ದಾವಣಗೆರೆ: ನನಗೆ 32 ವರ್ಷ ವಯಸ್ಸಾದರು ಇನ್ನೂ ಮದುವೆಯಾಗಿಲ್ಲ ಎಂದು ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕು ರಾಮೇಶ್ವರ ಗ್ರಾಮದಲ್ಲಿ ನಡೆದಿದೆ.
ವೀರೇಶ್ (32) ಆತ್ಮಹತ್ಯೆ ಮಾಡಿಕೊಂಡವ. ಈತ ಗ್ರಾಮದ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ. ಮೂಲತಃ ಹರಪ್ಪನಹಳ್ಳಿ ತಾಲೂಕಿನ ಹರಕನಾಳ್ ಗ್ರಾಮದ ನಿವಾಸಿಯಾಗಿದ್ದು, ಕಳೆದ 5-6 ವರ್ಷಗಳಿಂದ ಮದುವೆಯಾಗಲು ಕನ್ಯೆಯನ್ನು ನೋಡುತ್ತಿದ್ದ. ಆದರೆ, ನೋಡಿದವರಾರು ಈತನನ್ನು ಒಪ್ಪುತ್ತಿರಲಿಲ್ಲ ಇದರಿಂದ ತುಂಬ ಮನನೊಂದಿದ್ದ ಎಂದು ಹೇಳಲಾಗಿದೆ.
ಇನ್ನು ಮುಂದೆ ತನಗೆ ಮದುವೆಯೇ ಆಗಲ್ಲ ಎಂದು ವೀರೇಶ್ ತುಂಬಾ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.