ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‘ಹೈ-ಟೆಕ್ ಡಯಾಗ್ನೋಸ್ಟಿಕ್ ಸರ್ವೀಸಸ್ – ಎಕ್ಸ್ಪ್ರೆಸ್ ಕ್ಲಿನಿಕ್ʼ ಹಾಗೂ ‘ಪಾದಚಾರಿ ಮೇಲುಸೇತುವೆ’ ಹಾಗೂ ‘ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಬಿಎಂಪಿ ಸಾರ್ವಜನಿಕ ಆಸ್ಪತ್ರೆ ಹಾಗೂ MGPL ಸೌಲಭ್ಯ ಘಟಕ ಲೋಕಾರ್ಪಣೆ’ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು.
ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ, ವಲಯ ಆಯುಕ್ತ ಡಾ. ದೀಪಕ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹೈ-ಟೆಕ್ ಡಯಾಗ್ನೋಸ್ಟಿಕ್ ಸರ್ವೀಸಸ್ – ಎಕ್ಸ್ಪ್ರೆಸ್ ಕ್ಲಿನಿಕ್ : ಪಾಲಿಕೆ ವತಿಯಿಂದ ವಾರ್ಡ್ ಸಂಖ್ಯೆ-64(ಹಳೇ ಸಂಖ್ಯೆ: 65) ಕಾಡು ಮಲ್ಲೇಶ್ವರ ಎಂ.ಕೆ.ಕೆ ರಸ್ತೆ, 5ನೇ ಮುಖ್ಯರಸ್ತೆಯಲ್ಲಿನ ಪಾಲಿಕೆಯ ಕಟ್ಟಡದ ಸೇವಾ ಕೇಂದ್ರದಲ್ಲಿ ಬಿಬಿಎಂಪಿ ಮತ್ತು ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್ ಪ್ರೈ. ಲಿ. ಸಹಯೋಗದೊಂದಿಗೆ “ಹೈ-ಟೆಕ್ ಡಯಾಗ್ನೋಸ್ಟಿಕ್ ಸರ್ವೀಸಸ್ – ಎಕ್ಸ್ಪ್ರೆಸ್ ಕ್ಲೀನಿಕ್” ಪ್ರಾರಂಭಿಸಲಾಯಿತು.
- ಲ್ಯಾಬೋರೇಟರಿ, ಕ್ಷ-ಕಿರಣ, ಅಲ್ಟಾçಸೌಂಡ್ ಸ್ಕ್ಯಾನಿಂಗ್, ಪಿ.ಎಫ್.ಟಿ, ಇ.ಸಿ.ಜಿ. ಕಟ್ಟಡದ ನವೀಕರಣಕ್ಕಾಗಿ 2019-20ನೇ ಸಾಲಿನಲ್ಲಿ ಒಟ್ಟು ರೂ. 205.00 ಲಕ್ಷಗಳ ಅನುದಾನವನ್ನು 14ನೇ ಹಣಕಾಸಿನ ಆಯೋಗದಡಿಯಲ್ಲಿ ಕೈಗೊಳ್ಳಲಾಗಿರುತ್ತದೆ.
- ಕಟ್ಟಡದ ವಿಸ್ತೀರ್ಣ- 347.88 ಚದರ ಮೀಟರ್. ಸಾರ್ವಜನಿಕರು ಈ ಸೇವೆಯನ್ನು ಬಳಸಲು ಬಿ.ಪಿ.ಎಲ್ ಕಾರ್ಡ್ ಇರುವವರಿಗೆ ಶೇ. 50 ರಷ್ಟು ರಿಯಾಯಿತಿ ಮತ್ತು ಎ.ಪಿ.ಎಲ್ ಕಾರ್ಡ್ ಇರುವವರಿಗೆ ಶೇ. 30 ರಷ್ಟು ರಿಯಾಯಿತಿ ಇರಲಿದೆ.
ಪಾದಚಾರಿ ಮೇಲುಸೇತುವೆ(Skywalk) ಉದ್ಘಾಟನೆ: ಪಾಲಿಕೆ ವತಿಯಿಂದ ರಾಜ್‌ಮಹಲ್ ಗುಟ್ಟಹಳ್ಳಿ ವಾರ್ಡ್-65ರ(ಹಳೇ ವಾರ್ಡ್ ಸಂಖ್ಯೆ-64) ಬಳ್ಳಾರಿ ರಸ್ತೆಯಲ್ಲಿನ ಸಾರ್ವಜನಿಕ ಹಿತಯದೃಷ್ಟಿಯಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವ(PPP) ಮಾದರಿ ಅಡಿಯಲ್ಲಿ ಮೆ. ಅರ್ಕೋಡ್ ಡಿಸ್‌ಪ್ಲೇ ಸರ್ವಿಸ್ ಪ್ರೈ. ಲಿ. ಸಂಸ್ಥೆ ವತಿಯಿಂದ ಹೊಸದಾಗಿ ನಿರ್ಮಿಸಲಾಗಿರುವ ‘ಪಾದಚಾರಿ ಮೇಲುಸೇತುವೆ (Skywalk)’ಯ ಉದ್ಘಾಟಿಸಲಾಯಿತು.
- ವಾಕ್ ವೇ ಉದ್ದ 30 ಮೀ. ಹಾಗೂ ಅಗಲ 3 ಮೀ. ಸಾರ್ವಜನಿಕರ ಓಡಾಟಕ್ಕಾಗಿ ಎರಡೂ ಬದಿಯಲ್ಲಿ ಹತ್ತಲು ಎಸ್ಕಲೇಟರ್ ನಿರ್ಮಾಣ. ಪಾದಚಾರಿ ಮೇಲುಸೇತುವೆಯನ್ನು ಮೆ.ಅರ್ಕೋಡ್ ಡಿಸ್‌ಪ್ಲೇ ಸರ್ವಿಸ್ ಪ್ರೈ. ಲಿ. ಸಂಸ್ಥೆಯು, ಪಾಲಿಕೆಗೆ ಪ್ರತಿ ವರ್ಷ ರೂ. 9,44,000 ಗಳನ್ನು “ನೆಲ ಬಾಡಿಗೆ” ರೂಪದಲ್ಲಿ ಪಾವತಿಸಬೇಕಿರುತ್ತದೆ. ನಿರ್ವಹಣೆ ಅವಧಿ 30 ವರ್ಷ.
ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆ ಹಾಗೂ MHPL ಸೌಲಭ್ಯ ಘಟಕಕ್ಕೆ ಚಾಲನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ರಾಜ್‌ಮಹಲ್ ಗುಟ್ಟಹಳ್ಳಿ ವಾರ್ಡ್-65ರ(ಹಳೇ ವಾರ್ಡ್ ಸಂಖ್ಯೆ-64) ಪ್ಯಾಲೆಸ್ ಗುಟ್ಟಹಳ್ಳಿ ವೃತ್ತದಲ್ಲಿನ ‘ನವೀಕರಿಸಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಬಿಎಂಪಿ ಸಾರ್ವಜನಿಕ ಆಸ್ಪತ್ರೆ ಹಾಗೂ ವೈದ್ಯಕೀಯ ಗ್ಯಾಸ್ ಪೈಪ್‌ಲೈನ್ ಸಹಿತದ ಆಮ್ಲಜನಕ ಉತ್ಪಾದಕ(MGPL)ದ ಸೌಲಭ್ಯ ಘಟಕ’ ಉದ್ಘಾಟನೆ.
- ಕಟ್ಟಡದ ನೆಲ ಮಹಡಿಯ ನಿರ್ಮಾಣವನ್ನು ಪಾಲಿಕೆಯ ಅನುದಾನದಡಿಯಲ್ಲಿ ಒಟ್ಟು ರೂ. 100.00 ಲಕ್ಷಗಳ ಅನುದಾನದಲ್ಲಿ ಕೈಗೊಳ್ಳಲಾಗಿರುತ್ತದೆ. ಕಟ್ಟಡದ ವಿಸ್ತೀರ್ಣ- 376.45 ಚದರ ಮೀಟರ್.
- ನೆಲ ಮಹಡಿಯಲ್ಲಿ ಪ್ರಯೋಗಾಲಯ, ತಜ್ಞ ವೈದ್ಯರ ಸೇವೆ, ಎಕ್ಸ್ ರೇ, ದಂತ ಚಿಕಿತ್ಸಾಲಯ, ನೇತ್ರ ಚಿಕಿತ್ಸಾಲಯ, ಸ್ಪೆಷಲಿಸ್ಟ್ ವರ್ಚುವಲ್ ಸ್ಮಾರ್ಟ್ ಕ್ಲಿನಿಕ್, ಪಿಸಿಯೋಥೆರೆಪಿ, ಇ-ಆಸ್ಪತ್ರೆ AB-Ark ಯೋಜನೆ, ಪ್ರದಾನ ಮಂತ್ರಿ ಜನೌಷಧಿ ಕೇಂದ್ರ).
- ವೈದ್ಯಕೀಯ ತಜ್ಞರು, ಡಯಾಗ್ನೋಸ್ಟಿಕ್ ಹಾಗೂ ಆರೋಗ್ಯ ಸಂಬಂಧಿತ ಸಂಯೋಜಿತ ಸೇವೆಗಳುಳ್ಳ ಸಕಲ ಆರೋಗ್ಯ ಸೌಲಭ್ಯಗಳಿವೆ. ಉಚಿತ ಆರೋಗ್ಯ ಸೇವೆ.