NEWSಕೃಷಿನಮ್ಮರಾಜ್ಯಸಿನಿಪಥ

ರೈತರ ನೆರವಿಗೆ ನಿಂತ ಉಪೇಂದ್ರ: ರಾಜ್ಯದ ಹಲವೆಡೆ ಬೆಳೆ ಖರೀದಿಸಿ ಅನ್ನದಾತರಿಗೆ ನೆರವು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಸಂಕ್ಷದ ಈ ಸಮಯದಲ್ಲಿ ನಟ ಉಪೇಂದ್ರ ಅವರು ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರಸ್ತೆಗೆ ಟೊಮೆಟೋ ಸುರಿದಿರುವುದನ್ನು ಕಂಡು ಮರುಗಿ ಮರುಕ್ಷಣವೆ ತಮ್ಮ ಟ್ವೀಟರ್‌ನಲ್ಲಿ ರೈತರ ನೆರವಿಗೆ ನಿಂತು ನೀವು ಬೆಳೆದ ಬೆಳೆಗೆ ತಕ್ಕ ಪ್ರತಿಫಲವನ್ನು ನಾವು ಕೊಡುತ್ತೇವೆ ದಯಮಾಡಿ ನಮ್ಮನ್ನು ಸಂಪರ್ಕಿಸಿ ಎಂದು ಮೊ. ನಂಬರ್‌ ಸಹಿತ ನೆರವಿಗೆ ನಿಂತರು.

ಕಳೆದ ನಾಲ್ಕುದಿನದಿಂದ ಇಲ್ಲಿಯವೆರೆಗೆ ಲಕ್ಷಾಂತರ ರೂ. ಬೆಳೆ ಖರೀದಿಸಿ ಅದನ್ನು ಆದಷ್ಟು ಉಚಿತವಾಗಿಯೋ ಇಲ್ಲ ನೆರವು ನೀಡುವವರಿಂದ ಹಣ ಪಡೆದು ಅವಶ್ಯ ಇರುವವರಿಗೆ ವಿತರಿಸುತ್ತಿದ್ದಾರೆ. ಉಪ್ಪಿ ಮತ್ತು ಅವರ ತಂಡದ ಈ ಕಾರ್ಯಕ್ಕೆ ರಾಜ್ಯದ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇನ್ನು ನಿನ್ನೆ ( ಶುಕ್ರವಾರ) ಅವರ ತಂಡ ಮಾಡಿದ ಕಾರ್ಯದ ಬಗ್ಗೆ ಕೆಲವೊಂದರ ಸಂಕ್ಷಿಪ್ತ ಮಾಹಿತಿ ನಿಮಗೆ ತಿಳಿದಿರಲಿ ಎಂದು ನೀಡುತ್ತಿದ್ದೇವೆ.

ಹಳೇಬೀಡು ಕಾಳೇಗೌಡ ದಂಪತಿ.

ಹಾಸನ ಜಿಲ್ಲೆಯ ಹಳೇಬೀಡು ಕಾಳೇಗೌಡರು 2 ಟನ್ ಸಾಂಬಾರ್ ಸೌತೆ, 8 ಟನ್ ಸಿಹಿ ಕುಂಬಳಕಾಯಿ, 2 ಟನ್ ಪರಂಗಿ ಹಣ್ಣು ಲೋಡ್ ಮಾಡಿ ಬೆಂಗಳೂರಿಗೆ ಕಳಿಸುತ್ತಿದ್ದಾರೆ ಮತ್ತು ನಾಡಿದ್ದು ಬೇಲೂರಿಗೆ ಕಳಿಸುತ್ತಿದ್ದಾರೆ ಬೆಲೆ 15,000 ರೂ. ( ಸಾರಿಗೆ ಕರ್ಚು ಸೇರಿ ).

ಚಾಮರಾಜನಗರ ಜಿಲ್ಲೆಯ ಹನೂರು ಹರೀಶ್ ಹಾಗೂ ಟೊಮೆಟೋ ಬೆಳೆದ ಚಾಮರಾಜನಗರದ ರೈತ ಶಿವಕುಮಾರ್ ಅವರು ಮತ್ತೀಪುರ ಗ್ರಾಮ, ರಾಜಶೆಟ್ಟಿ ದೊಡ್ಡಿ, ಮರಿಯಪುರ , ಲಂಬಾಣಿ ತಾಂಡಾ, ಹಿರಿದಳ್ ದೊಡ್ಡಿಯಲ್ಲಿ ಉಚಿತವಾಗಿ ಅವಶ್ಯವಿರುವವರಿಗೆ ಟೊಮೆಟೋ ವಿತರಿಸಿದರು.

ಹನೂರು ಹರೀಶ್ ಚಾಮರಾಜನಗರದ ರೈತ ಶಿವಕುಮಾರ್

ಮಧ್ಯಾಹ್ನ1 ಗಂಟೆಯಿಂದ 3 ಗಂಟೆಯವರೆಗೆ ಸುಮಾರು 1,300 ಕೆಜಿ ಯಷ್ಟು ಟೊಮೆಟೋ ವಿತರಿಸುವ ಮೂಲಕ ಹಳ್ಳಿಗರ ಹಸಿವಿನ ಸಂಕಟವನ್ನು ಸ್ವಲ್ಪ ಮಟ್ಟಿಗೆ ನೀಗಿಸಿದರು.

ಇನ್ನು ಖ್ಯಾತ ಸ್ಟಾರ್ ನಿರ್ದೇಶಕ ಆರ್. ಚಂದ್ರು ಮತ್ತು ಕಬ್ಜ ಟೀಂ ವತಿಯಿಂದ 1 ಲಕ್ಷ ರೂ. ಹಣ ಮತ್ತು ದಿನಸಿ, ತರಕಾರಿ ಕಿಟ್ ಅನ್ನು ಸಂಕಷ್ಟದಲ್ಲಿರುವ ಚಿತ್ರರಂಗದ TV ಮತ್ತು ಪತ್ರಿಕೋದ್ಯಮದವರಿಗೆ ಕೊಡಲು ಮುಂದೆ ಬಂದಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಉಪೇಂದ್ರ ತಿಳಿಸಿದ್ದಾರೆ.

ಸ್ಟಾರ್ ನಿರ್ದೇಶಕ ಆರ್. ಚಂದ್ರು, ಉಪೇಂದ್ರ.

ಚಾಮರಾಜನಗರ ಶಿವಕುಮಾರ್ ಎಸ್. ಅವರು 3000 KG ಟೊಮೆಟೋ 15,000 ರೂ. ( ಸಾರಿಗೆ ವೆಚ್ಚ ಸೇರಿ ) 1000 kg ಚಾಮರಾಜನಗರದಲ್ಲಿರುವ ಹರೀಶ್ ಹನೂರ್ ಅವರಿಗೆ ಹಾಗೂ 2000 KG ಮೈಸೂರಿನಲ್ಲಿ ಶಿವ ಅವರಿಗೆ ನೀಡಿದ್ದಾರೆ. ಶಿವ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ವಿತರಿಸಲಾಯಿತು.

ಮಧು ಸೋಮಶೇಖರ್, ರಾಮನಗರ.

ಇನ್ನು ಮಧು ಸೋಮಶೇಖರ್, ರಾಮನಗರ ಜಿಲ್ಲೆಯವರು 450 KG ಬಾಳೇಹಣ್ಣು ಸಾರಿಗೆವೆಚ್ಚ ಸೇರಿ 4,500 ರೂ.ಗಳಿಗೆ ನೀಡಿದ್ದಾರೆ. ಅದರಂತೆ ನಾರಾಯಣ ಸ್ವಾಮಿ, ಮಾಲೂರು 1000 KG ದೊಣ್ಣೆ ಮೆಣಸಿನಕಾಯಿ 17,500 ರೂ.ಗಳಿಗೆ ( ಸಾರಿಗೆ ವೆಚ್ಚ ಸೇರಿ ) ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದು ಉಪೇಂದ್ರ ತಮ್ಮ ಟ್ವೀಟರ್‌ನಲ್ಲಿ ಫೋಟೋ ಸಹಿತ ಹಾಕಿಕೊಂಡಿದ್ದಾರೆ.

ಟೊಮೆಟೋ ಪಡೆಯಲು ಕ್ಯೂ ನಿಂತಿರುವ ಜನರು.

 

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...