- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸ್ಥಾನಗಳಿದ್ದರೂ ತಮ್ಮ ಜವಾಬ್ದಾರಿ ಮರೆತು ಜನರ ಕಷ್ಟಗಳಿಗೆ ಕಿವಿಗೊಡದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು. ಈ ನಡುವೆ ಇತ್ತ ಸರ್ಕಾರದ ಜನ ವಿರೋಧಿ ನಿರ್ಣಯಗಳ ವಿರುದ್ಧ ಮಾತನಾಡಿ 2020ರ ಪ್ರಮುಖ ವಿಪಕ್ಷವಾಗಿ ಆಮ್ ಆದ್ಮಿ ಪಕ್ಷ ಹೊರಹೊಮ್ಮಿದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಹೇಳಿದ್ದಾರೆ.
ಪ್ರತಿದಿನ ಜನಸಾಮಾನ್ಯರ ಸಮಸ್ಯೆಗಳಿಗೆ ದನಿಯಾಗುತ್ತಾ, ಭ್ರಷ್ಟ ವ್ಯವಸ್ಥೆಯ ವಿರುದ್ದ ಸಂಘಟಿತ ಹೋರಾಟ ನಡೆಸುತ್ತಾ ಸರ್ಕಾರ, ಅಧಿಕಾರಿಗಳನ್ನು ಸದಾ ಎಚ್ಚರದಲ್ಲಿ ಇಡುವಂತಹ ನೂರಾರು ಕಾರ್ಯಕ್ರಮಗಳನ್ನು ಪಕ್ಷ ಮಾಡಿದೆ ಎಂದು ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ, ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿದಿನ 10 ಸಾವಿರ ಜನಕ್ಕೆ ಮೂರು ಹೊತ್ತು ಊಟದ ವ್ಯವಸ್ಥೆ, ಸುಮಾರು 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ 2 ವಾರಕ್ಕೆ ಆಗುವಷ್ಟು ದಿನಸಿ ಪದಾರ್ಥಗಳನ್ನು ಹಂಚಲಾಯಿತು.
ಲಾಕ್‌ಡೌನ್ ವೇಳೆ 23 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರ ನೆರವಿಗೆ ನಿಲ್ಲಲಾಯಿತು. ರಕ್ತದಾನ ಶಿಬಿರ ನಡೆಸಿ ಒಂದು ಸಾವಿರಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲಾಯಿತು ಎಂದು ತಿಳಿಸಿದರು.
ಆಕ್ಸಿ ಮಿತ್ರ ಅಭಿಯಾನದ ಮೂಲಕ ಪ್ರತಿ ಮನೆ, ಮನೆಗೆ ತೆರಳಿ ಕುಟುಂಬದ ಎಲ್ಲಾ ಸದಸ್ಯರ ದೇಹದ ತಾಪಮಾನ, ಆಮ್ಲಜನಕ ಮಟ್ಟ ಸೇರಿ ಇತರೇ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿ ಇಡೀ ಮನೆಯನ್ನು ಸ್ಯಾನಿಟೈಜ್ ಮಾಡಿ ಕೊರೊನಾ ಗುಣ ಲಕ್ಷಣಗಳು ಕಂಡುಬಂದರೆ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಮಾಹಿತಿಯಿಂದ ಹಿಡಿದು, ಸೋಂಕಿತರು ಕಂಡು ಬಂದರೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಸೇರಿಸುವ ತನಕ ಕೆಲಸ ಮಾಡಲಾಯಿತು. ಈ ಆಕ್ಸಿಮಿತ್ರ ಯೋಜನೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚಿನ ಸೋಂಕಿತರು ಚಿಕಿತ್ಸೆ ಪಡೆಯಲು ಸಹಾಯ ಮಾಡಲಾಯಿತು.
ಕಾರ್ಮಿಕರ, ಆಟೋ ಚಾಲಕರ, ನೆರವಿಗೆ ನಿಂತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ
ಆಟೋ ಚಾಲಕರಿಗೆ 5 ಸಾವಿರ ಸಹಾಯಧನ ಬರುವಂತೆ ಮಾಡಿದ ಹೆಗ್ಗಳಿಕೆ ಆಮ್ ಆದ್ಮಿ ಪಕ್ಷಕ್ಕೆ ಸಲ್ಲಬೇಕು.
ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, ಕಸದ ಮಾಫಿಯಾ ವಿರುದ್ದ ಬೃಹತ್ ಹೋರಾಟ ಇಡೀ ಬೆಂಗಳೂರನ್ನೇ ಕಸದ ಕೊಂಪೆಯನ್ನಾಗಿಸಿರುವ ಬಿಬಿಎಂಪಿ ವಿರುದ್ಧ ಸದಾ ತನ್ನ ವಿರೋಧ ವ್ಯಕ್ತಪಡಿಸುತ್ತಲೇ ಇರುವ ಆಮ್ ಆದ್ಮಿ ಪಕ್ಷದ ಈ ವರ್ಷದ ಬೃಹತ್ ಹೋರಾಟದಲ್ಲಿ ಕಸದ ಮಾಫಿಯಾ ವಿರುದ್ಧ ನಡೆಸಿದ ಹೋರಾಟ ಎಂದೇ ಹೇಳಬಹುದು.
ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ದಿನ ದೆಹಲಿಯ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ಬೆಂಗಳೂರಿನ ಶಾಂತಿನಗರದ ಬಸಪ್ಪ ರಸ್ತೆಯಲ್ಲಿ ಆಮ್ ಆದ್ಮಿ ಕ್ಲಿನಿಕ್ ಉದ್ಘಾಟನೆ.
ವಿದ್ಯುತ್ ದರ ಏರಿಕೆಯ ವಿರುದ್ಧ ಸಮರ, ವಿದ್ಯುತ್ ಬೆಲೆ ಏರಿಕೆ ವಿರುದ್ದ ಬೃಹತ್ ಪ್ರತಿಭಟನೆ, ಯಡಿಯೂರಪ್ಪ ಸರ್ಕಾರದ 3400 ಕೋಟಿ ವಿದ್ಯುತ್ ಖರೀದಿ ಹಗರಣ ಬಯಲಿಗೆ ಎಳೆಯಲಾಯಿತು.
ಬೆಂಗಳೂರಿನ ಬೃಹತ್ ಭ್ರಷ್ಟಾಚಾರದ ಸ್ಮಾರಕ ಅಭಿಯಾನದ ಮೂಲಕ ಶಿವಾನಂದ ವೃತ್ತ ಉಕ್ಕಿನ ಸೇತುವೆ, ಕೋರಮಂಗಲ ಮೇಲ್ಸೇತುವೆ ಪೂರ್ಣಗೊಳಿಸುವಂತೆ ಪ್ರತಿಭಟನೆ ನಡೆಸಲಾಯಿತು.
ಬಿಬಿಎಂಪಿ ಮತ್ತು ಸರ್ಕಾರದ ವೈಫಲ್ಯ ಗಳನ್ನು ಮನೆ ಮನೆಗೆ ತಲುಪಿಸುವ ಬೃಹತ್ ಪಾದಯಾತ್ರೆ ಮತ್ತು ಜಾಗೃತಿ ಕಾರ್ಯಕ್ರಮಗಳು, ಬಿಬಿಎಂಪಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವ ಬೃಹತ್ ಅಭಿಯಾನವನ್ನು ಆಮ್ ಆದ್ಮಿ ಪಕ್ಷ ಹಮ್ಮಿಕೊಂಡಿತ್ತು ಎಂದು 2020ನೇ ವರ್ಷದಲ್ಲಿ ಮಾಡಿದ ಕಾರ್ಯಕ್ರಮಗಳನ್ನು ವಿವರಿಸಿದರು.