- ವಿಜಯಪಥ ಸಮಗ್ರ ಸುದ್ದಿ
ಕೋಲ್ಕತಾ: ಮಾಜಿ ಕ್ರಿಕೆಟಿಗ, ಭಾತರ ಕ್ರಿಕೆಟ್ ನಿಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಲಘು ಹೃದಯಾಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶನಿವಾರ ಕೆಲಸದ ಸಂದರ್ಭದಲ್ಲಿ ಗಂಗೂಲಿ ತಲೆ ಸುತ್ತಿನಿಂದ ಬಳಲಿ ಕುಸಿದು ಬಿದ್ದರು. ಅವರಿಗೆ ಎದೆನೋವು ಸಹ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಅವರನ್ನು ತಪಾಸಣೆ ಮಾಡಿದಾಗ ಲಘು ಹೃದಯಾಘಾತ ಆಗಿರುವುದು ದೃಢಪಟ್ಟಿದೆ. ಈ ಬಗ್ಗೆ
ವೈದ್ಯ ಮೂಲಗಳು ಖಚಿತಪಡಿಸಿದ್ದು, ಸದ್ಯ ಗಂಗೂಲಿ ಅವರನ್ನು ಕೋಲ್ಕತಾದ ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೃದಯ ಸಂಬಂಧಿ ತೊಂದರೆಗೆ ತುತ್ತಾಗಿರುವುದರಿಂದ ಅವರಿಗೆ ಸಂಜೆ ವೇಳೆಗೆ ಆಂಜಿಯೋಪ್ಲಾಸ್ಟಿ ಮಾಡುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ.