CrimeNEWSನಮ್ಮಜಿಲ್ಲೆ

ಜಲಮಂಡಳಿಯವರು ರಸ್ತೆಯಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಚೇಂಬರ್‌ಗೆ ಮ್ಯೂಸಿಷಿಯನ್ ಬಲಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಲಮಂಡಳಿಯವರು ರಸ್ತೆಯಲ್ಲಿ ಎತ್ತರಕ್ಕೆ ಚೇಂಬರ್ ಪ್ಲೇಟ್ ನಿರ್ಮಿಸಿದ್ದರ ಪರಿಣಾಮ ಬೈಕ್‌ ಸವಾರ ಬಿದ್ದು ಮೃತಪಟ್ಟಿರುವ ಘಟನೆ ವೈಟ್ ಫೀಲ್ಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಮೂಲದ ಪ್ರಸ್ತುತ ಬೆಂಗಳೂರಿನ ಗಿರಿನಗರದ ನಿವಾಸಿ ಬೆಸ್ಕಾಂ ನೌಕರರ ಹಾಗೂ ಮ್ಯೂಸಿಷಿಯನ್ ವಿವೇಕ್ (27) ಮೃತರು ಎಂದು ತಿಳಿದು ಬಂದಿದೆ.

ವಿವೇಕ್ ಮದುವೆಯಾಗಿ 9 ತಿಂಗಳಾಗಿತ್ತು. ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದಾರೆ. ತನ್ನ ಮಗು ಹೊರ ಪ್ರಪಂಚಕ್ಕೆ ಬರುವುದನ್ನು ನೋಡುವ ಮುನ್ನವೇ ಪಾಪಿಗಳು ನಿರ್ಮಿಸಿರುವ ಅವೈಜ್ಞಾನಿಕ ಚೇಬರ್‌ನಿಂದ ಅಪ್ಪ ಕಣ್ಣು ಮುಚ್ಚಿದ್ದಾರೆ. ಇದು ನಮ್ಮ ಅಧಿಕಾರಿಗಳ ನಡೆಗೆ ಹಿಡಿದ ಕನ್ನಡಿಯಾಗಿದೆ.

ಈ ಅಪಘಾತಕ್ಕೆ ಜಲಮಂಡಳಿ ಅಧಿಕಾರಿಗಳು ಅವೈಜ್ಞಾನಿಕವಾಗಿ ರಸ್ತೆಯಲ್ಲಿ ಎತ್ತರಕ್ಕೆ ಚೇಂಬರ್ ಪ್ಲೇಟ್ ನಿರ್ಮಿಸಿದ್ದೆ ಕಾರಣ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಚೇಂಬರ್ ಪ್ಲೇಟ್ ಮೇಲೆ ಬೈಕ್‌ ಹತ್ತಿಸಿ ಕೆಳಗೆ ಇಳಿಸುವಾಗ ವಾಹನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ವಿವೇಕ್ ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದರೆ ಯಾವ ರೀತಿ ಚೇಂಬರ್‌ ನಿರ್ಮಿಸಿದ್ದಾರೆ ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಭಯವಾಗುತ್ತದೆ.

ಮೃತ ವಿವೇಕ್ ಬೆಸ್ಕಾಂ ಉದ್ಯೋಗಿಯಾಗಿದ್ದು, ಮ್ಯೂಸಿಷಿಯನ್ ಆಗಿಯೂ ಕೂಡ ಗುರುತಿಸಿಕೊಂಡಿದ್ದರು. ಕೆಲಸದ ನಿಮಿತ್ತ ಶುಕ್ರವಾರ ಪಣತ್ತೂರಿಗೆ ಹೋಗಿದ್ದ ವಿವೇಕ್ ಹಿಂದಿರುಗುವ ವೇಳೆ ಅಪಘಾತಕ್ಕೀಡಾಗಿದ್ದಾರೆ. ಮ್ಯೂಸಿಷಿಯನ್ ಆಗಿದ್ದ ವಿವೇಕ್ ದುಬೈ, ಜಪಾನ್ ಸೇರಿದಂತೆ ಹಲವು ಕಡೆ ಕಾರ್ಯಕ್ರಮ ನೀಡುತ್ತಿದ್ದರು. ಕನ್ನಡದ ಹಲವು ವಾಹಿನಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಮ್ಯೂಸಿಕ್ ಜತೆಗೆ ಬೆಸ್ಕಾಂನಲ್ಲೂ ಕೆಲಸ ಮಾಡುತ್ತಿದ್ದರು.

ವಿವೇಕ್ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಜೆಡಿಎಸ್ ರಾಜ್ಯ ವಕ್ತಾರೆ ನಜ್ಮಾ ನಜೀರ್ ಅವರು ಸಹ ವಿವೇಕ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಇನ್ನು ಚೇಂಬರ್ ಪ್ಲೇಟ್ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಹೋದ ಜೀವ ಮತ್ತೆ ಬರುತ್ತದೆಯೇ. ಯಾರೋ ಮಾಡಿದ ತಪ್ಪಿಗೆ ಮತ್ತ್ಯಾರದೋ ಪ್ರಾಣ ಹೋಗುತ್ತದೆ.

ಆದರೆ, ಇಂಜಿನಿಯರ್‌ ಪದವಿ ಪಡೆದು ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳಿವಳಿಕೆ ಇರುವ ಕೆಲ ಉದಾಸೀನ ಅಧಿಕಾರಿಗಳ ನಡೆಯಿಂದ ಈ ರೀತಿಯ ಚೇಂಬರ್ ಪ್ಲೇಟ್ ನಿರ್ಮಿಸಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಜೀವಕ್ಕೆ ಕುತ್ತು ತರುವುದು ಯಾವ ನ್ಯಾಯ. ಇನ್ನಾರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಾಳಜಿ ತೆಗೆದುಕೊಂಡು ಜನರ ಜೀವ ಹೋಗದಂತೆ ನೋಡಿಕೊಳ್ಳಬೇಕಿದೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ