NEWSನಮ್ಮಜಿಲ್ಲೆನಮ್ಮರಾಜ್ಯ

ಪತ್ರಪಥ- ಹೋರಾಟಕ್ಕೆ ಬರುವವರನ್ನು ತಡೆದವರು ಕಾರ್ಮಿಕ ದ್ರೋಹಿಗಳಲ್ಲವೆ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಸಿಐಟಿಯು ಫೆಡರೇಷನ್ ಪ್ರಥಮವಾಗಿ ಸೇವೆಯಿಂದ ವಜಾ ಮಾಡಿರುವ ನೌಕರರನ್ನು ಪುನರ್ ನೇಮಕ ಮಾಡಬೇಕು ಅಂತ ಸೆಪ್ಟೆಂಬರ್ 20- 2021 ರಂದು ಧರಣಿ ಸತ್ಯಾಗ್ರಹ ಮಾಡಿತು.

ನಂತರ ನವೆಂಬರ್ ನಲ್ಲಿ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟ ಧರಣಿ ಹಮ್ಮಿಕೊಂಡಾಗ ಧರಣಿಗೆ ಹೋಗಬೇಡಿ, ಸಚಿವರು 2-3 ದಿವಸದಲ್ಲಿ ಆದೇಶ ಮಾಡುತ್ತಾರೆ ಅಂತ ಹೋರಾಟಕ್ಕೆ ಬರುವವರನ್ನು ತಡೆದದ್ದು ಯಾರು? ಅವರು ಕಾರ್ಮಿಕ ದ್ರೋಹಿಗಳಲ್ಲವೆ?

ಶಾಸಕ ಮಹೇಶ್ ಅವರನ್ನು ಸಚಿವರ ಮನೆ ಬಳಿ ಕರೆದುಕೊಂಡು ಬಂದು ವಜಾ ಅದ ಕಾರ್ಮಿಕರು ಯಾವ ಸಂಘದ ಜತೆಯೂ ಹೋಗಬೇಡಿ ಸಚಿವರು ಒಪ್ಪಿಕೊಂಡಿದ್ದಾರೆ. 2-3 ದಿವಸದಲ್ಲಿ ಡ್ಯೂಟಿ ಕೊಡಿಸುತ್ತಾರೆ ಅಂತ ವಿಡಿಯೋದಲ್ಲಿ ಮಾತನಾಡುವಾಗ ಅಣ್ಣ ಕೆಲಸ ಇಲ್ಲದಿದ್ದಾಗ ವೇತನ ಕೇಳಬೇಡಿ‌ಅಂತ ಅವರ ಬಾಯಲ್ಲಿ ಹೇಳಿಸಿದವರು ಯಾರು? ಅವರು ಕಾರ್ಮಿಕ ದ್ರೋಹಿಗಳಲ್ಲವೇ?

ಲೋಕ ಅದಾಲತ್ ಆದೇಶವಾದಾಗ ಶಿಕ್ಷೆಯ ಸೂಚನೆ ಸರ್ಕಾರದ TS ಕಚೇರಿಯಿಂದ ಬಂದಾಗ CITU ,ಕಚೇರಿಯಲ್ಲಿ ಸಭೆ ಕರೆದು ಅಲ್ಲಿ ಚರ್ಚೆ ಮಾಡುವಾಗ ಶಿಕ್ಷೆಗಳನ್ನು ನಾವು ಒಪ್ಪೋದು ಬೇಡ ಅನಿರ್ದಿಷ್ಟ ಧರಣಿ ಮಾಡೋಣ- ಯಾವುದೇ ಶಿಕ್ಷೆ ಮತ್ತು ಷರತ್ತುಗಳಿಲ್ಲದೆ ನೌಕರರನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ಒತ್ತಾಯಿಸೋಣ ಅಂದಾಗ ಹೋರಾಟ ಬೇಡ ಸಚಿವರು ಮತ್ತು ಆಡಳಿತ ವರ್ಗದ ಜತೆ ಮಾತಾಡೊಣ ಅಂತ ಹೇಳಿದವರು ಯಾರು?

ಈಗ ಅವರೇ ಬಹಳ ಕಾಳಜಿಯಿಂದ ಮಾತನಾಡಿ ನಾಟಕ ಮಾಡುತ್ತಿದ್ದಾರೆ. ಸೇವೆಯಿಂದ ವಜಾ ಅದ ಕಾರ್ಮಿಕ ಬಂಧುಗಳೇ ಯಾರು ಕಾರ್ಮಿಕರಿಗೆ ಬಣ್ಣ- ಬಣ್ಣದ ಮಾತನಾಡುತ್ತಾರೆ ಅವರನ್ನು ನಂಬೋದು ನಮಗೆ ನಾವೇ ಮೋಸ ಮಾಡಿಕೊಂಡಂತೆ.

ಎಚ್ಚರದಿಂದ ನೈಜತೆಗೆ ಬೆಲೆ ಕೊಡಿ. ಡೋಂಗಿ- ಪುಂಗಿ- ಬಣ್ಣದ- ಭ್ರಮಾತ್ಮಕ ಮಾತುಗಳನ್ನು ಆಡುವವರ ಬಗ್ಗೆ ಇನ್ನು ಮುಂದಾದರು ಎಚ್ಚರ ವಹಿಸಿ. ಇಲ್ಲದಿದ್ದರೆ ಅವರು ಭಸ್ಮಾಸುರರ ಪಾತ್ರ ಮಾಡುತ್ತಿದ್ದಾರೆ. ನಟನೆ ಮಾಡುತ್ತ ನಿಮ್ಮ ಕೈಯನ್ನು ನಿಮ್ಮ ತಲೆಯ ಮೇಲೆ ಇಟ್ಟುಕೊಳ್ಳುವಂತೆ ಮಾಡಿ ಸುಟ್ಟು ಹೋದರೆ ನಿಮ್ಮ ಕೈ ಇಟ್ಟುಕೊಂಡು ಸುಟ್ಟರೆ ನಾನೇನು ಮಾಡಲಿ ಅಂತ ನಾಶ ಮಾಡುವ ಹುನ್ನಾರವಿದೆ.

l ಮಂಜುನಾಥ್‌ ಸಿಐಟಿಯು

Leave a Reply

error: Content is protected !!
LATEST
KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ ಸಿಎಂ ಸ್ವಕ್ಷೇತ್ರ ರಂಗಸಮುದ್ರ ಸ್ಮಶಾನ ಭೂಮಿ ಮೇಲು ಬಿದ್ದ ವಕ್ಫ್‌ ಕಣ್ಣು- ಪಹಣಿಯಲ್ಲಿ 2021-22ರಿಂದ ವಕ್ಫ್‌ ಬೋರ್ಡ್ ಹ... BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ”