CrimeNEWSದೇಶ-ವಿದೇಶ

ಅಪ್ರಾಪ್ತರ ಮಿಲನ: ಮಗುವಿಗೆ ಜನ್ಮ ನೀಡಿ, ಪೊದೆಗೆ ಎಸೆದ ವಿದ್ಯಾ ರ್ಥಿನಿ

ವಿಜಯಪಥ ಸಮಗ್ರ ಸುದ್ದಿ

ಕಡಲೂರು : ಅಪ್ರಾಪ್ತರ ಮಿಲನದಿಂದ ಮಗು ಜನಿಸಿದ್ದು ಆ ಮಗುವನ್ನು ಪೋಷಣೆ ಮಾಡಲು ಹೆದರಿದ ವಿದ್ಯಾರ್ಥಿನಿ ಶಾಲೆಯ ಬಳಿಯ ಪೊದೆಗೆ ಎಸದು ಹೋಗಿರುವ ಘಟನೆ ಭುವನ ಗಿರಿಯಲ್ಲಿ ನಡೆದಿದೆ.

ಆ ತಾನೆ ಶಾಲೆಯ ಶೌಚಾಲಯದಲ್ಲಿ ಮಗು ಜನಿಸಿದೆ. ಕೂಡಲೇ ಅದನ್ನು ಶಿಕ್ಷಕರಿಗೆ ತಿಳಿಯದಂತೆ ತಂದು ಪೊದೆಗೆ ಎಸದು ವಿದ್ಯಾರ್ಥಿನಿ ಮನೆ ಹೋಗಿದ್ದಾಳೆ. ಇನ್ನು ಮಗು ಪೊದೆಯಲ್ಲಿ ಎಸೆದಿದ್ದರಿಂದ ಅಲ್ಲೇ ಅಸುನೀಗಿದೆ.

ಘಟನೆ ವಿವರ: ತಮಿಳುನಾಡಿನ ಕಡಲೂರು ಜಿಲ್ಲೆಯ ಭುವನಗಿರಿಯ ಶಾಲೆಯೊಂದರಲ್ಲಿ ಕಲಿಯುತ್ತಿರುವ ಆಕೆ ಇನ್ನು 11ನೇ ತರಗತಿಯ ವಿದ್ಯಾರ್ಥಿನಿ. ಆದರೆ, ಹದಿಹರೆಯದ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದು, ಆ ಮಗುವನ್ನು ತನ್ನ ಶಾಲೆಯ ಬಳಿ ಪೊದೆಯಲ್ಲಿ ಬಿಟ್ಟು ಹೋಗಿದ್ದಾಳೆ.

ಘಟನೆಗೆ ಸಂಬಂಧಿಸಿ ಪೊದೆಯಲ್ಲಿ ನವಜಾತ ಶಿಶುವಿನ ಮೃತದೇಹವನ್ನು ನೋಡಿದ ವಿದ್ಯಾ ರ್ಥಿಗಳು ಶಾಲಾ ಶಿಕ್ಷಕರಿಗೆ ತಿಳಿಸಿದ್ದಾರೆ. ಆನಂತರ ಶಾಲೆಯ ಶಿಕ್ಷಕರು ಪೊಲೀಸರಿಗೆಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಶಿಶುವಿನ ಹೊಕ್ಕಳು ಬಳ್ಳಿ ಸರಿಯಾಗಿ ತುಂಡಾಗದ ಕಾರಣ ಶಾಲೆಯ ಆವರಣದಲ್ಲೇ ಮಗು ಜನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಾಲೆಯಲ್ಲಿರುವ ವಿದ್ಯಾ ರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಆಗ ಆಘಾತಕಾರಿ ವಿಷಯವೊಂದು ಬಹಿರಂಗವಾಗಿದೆ. ಕಾಲೇಜಿನ 11ನೇ ತರಗತಿಯ ವಿದ್ಯಾ ರ್ಥಿನಿಯು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದು, ನಂತರ ಮಗುವನ್ನು ಶಾಲೆಯ ಬಳಿ ಇರುವ ಪೊದೆ ಬಳಿ ಬಿಟ್ಟು ಮನೆಗೆ ತೆರಳಿದ್ದು ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ. ಆ ಮಗುವಿನ ಜನ್ಮಕ್ಕೆ ಕಾರಣವಾಗಿರುವುದು 10ನೇ ತರಗತಿಯ ವಿದ್ಯಾರ್ಥಿ. ಆತನಿಂದ ಆಕೆ ಗರ್ಭಿಣಿಯಾಗಿದ್ದಳು ಎಂಬ ಸತ್ಯ ಹೊರಬಂದಿದೆ.

ಘಟನೆಗೆ ಸಂಬಂಧಿಸಿ 11ನೇ ತರಗತಿಯ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್