NEWSನಮ್ಮರಾಜ್ಯಸಿನಿಪಥ

15ರ ಹರೆಯದಲ್ಲಿ ಜೋಗಿ: ಇನ್ನೊಂದು ಇಂಥ ಚಿತ್ರ ನನ್ನಿಂದ ಬರಲು ಸಾಧ್ಯವಿಲ್ಲ ಎಂದ ಜೋಗಿ ಪ್ರೇಮ್‌

ವಿಜಯಪಥ ಸಮಗ್ರ ಸುದ್ದಿ

2005 ರಲ್ಲಿ ಬಿಡುಗಡೆಯಾದ ಜೋಗಿ ಚಿತ್ರವು ಶಿವಣ್ಣ ಮತ್ತು ಅರುಂಧತಿ ನಾಗ್ ಅವರನ್ನು ನೈಜ ತಾಯಿ-ಮಗ ಜೋಡಿಯಂತೆ ಬಿಂಬಿಸಿತ್ತು. ಈ ಚಲನಚಿತ್ರವು ಕನ್ನಡ ಚಲನಚಿತ್ರೋದ್ಯಮದ ಅತಿದೊಡ್ಡ ಬ್ಲಾಕ್ ಬಸ್ಟರ್ಡ್ ಗಳಲ್ಲಿ ಒಂದಾಗಿದ್ದು ಹಾಡುಗಳು ಆಡಿಯೋ ಮಾರುಕಟ್ಟೆಯನ್ನು ಆಳಿವೆ. ಗುರುಕಿರಣ್ ಸಂಗೀತ ಸಂಯೋಜನೆಯ “ಬೇಡುವೆನು ವರವನ್ನು ಕೊಡೆತಾಯಿ ಜನ್ಮವನು…” ಇಂದಿಗೂ ಸಾಕಷ್ಟು ಜನಪ್ರಿಯ.

ಅಂದಹಾಗೆ ಇದನ್ನು ಏಕೆ ಹೇಳುತ್ತಿದ್ದೇವೆ ಅಂದರೆ ಒಂದು ವಿಶೇಷವಿದೆ ಅದೇ ಆಗಸ್ಟ್ 19. ಅಂದರೆ ಇಂದಿಗೆ ಪ್ರೇಮ್ ನಿರ್ದೇಶನದ, ಶಿವರಾಜ್‌ಕುಮಾರ್‌ ಅಭಿನಯದ “ಜೋಗಿ” ಚಿತ್ರ ತೆರೆಗೆ ಬಂದು 15 ವರ್ಷವಾಗಿದೆ,  15 ವರ್ಷಗಳ ಹಿಂದೆ ಈ ದಿನ “ಜೋಗಿ” ತೆರೆಕಂಡು ಇತಿಹಾಸ ನಿರ್ಮಿಸಿತ್ತು. ಸೆಂಚುರಿ ಸ್ಟಾರ್ ಅಭಿಮಾನಿಗಳು ಇದಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಹೌದು ! “61ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನಗಳನ್ನು ಕಂಡಿದ್ದ ಚಿತ್ರ “ಜೋಗಿ”  ಆ ಕಾಲದ ಅನೇಕ ದಾಖಲೆಗಳನ್ನು ಮುರಿದ ಚಿತ್ರ” ಎಂದು ನಿರ್ದೇಶಕ ಪ್ರೇಮ್ ನೆನಪಿಸಿಕೊಳ್ಳುತ್ತಾರೆ.

“ಜೋಗಿ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ, ಮತ್ತು ಈ ವರ್ಷ ಚಿತ್ರ ಬಿಡುಗಡೆಯಾಗಿ 15 ವರ್ಷ ಪೂರ್ಣವಾಗಿರುವುದು ಇನ್ನಷ್ಟು ವಿಶೇಷವಾಗಿದೆ. ಈ ಚಿತ್ರವೀಗ ನನ್ನ ಪಾಲಿಗೆ ಇನ್ನಷ್ಟು ಹತ್ತಿರವಾಗಿದೆ ಏಕೆಂದರೆ  ನಾನು ಕಳೆದ ತಿಂಗಳು ನನ್ನ ತಾಯಿಯನ್ನು ಕಳೆದುಕೊಂಡೆ”. “ಜೋಗಿ ನನಗೆ ಕೇವಲ ಚಿತ್ರವಲ್ಲ, ಇದು ಬಹಳಷ್ಟು ಜೀವನ ಪಾಠಗಳನ್ನು ಕಲಿಸಿದೆ” ಎಂದು  ಪ್ರೇಮ್ ಹೇಳಿದ್ದಾರೆ.

ನನ್ನ ತಾಯಿ ಭಾಗ್ಯಮ್ಮ ಅವರಿಂದ ನನಗೆ ಈ ಚಿತ್ರಕ್ಕೆ ಸ್ಪೂರ್ತಿ ಸಿಕ್ಕಿತ್ತು. ಹಿರಿಯ ನಟಿ  ಅರುಂಧತಿ ನಾಗ್ ಅವರ ಪಾತ್ರವ ಮೂಲಕ ತಾಯಿಯ ಜೀವನವನ್ನು ತೆರೆಗೆ ತರಲು ಬಯಸಿದ್ದೆ, ಮಾಸ್ ಕಾನ್ಸೆಪ್ಟ್ ಗಳ ಹೊರತಾಗಿ ಚಲನಚಿತ್ರವಾಗಿ, ಜೋಗಿ ತಾಯಿ ಮತ್ತು ಅವಳ ಮಗನ ನಡುವಿನ ಸಂಬಂಧವನ್ನು ತೋರಿಸಿದೆ. ಇದು ಪೋಷಕರು ಮತ್ತು ಅವರ ಮಕ್ಕಳ ನಡುವಿನ ಸಂಬಂಧದ ಮೇಲೆ ಅದು ಹೇಗೆ ಪ್ರಭಾವ ಬೀರಿತು ಎಂಬುದಕ್ಕೆ ಉದಾಹರಣೆ ನೀಡುವ ನಿರ್ದೇಶಕ  “ನನ್ನ ಚಿತ್ರದಿಂದ ಪ್ರಭಾವಿತನಾಗಿ ಮಗನೊಬ್ಬ ಆರು ವರ್ಷಗಳ ನಂತರ ಮನೆಗೆ ವಾಪಸಾಗಿದ್ದ. ಇದನ್ನು ಆತನ ಕಾಲೇಜಿನ ಪ್ರಾಂಶುಪಾಲರು ನನಗೆ ಹೇಳಿದ್ದರು. ಇದನ್ನು ಕೇಳಿದ ನಾನು ಭಾವುಕನಾಗಿದ್ದೆ. ಅಂತೆಯೇ, ಈ ಚಿತ್ರವು ಅನೇಕರು ಅವರ ಹೆತ್ತವರನ್ನು ಮರಳಿ ಮನೆಗೆ ಕರೆದು ತರುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ. ಬಹಳಷ್ಟು ಜನರ ಮನಸ್ಥಿತಿಯನ್ನು ಬದಲಿಸಿದೆ ಎಂದು ನನಗೆ ತಿಳಿದಿದೆ.

ಆಡಿಯೋ ಮತ್ತು ಚಿತ್ರ ಪ್ರದರ್ಶನದ ಜತೆ ಕಮಾಲ್ ಮಾಡಿದ ಚಿತ್ರ ಒಟ್ಟಾರೆ 300 ಕೋಟಿ ರೂ.ಕಲೆಹಾಕಿತ್ತು. “ನಾನು ನನ್ನ ಯಾವುದೇ ಚಲನಚಿತ್ರಗಳನ್ನು ತಮ್ಮ ವೃತ್ತಿಜೀವನದ ಮಹತ್ವದ ತಿರುವು ಎಂದು ಪರಿಗಣಿಸುವುದಿಲ್ಲ ಏಕೆಂದರೆ ಪ್ರತಿ ಚಲನಚಿತ್ರವು ವಾಸ್ತವಕ್ಕೆ ಹತ್ತಿರದಲ್ಲಿರುತ್ತದೆ. ನನ್ನ ಜೀವನ ಅನುಭವದಿಂದ ಬಂದದ್ದಾಗಿರುತ್ತದೆ. ಅದನ್ನು  ಸಿನಿಮೀಯ ಉದ್ದೇಶಗಳಿಗಾಗಿ ರೂಪಿಸಲಾಗಿದ್ದರೂ ನಾನು ಎಂದಿಗೂ ಇನ್ನೊಂದು ಜೋಗಿ ಚಿತ್ರ ಮಾಡಲು ಸಾಧ್ಯವಿಲ್ಲ. ಅದನ್ನೇ ನನ್ನ ಅಭಿಮಾನಿಗಳಿಗೆ ಮತ್ತು ಶಿವಣ್ಣನಿಗೆ ಹೇಳಲು ಬಯಸುತ್ತೇನೆ.

ಜೋಗಿಯ ಬಗೆಗಿನ ನನ್ನ ನುಭವವನ್ನು ನನಗೆ ಪುನರಾವರ್ತಿಸಲು ಸಾಧ್ಯವಿಲ್ಲ. ನನ್ನ ಹಿಂದಿನ ಚಿತ್ರದಿಂದ ನಾನು ಪ್ರಭಾವಿತನಾಗಬಹುದು, ಆದರೆ ನಾನು ನಿಖರವಾಗಿ ಅದೇ  ಚಿತ್ರವನ್ನು ಮತ್ತೆ ಮಾಡಲು ಬರುವುದಿಲ್ಲ ಎಂದು ಪ್ರೇಮ್ ಹೇಳುತ್ತಾರೆ.

ಈ ಚಿತ್ರವನ್ನು ತೆಲುಗಿನಲ್ಲಿ ಪ್ರಭಾಸ್ ಮತ್ತು ನಯನತಾರಾ ಅವರನ್ನೊಳಗೊಂಡು “ಯೋಗಿ” ಎಂಬ ಶೀರ್ಷಿಕೆಯಲ್ಲಿ ರೀಮೇಕ್ ಮಾಡಲಾಗಿದೆ. ತಮಿಳಿನಲ್ಲಿಯೂ ಈ ಚಿತ್ರದ ರೀಮೇಕ್ ಬಂದಿದೆ ಆದರೂ ಪ್ರೇಮ್ ಆ ಭಾಷೆಗಳಲ್ಲಿ ಚಿತ್ರ ನಿರ್ದೇಶನ ಮಾಡಿಲ್ಲ.

“ಆಗ, ಈ ಚಿತ್ರವನ್ನು ವಿವಿಧ ಭಾಷೆಗಳಲ್ಲಿ ರೀಮೇಕ್ ಮಾಡಲು ರಜನಿಕಾಂತ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಪ್ರಭಾಸ್ ಮುಂತಾದ ತಾರೆಯರು ನನ್ನನ್ನು ಸಂಪರ್ಕಿಸಿದರು. ಆದರೆ ಈ ಚಿತ್ರವನ್ನು ಬೇರೆ ಭಾಷೆಗೆ ಹೊಂದಿಸಲು ನನಗೆ ಸಾಧ್ಯವಾಗಲಿಲ್ಲ ಅಥವಾ ಜೋಗಿಯಲ್ಲಿ ಶಿವಣ್ಣ ನಿರ್ವಹಿಸಿದ ಪಾತ್ರಕ್ಕೆ ಬೇರೆ ಯಾವ ನಟನೂ ಹೊಂದಿಕೊಳ್ಳುವುದನ್ನು ನಾನು ನೋಡಲಿಲ್ಲ. ಈ ಚಿತ್ರದ ನಿರ್ಮಾಣದ ಸಮಯದಲ್ಲಿ, ಶಿವಣ್ಣ ಕೇವಲ ಕಲಾವಿದನಾಗಿ ಅಥವಾ ಡಾ. ರಾಜ್‌ಕುಮಾರ್ ಅವರ ಮಗನಾಗಿ ಕಾಣಲಿಲ್ಲ. ಬದಲಿಗೆ ಆತ ಮನೆಯವನಾಗಿ, ಸಹೋದರ, ಸಂಬಂಧಿ ಅಥವಾ ಪಕ್ಕದ ಮನೆ ವ್ಯಕ್ತಿಯಂತೆಯೂ ಇದ್ದರು. ಅವರು ತಮ್ಮ ಹೃದಯ , ಆತ್ಮವನ್ನೇ ಚಿತ್ರದಲ್ಲಿ ಇರಿಸಿದ್ದರು ಎಂದು ವಿವರಿಸಿದ್ದಾರೆ.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?