CRIMENEWSನಮ್ಮರಾಜ್ಯ

ರಾಜ್ಯಾದ್ಯಂತ 7 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ  40 ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ದಾಖಲೆಗಳು ವಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯಾದ್ಯಂತ 40 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದ್ದು, ಭ್ರಷ್ಟರ ಭೇಟಿಯಾಡುತ್ತಾ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ಭಷ್ಟ್ರ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಳು ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಈ ಮೂಲಕ ಮತ್ತೆ ಭಷ್ಟ್ರ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮಾಡಿದೆ.

ಏಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳು ಸೇರಿದಂತೆ 40 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅದರಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಯಾದಗಿರಿ, ವಿಜಯಪುರ, ತುಮಕೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 7 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ.

ರಾಜ್ಯಾದ್ಯಂತ 7 ಅಧಿಕಾರಿಗಳಿಗೆ ಸೇರಿದಂತೆ ಮನೆ, ಕಚೇರಿ, ಗೋಡೋನ್, ಸಂಬಂಧಿಕರ ಮನೆಗಳು ಸೇರಿದಂತೆ 40 ಕಡೆಗಳಲ್ಲಿ ದಾಳಿ ಮಾಡಲಾಗಿದ್ದು ಅದರಲ್ಲಿ ಪ್ರಮುಖವಾಗಿ ಬೆಂಗಳೂರಿನ 12 ಕಡೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ಕಡೆ, ಯಾದಗಿರಿ 5, ವಿಜಯಪುರ 4 ಹಾಗೂ ಮಂಗಳೂರಿನ 4 ಕಡೆ ಸೇರಿದಂತೆ 40 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟರ ಹೆಡೆಮುರಿ ಕಟ್ಟುತ್ತಿದ್ದಾರೆ.

ಯಾವಯಾವ ಅಧಿಕಾರಿಗಳ ಮನೆ ಕಚೇರಿಗಳ ಮೇಲೆ ದಾಳಿ : 1) ರಾಜಶೇಖರ್, ನಿರ್ಮಿತಿ ಕೇಂದ್ರದ‌ ನಿರ್ದೇಶಕ, ತುಮಕೂರು. 2) ಮಂಜುನಾಥ್, ಸರ್ವೆ ಮೇಲ್ವಿಚಾರಕ, ದ.ಕ. ಮಂಗಳೂರು. 3) ರೇಣುಕಾ, ಸಾತರ್ಲೆ, ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಿಜಯಪುರ. 4) ಮುರಳಿ ಟಿ.ವಿ. ಹೆಚ್ಚುವರಿ ನಿರ್ದೇಶಕ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಬೆಂಗಳೂರು ನಗರ.

5) ಎಚ್.ಆರ್. ನಟರಾಜ್, ಇನ್ಸ್‌ಪೆಕ್ಟರ್, ಕಾನೂನು ಮಾಪನಶಾಸ್ತ್ರ, ಬೆಂಗಳೂರು. 6) ಅನಂತ್ ಕುಮಾರ್ SDA, ಹೊಸಕೋಟೆ ತಾಲೂಕು ಕಚೇರಿ, ಬೆಂಗಳೂರು ಗ್ರಾಮಾಂತರ ಹಾಗೂ 7) ಉಮಾಕಾಂತ್, ಶಹಾಪುರ ತಾಲೂಕು, ಯಾದಗಿರಿ ಈ ಅಧಿಕಾರಿಗಳ ಮನೆ ಹಾಗೂ ಕಚೇರಿಗಳು ಸೇರಿದಂತೆ ಸಂಬಂಧಿಕರ ಮನೆ ಕಚೇರಿಗಳ ಮೇಲೂ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಸೀಲುಸುತ್ತಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ಅತೀ ಶೀಘ್ರದಲ್ಲೇ ಶೇ.15ರಿಂದ 20ರಷ್ಟು ಬಸ್‌ ಪ್ರಯಾಣ ದರ ಏರಿಕೆ- ಸುಳಿವುಕೊಟ್ಟ ಮುಖ್ಯಮಂತ್ರಿ ಡಿಕೆಶಿ ವಿದ್ಯುತ್‌ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸ... ಇದು ನಿಗಮಗೆ ಗೊತ್ತೆ? ಗ್ರಾಚ್ಯುಟಿ, ರಜೆ ನಗದೀಕರಣ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸುವಂತಿಲ್ಲ 4-6 ತಿಂಗಳಿನಲ್ಲಿ ಬೆಂಗಳೂರಿನ ರಸ್ತೆಗಳಿಗೆ ಹೊಸ ಲುಕ್‌: ಸಚಿವ ಕೃಷ್ಣ ಬೈರೇಗೌಡ BMTC ಬಸ್‌- ಬೈಕ್‌ಗೆ ಡಿಕ್ಕಿ: ಬೈಕ್‌ನಲ್ಲಿದ್ದ ಮಗು, ದಂಪತಿ ಸೇರಿ ಮೂವರು ಮೃತ ಮತ್ತೊಂದು ಮಗುವಿನ ಸ್ಥಿತಿ ಚಿಂತಾಜನಕ BMTC: ಮುಂದಿನ ವರ್ಷದಿಂದ ನಿರ್ವಾಹಕರ ಮುಂಬಡ್ತಿ ಜೇಷ್ಠತಾ ಪಟ್ಟಿಯಲ್ಲಿ ನಿಧನ, ವಜಾ, ನಿವೃತ್ತರ ಹೆಸರು ಸೇರ್ಪಡೆ ಆಗಲ್ಲ-... ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಇಂದು KSRTC ನೂತನ ಎಂಡಿಯಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಿದೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಲೇ ಕಡಿತಗೊಳಿಸಿ – ಕೇಂದ್ರಕ್ಕೆ ಅಶೋಕ್ ಆಗ್ರಹ