NEWSಕೃಷಿನಮ್ಮಜಿಲ್ಲೆ

ಅಧಿಕಾರಿಗಳು ವರದಿ ನೀಡಿದ ಕೂಡಲೇ ಬೆಳೆ ಪರಿಹಾರ : ಕಂದಾಯ ಸಚಿವ ಅಶೋಕ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹಾಸನ: ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ನೆರೆ ಪ್ರದೇಶಗಳಿಗೆ ಕಂದಾಯ ಸಚಿವ ಆರ್​ ಅಶೋಕ್​ ಭೇಟಿ ನೀಡಿ, ಬೆಳೆ ವೀಕ್ಷಣೆ ಮಾಡಿದರು.

ಈ ಮಧ್ಯೆ, ಅರಕಲಗೂಡು ತಾಲೂಕಿನ ರಾಗಿಮರೂರು ರಾಗಿಮರೂರಿನಲ್ಲಿ ಮಾತನಾಡಿದ ಸಚಿವ ಅಶೋಕ್ ಅವರು ಹಾಸನ ಜಿಲ್ಲೆಯಲ್ಲಿ ಒಟ್ಟು 47 ಸಾವಿರ ಹೆಕ್ಟೇರ್ ಕೃಷಿ ಹಾಗೂ 300 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಆಗಿದೆ. ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ಹಾನಿ ಆಗಿದೆ.

ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಈ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಕೂಡಲೆ ರೈತರಿಗೆ ಬೆಳೆ ಪರಿಹಾರ ಸಿಗಬೇಕಿದೆ. ನೇರವಾಗಿ ರೈತರ ಖಾತೆಗೆ ಪರಿಹಾರ ಸಂದಾಯ ಆಗೋ ರೀತಿ ಕ್ರಮ ವಹಿಸಲಾಗುತ್ತೆ ಎಂದು ಹೇಳಿದ್ದಾರೆ.

ಹವಾಮಾನ ವರದಿ ಪ್ರಕಾರ ಮಳೆ ಇನ್ನೂ ಮುಂದುವರಿಯುತ್ತೆ. ಚನ್ನೈ ಸೈಕ್ಲೋನ್ ಶುರುವಾದ್ರೆ ಮತ್ತೊಂದು ಸುತ್ತು ಮಳೆ ಬರಲಿದೆ. ರಾಗಿ ಉದುರಿ ಮೊಳಕೆ ಬರುತ್ತಿದೆ, ಹುಲ್ಲು ಕೂಡ ಕೊಳೆಯುತ್ತಿದೆ. ಹಾಗಾಗಿ ಕೂಡಲೆ ರೈತರಿಗೆ ಪರಿಹಾರ ಕೊಡೋದು ಸರ್ಕಾರದ ಕರ್ತವ್ಯ ಇದೆ.

ನಾನು ಸಾಕಷ್ಟು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಎನ್ ಡಿ ಆರ್ ಎಫ್ ಪರಿಹಾರ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ನಿಗದಿ ಆಗಿದ್ದು, ಅದು ಇನ್ನೂ ಪರಿಷ್ಕರಣೆ ಆಗಿರಲಿಲ್ಲ. ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದರು.

ಕನಿಷ್ಠ ಈಗಿರುವ ಮೂರು ಪಟ್ಟು ಹೆಚ್ಚು ಮಾಡಲು ಮನವಿ ಮಾಡಲಾಗಿದೆ. ಪರಿಹಾರ ಹೆಚ್ಚಿಸಬೇಕು ಎಂದು ಪತ್ರ ಬರೆದು ಸರ್ಕಾರದ ಜತೆ ಸಂಪರ್ಕದಲ್ಲಿ ಇದ್ದೇವೆ. ಕೇಂದ್ರ ಹಣಕಾಸು ಸಚಿವರು ಕೂಡಲೆ ಕ್ರಮ ವಹಿಸುದಾಗಿ ಹೇಳಿದ್ದಾರೆ.

ಈಗಾಗಲೆ 300 ಕೋಟಿ ಬೆಳೆ ಪರಿಹಾರ ವಿತರಣೆ ಮಾಡಲಾಗಿದೆ. ಕಾಫಿ ಬೆಳೆಗೂ ಕೂಡ ರಾಜ್ಯ ಸರ್ಕಾರದಿಂದ ಪರಿಹಾರ ಕೊಡುತ್ತೇವೆ. ಶೇಕಡಾ 33 ಕ್ಕಿಂತ ಹೆಚ್ಚು ಹಾನಿಯಾಗಿರೋ ಪ್ರದೇಶದ ಕಾಫಿಗೆ ಪರಿಹಾರ ನೀಡುತ್ತೇವೆ. ಹಾಸನ ಜಿಲ್ಲೆಯಲ್ಲಿ ಎನ್.ಡಿ.ಆರ್.ಎಫ್ ಮಾನದಂಡದ ಪ್ರಕಾರ 33 ಕೋಟಿ ರೂ. ನಷ್ಟ ಆಗಿದೆ. ಆದರೆ ವಾಸ್ತವದಲ್ಲಿ ಕನಿಷ್ಠ ನೂರು ಕೋಟಿಗೂ ಹೆಚ್ಚು ಲಾಸ್ ಆಗಿದೆ.

ಕೇವಲ ರಾಗಿ ಅಷ್ಟೆ ಅಲ್ಲ, ಎಲ್ಲ ರೀತಿಯ ಬೆಳೆ ಹಾನಿಗೆ ಪರಿಹಾರ ಸಿಗುತ್ತೆ ಎಂದು ಕಂದಾಯ ಸಚಿವ ಅಶೋಕ್ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಹೇಳಿದರು. ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ