NEWSನಮ್ಮಜಿಲ್ಲೆನಮ್ಮರಾಜ್ಯ

KSRTC- ಪ್ರಾಣ ಪಣಕ್ಕಿಟ್ಟು ಪ್ರಯಾಣಿಕರ ರಕ್ಷಿಸಿದ ಚಾಲನಾ ಸಿಬ್ಬಂದಿ : ಸ್ಮಾರ್ಟ್ ಫೋನ್ ಕೊಟ್ಟು ಅಭಿನಂದಿಸಿದ ಎಂಡಿ ಅನ್ಬುಕುಮಾರ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಂಡು ಕೇಳರಿಯದ ಮಹಾ ಮಳೆಗೆ ಊರಿಗೆ ಊರೇ ನೀರಿನಲ್ಲಿ ಮುಳುಗುತ್ತಿದ್ದು, ಹೆದ್ದಾರಿಗಳೆಲ್ಲಾ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಈ ರಕ್ಕಸ ಮಳೆಯಲ್ಲಿ ಸಾರಿಗೆ ಬಸ್ಸುಗಳನ್ನು ಚಾಲನೆ ಮಾಡುವ ದೊಡ್ಡ ಸವಾಲು ನಮ್ಮ ಚಾಲನಾ ಸಿಬ್ಬಂದಿಗಳದ್ದಾಗಿದೆ.

ಈ ನಡುವೆ ಮಳೆಯ ನೀರಿನಿಂದ ತುಂಬಿಹೋಗಿದ್ದ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಿಲುಕಿದ್ದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರು ತಮ್ಮ ಬಸ್‌ನಲ್ಲಿದ್ದ ಚಪ್ರಯಾಣಿಕರನ್ನು ಪ್ರಾಣ ಪಣಕ್ಕಿಟ್ಟು ರಕ್ಷಿಸಿರುವುದು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ಬಂದಿದೆ.

ಹೌದು! ಕಳೆದ ಆಗಸ್ಟ್‌ 29 ರಂದು ರಾಮನಗರ ಮೈಸೂರು – ಬೆಂಗಳೂರು ಹೆದ್ದಾರಿ ಅಕ್ಷರಶಃ ನೀರಿನಿಂದ ಮುಳುಗಿ ಹೋಗಿತ್ತು. ಆ ವೇಳೆ ಸಂಸ್ಥೆಯ ವಾಹನ ಸಂಖ್ಯೆ ಕೆಎ42-ಎಫ್0502 ಅನುಸೂಚಿ ಸಂಖ್ಯೆ-117 (ಉರಗಹಳ್ಳಿ – ರಾಮನಗರ) ಮಾರ್ಗದಲ್ಲಿ ಚಾಲನೆಯಲ್ಲಿದ್ದಾಗ, ರಾಮನಗರ ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್ ಬಳಿ ಬರುತ್ತಿದ್ದ ಬಸ್‌ ಮಳೆ ನೀರಿಗೆ ಸಿಲುಕಿ ಮುಳುಗಡೆಯಾಗಿತ್ತು. ಸ್ವಲ್ಪ ಮುಂದೆ ಅದೇ ಮಾರ್ಗದಲ್ಲಿ ಮತ್ತೊಂದು ಖಾಸಗಿ ವಾಹನ ಕೆಟ್ಟು ನಿಂತಿದ್ದರಿಂದ ಬಸ್ಸನ್ನು ಮುಂದೆ ಚಲಾಯಿಸಲು ಸಾಧ್ಯವಾಗಲೇ ಇಲ್ಲ.

ಈ ಸಂದರ್ಭದಲ್ಲಿ, ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದರೂ, ತಮಗೆ ಈಜಲು ಬಾರದಿದ್ದರೂ ಸಹ ಎದೆಗುಂದದೆ ಧೈರ್ಯದಿಂದ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸಾರ್ವಜನಿಕರ ಸಹಾಯದೊಂದಿಗೆ ರಕ್ಷಿಸಿ ಸುರಕ್ಷಿತ ಸ್ಥಳ ಸೇರಿಸಿದರು.

ಅಂದರೆ ಆ ಸಮಯದಲ್ಲಿ ಬಸ್‌ ಡೋರ್‌ ಮೂಲಕ ಇಳಿಯಲು ಸಾಧ್ಯವಾಗಲಿಲ್ಲ. ಆದರೆ ಪ್ರಯಾಣಿಕರನ್ನು ಹೇಗಾದರೂ ಮಾಡಿ ರಕ್ಷಿಸಬೇಕು ಎಂದು ಹೊರಟ ರಾಮನಗರ ವಿಭಾಗ ರಾಮನಗರ ಘಟಕದ ಚಾಲನಾ ಸಿಬ್ಬಂದಿ ಲಿಂಗರಾಜು, (ಚಾಲಕ.ಕಂ.ನಿರ್ವಾಹಕ. ಬಿಲ್ಲೆ ಸಂಖ್ಯೆ 2621) ಹಾಗೂ ವೆಂಕಟೇಶ (ಚಾಲಕ ಕಂ ನಿರ್ವಾಹಕ ಬಿಲ್ಲೆ ಸಂಖ್ಯೆ 2863) ಹೇಗೂ ಒಂದು ಏಣಿಯನ್ನು ಹುಡುಕಿ ತಂದು ಓರ್ವ ವೃದ್ಧೆ ಸೇರಿದಂತೆ ಕೆಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಮಳೆನೀರಿನಿಂದ ರಕ್ಷಿಸಿದ್ದರು.

ಬಳಿಕ ಆ ಚಾಲನಾ ಸಿಬ್ಬಂದಿ ಕೇಂದ್ರ‌ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ಅವರನ್ನು ಭೇಟಿ ಮಾಡಿ ನಡೆದ ಘಟನೆಯನ್ನು ವಿವರಿಸಿದರು. ಈಜು ಬಾರದ ನಾವಿಬ್ಬರೂ, ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಉಳಿಸಲು ಕಷ್ಟಪಟ್ಟಿದ್ದೇವೆ. ಅದೇ ರೀತಿ ಪ್ರಯಾಣಿಕರು ಕೂಡ ನಮ್ಮನ್ನು ಉಳಿಸಿದರು ಹಾಗೂ ಈ ಸಂದರ್ಭದಲ್ಲಿ ತಮ್ಮ ಮೊಬೈಲ್ ಫೋನ್‌ಗಳು ಕೂಡ ನೀರು ತುಂಬಿ ಹಾಳಾಗಿ ಹೋಗಿವೆ. ಯಾವ ಅಧಿಕಾರಿಗಳನ್ನು ಸಂರ್ಪಕಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ನಮಗೆ ಆ ಸಮಯದಲ್ಲಿ ನಮ್ಮ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಬೇಕೆಂಬುದು ಮಾತ್ರ ಉದ್ದೇಶವಾಗಿತ್ತೆಂದು ತಿಳಿಸಿದರು.

ಆ ಮಾತನ್ನು ಕೇಳಿದ ವ್ಯವಸ್ಥಾಪಕ ನಿರ್ದೇಶಕರು ಚಾಲಕರನ್ನು ಮನತುಂಬಿ ಹಾರೈಸಿ, ತಮ್ಮ ಈ ಉತ್ಕೃಷ್ಟ ಕಾರ್ಯತತ್ಪರತೆ ಇತರರಿಗೆ ಮಾದರಿ ಹಾಗೂ ಸ್ಫೂರ್ತಿದಾಯಕವಾಗಿದೆ. ದೇವರು ತಮಗೆ ಮತ್ತು ತಮ್ಮ ಪರಿವಾರದವರಿಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

ಈ ಸಮಯದಲ್ಲಿ ಸಿಬ್ಬಂದಿಗಳ ಮೊಬೈಲ್ ಹಾಳಾಗಿದ್ದಕ್ಕೆ , ಇಬ್ಬರಿಗೂ ಒಂದೊಂದು ಸ್ಮಾರ್ಟ್ ಮೊಬೈಲ್ ಫೋನ್ ಅನ್ನು ನಿಗಮದ ವತಿಯಿಂದ ಉಡುಗೊರೆಯಾಗಿ ನೀಡಿ, ಅವರ ಮಾನವೀಯ ನೆಲೆಯಲ್ಲಿನ ಸೇವಾ ಮನೋಭಾವವು ನಿಜಕ್ಕೂ ಅನನ್ಯ, ಅನುಕರಣೀಯವೆಂದು ಬಣ್ಣಿಸಿದರು. ಚಾಲನಾ ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿ, ಅಭಿನಂದನಾ ಪತ್ರವನ್ನು ನೀಡಿ ಶ್ಲಾಘಿಸಿದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...