಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಹಾಜರಾಗಲು ಈ ಮೂಲಕ ಸೂಚಿಸಲಾಗಿದೆ.
ಈ ನೇಮಕಾತಿಯನ್ನು ಅಭ್ಯರ್ಥಿಗಳು ಗಣಕೀಕೃತ ಚಾಲನಾ ಪಥದಲ್ಲಿ ಗಳಿಸಿದ ಅಂಕಗಳ ಮೆರಿಟ್ ಹಾಗೂ ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪಾರದರ್ಶಕವಾಗಿ ನಡೆಯಲಿದೆ.
ಹೀಗಾಗಿ ಮಾನವ ಹಸ್ತಕ್ಷೇಪ ಇರುವುದಿಲ್ಲ. ಆದುದರಿಂದ ಅಭ್ಯರ್ಥಿಗಳು ಯಾವುದೇ ಶಿಫಾರಸು/ ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗಬಾರದೆಂದು ನಿಗಮದ ನಿರ್ದೇಶಕರು (ಸಿ & ಜಾ) ಹಾಗೂ ಆಯ್ಕೆ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-22221321, ಹಾಗೂ ಸಂಚಾರಿ ದೂರವಾಣಿ ಸಂಖ್ಯೆ 7760990061, 7760981930ಯನ್ನು ಸಂಪರ್ಕಿಸಬಹುದು.
![](https://vijayapatha.in/wp-content/uploads/2024/02/QR-Code-VP-1-1-300x62.png)