
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಾರಿಗೆ ನೌಕರರ ಪರವಾಗಿ ಸರ್ಕಾರದ ಮತ್ತು ಆಡಳಿತ ಮಂಡಳಿ ಮುಂದೆ ಮಂಡಿಸಬೇಕಿರುವ ಕೆಲ ಬೇಡಿಕೆಗಳನ್ನು ಸರ್ವ ಸಂಘಟನೆಗಳ ಸಭೆ ವಿಫಲವತೆಯ ನಡುವೆಯೂ ಕೆಲ ಮುಖಂಡರು ತೆಗೆದುಕೊಂಡ ನಿರ್ಧಾರಗಳು.
ವಿಲ್ಸನ್ ಗಾರ್ಡನ್‌ನಲ್ಲಿ ನಡೆದ ಸರ್ವ ಸಂಘಟನೆಯ ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯಬೇಕಿತ್ತು. ಆದರೆ, ಬಣಗಳ ಬಡಿದಾಟದಿಂದ ಅದು ನಿರೀಕ್ಷೆಗೂ ಮೀರಿ ವಿಫಲವಾಯಿತು. ಇದರ ನಡುವೆಯೂ ಕೆಲ ಬೇಡಿಕೆಗಳ ಈಡೇರಿಸಿಕೊಳ್ಳುವುದಕ್ಕೆ ಕೆಲ ಸಂಘಟನೆಗಳ ಮುಖಂಡರು ಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕುಟುಂಬದ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ವಲಯ ಅಧ್ಯಕ್ಷ ರುದ್ರೇಶ್ ಎಸ್. ನಾಯಕ ತಿಳಿಸಿದ್ದಾರೆ.
ಸರ್ವ ಸಂಘಟನೆಯ ಪ್ರಮುಖ ಕಾರ್ಮಿಕ ಮುಖಂಡರು ಸಭೆಯಲ್ಲಿ ಒಗ್ಗೂಟ್ಟಿನ ಮಂತ್ರವನ್ನು ಪಠಿಸಿದರು. ಆ ಮೂಲಕ ನಾವೆಲ್ಲ ಸಾರಿಗೆ ಮುಖಂಡರು ಸಾರಿಗೆ ನೌಕರರ ಪರವಾಗಿ ನಾವು ನಿಮ್ಮ ಜತೆಯಲ್ಲಿ ಇದ್ದೇವೆ ಎಂದು ಘೋಷಣೆ ಕೂಗುವ ಮುನ್ನವೇ ಬಣ ಬಣಗಳ ನಡುವೆ ತಿಕ್ಕಾಟ ಉಂಟಾಯಿತು.
ಈ ವೇಳೆ ಕೆಲವು ಸಣ್ಣ ಪುಟ್ಟ ಅಹಿತಕರ ಘಟನೆಗಳು ನಡೆದವು. ಅದನ್ನು ಹೊರೆತು ಪಡಿಸಿ ಸಭೆ ಸಂಪೂರ್ಣವಾಗಿ ಯಶ ಕಂಡಿಲ್ಲವಾದರೂ ಸಭೆಯಲ್ಲಿ ಕೆಲವು ಮಹತ್ವದ ಅಂಶಗಳನ್ನು ಸಾರಿಗೆ ನೌಕರರು ಚರ್ಚೆ ಮಾಡಿದ್ದರಿಂದ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲು ನೌಕರರು ಸಲಹೆ ನೀಡಿದರು.
ಆ ಅಂಶಗಳು ಏನೆಂದರೇ? 2020ರ ವೇತನ ಹೆಚ್ಚಳದ 38 ತಿಂಗಳುಗಳ ಹಿಂಬಾಕಿ ವೇತನವನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು. ಅಲ್ಲದೆ 1.1.2024ರ ವೇತನ ಹೆಚ್ಚಳ ಮತ್ತು ಅದರ ಹಿಂಬಾಕಿ 14 ತಿಂಗಳುಗಳದ್ದುನ್ನು ಕೊಡಬೇಕು.
ಮುಷ್ಕರ ಸಮಯದಲ್ಲಿ ವಜಾಗೊಂಡಿರುವ ನೌಕರರನ್ನು, 6.4.2021ರ ಯಥಾವತ್ತಾಗಿ ಪರಿಗಣಿಸಬೇಕು. ಘಟಕಗಳ ಮಟ್ಟದಲ್ಲಿ ಮೂಲಭೂತ ಸೌಕರ್ಯಳಿಗೆ ಒತ್ತುಕೊಡಬೇಕು. ಕರ್ತವ್ಯದ ಮೇಲೆ ಪ್ರಯಾಣಿಕರು ನೌಕರರ ಮೇಲೆ ಮಾಡುತ್ತಿರು ಹಲ್ಲೆ, ದೌರ್ಜನ್ಯಕ್ಕೆ ಕಡಿವಾಣ ಹಾಕುವ ನಿಯಮ ನಿಗಗಳಲ್ಲಿ ಕೂಡಲೇ ಜಾರಿಯಾಗಬೇಕು.
ಈ ಎಲ್ಲ ವೂ ಸೇರಿದಂತೆ ಹಲವು ಸಮಸ್ಯೆಗಳಿಗೆ ವೇದಿಕೆಯ ಮೇಲೆ ಇದ್ದ ಬಹತೇಕ ಎಲ್ಲ ಸಂಘಟನೆಯ ಮುಖಂಡರು ಒಪ್ಪಿಗೆ ಸೂಚಿಸಿ ಈ ನಿರ್ಣಯಗಳನ್ನು ಮುಖ್ಯಮಂತ್ರಿಗಳು ಏ.5ರಂದು ಕರೆದಿರುವ ಸಭೆಯಲ್ಲಿ ಮಂಡಿಸಿ ಪ್ರಾಮಾಣಿಕವಾಗಿ ಈಡೇರಿಸಲು ಸಮ್ಮತದಿಂದ ತಿರ್ಮಾನಿಸಿದ್ದಾರೆ ಎಂದು ರುದ್ದೇಶ್ ಎಸ್.ನಾಯಕ ತಿಳಿಸಿದ್ದಾರೆ.