NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆ ಬಸ್‌ನಲ್ಲಿ ಕಳೆದುಕೊಂಡಿದ್ದ ₹1ಲಕ್ಷ ವಾಪಸ್‌ಕೊಟ್ಟು ಪ್ರಾಮಾಣಿಕತೆ ಮೆರೆದ ನೌಕರರು

ವಿಜಯಪಥ ಸಮಗ್ರ ಸುದ್ದಿ

ಭದ್ರಾವತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಪ್ರಾಮಾಣಿಕತೆ ಮತ್ತು ಮಾನವೀಯತೆ ಮೆರೆಯುವುದರಲ್ಲಿ ಯಾವಾಗಲು ಒಂದು ಹೆಜ್ಜೆ ಮುಂದಿದ್ದಾರೆ ಎಂಬುವುದು ಮತ್ತೆ ಮತ್ತೆ ಅವರು ಮಾಡುವ ಕಾರ್ಯಗಳಿಂದಲೇ ಸಾಬೀತಾಗುತ್ತಿದೆ.

ಅದಕ್ಕೆ ಮತ್ತೊಂದು ತಾಜಾ ನಿದರ್ಶನ ಎಂದರೆ ಇತ್ತೀಚೆಗೆ ಭದ್ರಾವತಿ ಘಟಕದ ವಾಹನ ಸಂಖ್ಯೆ KA 17 F 1837 ಅನುಸೂಚಿ ಸಂಖ್ಯೆ 15/27 ಕೈಮರ ಮಾರ್ಗವಾಗಿ ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಒಂದು ಲಕ್ಷ ರೂಪಾಯಿ ನಗದು ಇದ್ದ ಪರ್ಸ್‌ಅನ್ನು ವಾಪಸ್‌ ಅವರ ಕೈ ಸೇರಿಸುವ ಮೂಲಕ ನಾವು ಪ್ರಾಮಾಣಿಕರು ಎಂದು ಸಾಬೀತುಪಡಿಸಿದ್ದಾರೆ ಚಾಲನಾ ಸಿಬ್ಬಂದಿ.

ಹೌದು! ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸಿದ ಮಹಿಳೆಯೊಬ್ಬರು ಇಳಿಯುವಾಗ ತಮ್ಮ ಪರ್ಸ್‌ ಬಿಟ್ಟಿದ್ದು ಆ ಪರ್ಸ್‌ನಲ್ಲಿ ಒಂದು ಲಕ್ಷ ನಗದು ಹಣ ಇತ್ತು. ಆ ಮಹಿಳೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದರು. ಬಸ್‌ ನಿಲ್ದಾಣಕ್ಕೆ ಬಸ್‌ ಬರುತ್ತಿದ್ದಂತೆ ಆ ಮಹಿಳೆ ತಾನು ತಂದಿದ್ದ ಹಣವಿದ್ದ ಪರ್ಸ್‌ ಮರೆತು ಇಳಿದು ಹೋಗಿದ್ದರು. ಬಳಿಕ ನಿರ್ವಾಹಕರಾದ ಸೋಮಪ್ಪ ಭಜಂತ್ರಿ ಸೀಟ್‌ನಲ್ಲೇ ಇದ್ದ ಪರ್ಸ್‌ವೊಂದನ್ನು ಗಮನಿಸಿ ಚಾಲಕ ವಿಜಯ ಕುಮಾರ್‌ ಅವರಿಗೆ ತಿಳಿಸಿದ್ದಾರೆ.

ಇತ್ತ ಬಸ್‌ ಇಳಿದು ಸ್ವಲ್ಪದೂರ ಹೋಗಿದ್ದ ಆ ಮಹಿಳೆ ಪರ್ಸ್‌ ಕಳೆದುಕೊಂಡಿರುವುದು ಅರಿವಾಗಿ ವಾಪಸ್‌ ಬಸ್‌ ಬಳಿ ಬಂದು ಹುಡುಕಾಡುತ್ತಿದ್ದರು. ಆ ವೇಳೆ ಸಂಸ್ಥೆಯ ಚಾಲಕರಾದ ವಿಜಯ ಕುಮಾರ D.K. ಬಿ. ಸಂಖ್ಯೆ-6066 ಹಾಗೂ ನಿರ್ವಾಹಕ ಸೋಮಪ್ಪ ಭಜಂತ್ರಿ ಚಾ/ನಿ-2046 ಅವರು ಕರೆದು ವಿಚಾರಿಸಿದಾಗ ಆಕೆ ಹಣ ಕಳೆದುಕೊಂಡಿರುವುದು ಖಚಿತವಾಯಿತು. ಸರಿ ನೀವು ಭಯಪಡುವ ಅಗತ್ಯವಿಲ್ಲ ಎಂದು ಹೇಳಿ ಹಣ ಕಳೆದುಕೊಂಡ ಆ ಮಹಿಳೆಗೆ ಧೈರ್ಯತುಂಬಿ 1ಲಕ್ಷ ರೂ ಇದ್ದ ಪರ್ಸ್‌ಅನ್ನು ತೆಗೆದು ಆಕೆಯ ಕೈಗಿತ್ತರು.

ಹಣದ ಪರ್ಸ್‌ ಸಿಕ್ಕ ಖುಷಿಯಲ್ಲಿ ಆ ಮಹಿಳೆ ಚಾಲಕ ಮತ್ತು ನಿರ್ವಾಹಕರಿಗೆ ಅಭಿನಂದನೆ ತಿಳಿಸುತ್ತಿದ್ದಂತೆ ಕಣ್ಣಾಲಿಗಳು ತೇವವಾದವು. ಈ ಹಣ ನನಗೆ ಸಿಗದಿದ್ದಿದ್ದರೆ ಶಸ್ತ್ರಚಿಕಿತ್ಸೆ ಆಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಸಿಬ್ಬಂದಿಯ ಪ್ರಾಮಾಣಿಕತೆಗೆ ತಲೆ ಬಾಗಿದರು.

ಇತ್ತ ಒಂದುವೇಳೆ ಚಾಲಕ ಮತ್ತು ನಿರ್ವಾಹಕರು ಪರ್ಸ್‌ ನೋಡೆ ಇಲ್ಲ ಎಂದು ಹೇಳಿದ್ದರೆ ಅದನ್ನು ನಾವು ನೀವು ಎಲ್ಲ ನಂಬಲೇ ಬೇಕಿತ್ತು. ಕಾರಣ ಆ ಮಹಿಳೆ ಎಲ್ಲಿ ಪರ್ಸ್‌ ಕಳೆದುಕೊಂಡರು ಎಂಬುವುದು ಯಾರಿಗೂ ಗೊತ್ತಿಲ್ಲ. ಜತೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹಪ್ರಯಾಣಿಕರಲ್ಲಿ ಯಾರಿಗಾರದರೂ ಆ ಪರ್ಸ್‌ ಸಿಕ್ಕಿರಬಹುದು ಎಂದು ಸುಮ್ಮನಾಗುತ್ತಿದ್ದೆವು.

ಆದರೆ ಚಾಲಕ ಮತ್ತು ನಿರ್ವಾಹಕರು ಆ ರೀತಿ ಮಾಡದೆ ತಮಗೆ ಸಿಕ್ಕ ಒಂದು ಲಕ್ಷ ರೂ.ಗಳಿದ್ದ ಪರ್ಸ್‌ಅನ್ನು ಸಂಬಂಧಪಟ್ಟವರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಜತೆಗೆ ಮಾನವೀಯತೆ ಮೆರೆದು ಇತರರಿಗೂ ಮಾದರಿಯಾಗಿದ್ದಾರೆ. ಒಟ್ಟಾರೆ ಬಸ್‌ನಲ್ಲಿ ಈ ರೀತಿ ಹಣ ಆಭರಣಗಳನ್ನು ಕೆಳದುಕೊಂಡ ಹಲವಾರು ಪ್ರಯಾಣಿಕರಿಗೆ ಅವರ ವಸ್ತುಗಳನ್ನು ಅವರಿಗೇ ಮರಳಿಸುವ ಮೂಲಕ ಸಾರಿಗೆ ಸಂಸ್ಥೆಯಲ್ಲಿ ಹಲವಾರು ನೌಕರರು ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ. ಇದು ಹೆಮ್ಮೆಯ ವಿಷಯ.

ಇನ್ನು ಈ ರೀತಿ ಪ್ರಾಮಾಣಿಕತೆ ಮೆರೆಯುತ್ತಿರುವ ನೌಕರರನ್ನು ಗುರುತಿಸಿ ಅವರನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ ಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಸಾರಿಗೆ ಸಚಿವರು ಗೌರವಿಸುವ ಕೆಲಸವನ್ನು ಮಾಡಬೇಕು. ಜತೆಗೆ ಅವರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ದೊರಕಿಸಿಕೊಡಲು ಮುಂದಾಗಬೇಕು ಎಂಬ ಅಭಿಪ್ರಾಯವನ್ನು ಪ್ರಜ್ಞಾವಂತ ಮಂದಿ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...