Vijayapatha – ವಿಜಯಪಥ
Saturday, November 2, 2024
NEWSನಮ್ಮಜಿಲ್ಲೆರಾಜಕೀಯ

ಟ್ಯಾಂಕರ್ ಮಾಫಿಯಾಗೆ ಜನರ ಹಣವನ್ನೇ ಅಡವಿಟ್ಟ ಬಿಎಸ್‌ವೈ ಸರ್ಕಾರ: ಶಾಂತಲಾ ದಾಮ್ಲೆ ಗಂಭೀರ ಆರೋಪ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಟ್ಯಾಂಕರ್ ಮಾಫಿಯಾಗೆ ಜನರ ಹಣವನ್ನೇ ಅಡವಿಟ್ಟಿರುವ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ 110 ಹಳ್ಳಿಗಳ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿಗಳು ಸೇರ್ಪಡೆಗೊಂಡು 13 ವರ್ಷಗಳು ಕಳೆಯುತ್ತಾ ಬಂದರೂ ಸರಿಯಾದ ಮೂಲ ಸೌಕರ್ಯಗಳು ನೀಡದೆ ಹಫ್ತಾ ವಸೂಲಿ ಮಾಡುವ ಪುಡಿ ರೌಡಿಗಳಂತೆ ವರ್ತಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಗಂಭೀರ ಆರೋಪ ಮಾಡಿದ್ದು, ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಸವಲತ್ತುಗಳನ್ನು ನೀಡದೆ ಜನರಿಂದ ಮಾತ್ರ ಹಣ ವಸೂಲಿ ಮಾಡುತ್ತಿರುವ ಸರ್ಕಾರ ಈ ಹಳ್ಳಿಗಳ ಕಡೆ ತಿರುಗಿಯೂ ನೋಡಿಲ್ಲ. ಸುಮಾರು 12 ಲಕ್ಷ ಜನಸಂಖ್ಯೆ ಹೊಂದಿರುವ ಈ ಹಳ್ಳಿಗಳ ಅಭಿವೃದ್ಧಿಗೆ ಎಂದು ಈ ಮೊದಲು ಚದರ ಅಡಿಗೆ 150 ರೂ. ಶುಲ್ಕ ವಿಧಿಸಲಾಗುತ್ತಿತ್ತಿ ಈಗ ಅದನ್ನು 400 ರೂಗಳಿಗೆ ಹೆಚ್ಚಿಸಿ ಸರ್ಕಾರವೇ ಜನರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಇಷ್ಟೆಲ್ಲಾ ಹಫ್ತಾ ವಸೂಲಿ ಮಾಡುತ್ತಿರುವ ಸರ್ಕಾರ ಇದುವರೆಗು ಕನಿಷ್ಠ ಸೌಲಭ್ಯವಾದ ನೀರನ್ನೂ ಸಹ ಸರಿಯಾಗಿ ನೀಡಿಲ್ಲ. ಕಾವೇರಿ ನೀರು, ಉತ್ತಮ ಒಳ ಚರಂಡಿ ವ್ಯವಸ್ಥೆಗೆ ಇದುವರೆಗೂ 5400 ಕೋಟಿ ರೂ. ಖರ್ಚು ಮಾಡಲಾಗಿದೆ ಈ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.

ಈ ನೀರಿನ ಟ್ಯಾಂಕರ್ ಮಾಫಿಯಾ ವರ್ಷಕ್ಕೆ 150 ಕೋಟಿ ರೂ.ಗೂ ಹೆಚ್ಚಿನ ವ್ಯವಹಾರವಾಗಿದ್ದು ಈ ಹಣ ರಾಜಕಾರಣಿಗಳ ಸ್ಥಳೀಯ ಪುಡಾರಿಗಳ ಜೇಬು ಸೇರುತ್ತಿರುವುದರಿಂದ ಯಾರೂ ಈ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ. ಒಂದು ಕುಟುಂಬ ಪ್ರತಿ ವರ್ಷ 20 ಸಾವಿರದಿಂದ 55 ಸಾವಿರದ ತನಕ ನೀರು ಹಾಗೂ ಒಳ ಚರಂಡಿ ವ್ಯವಸ್ಥೆ ದುರಸ್ಥಿಗೆ ಖರ್ಚು ಮಾಡುತ್ತಿದ್ದಾನೆ, ಈ ಹಣವೆಲ್ಲ ಸ್ಥಳೀಯ ಪುಡಾರಿಗಳ ಜೇಬು ತುಂಬಿಸುತ್ತಿದೆ. ಇವರಿಂದ ಸರ್ಕಾರ ಹಫ್ತಾ ವಸೂಲಿ ಮಾಡುತ್ತಿದೆ ಎಂದು ದೂರಿದರು.

ವಸಂತ ನಗರ ವಾರ್ಡ್ ಅಧ್ಯಕ್ಷೆ ಜನನಿ ಭರತ್ ಮಾತನಾಡಿ, ಇಷ್ಟೆಲ್ಲಾ ದೋಚುತ್ತಿರುವ ಬಿಬಿಎಂಪಿ ಮತ್ತು ಸರ್ಕಾರ ಅಭಿವೃದ್ಧಿ ಶುಲ್ಕವನ್ನು ಚದರ ಅಡಿಗೆ 150 ರಿಂದ 400 ಕ್ಕೆ ಹೆಚ್ಚಿಸಿದ್ದು 100 ಚದರ ಅಡಿ ಹೊಂದಿರುವ ಒಬ್ಬ ಜನಸಾಮಾನ್ಯ 25 ಸಾವಿರ ಎಲ್ಲಿ ಹೊಂದಿಸ ಬೇಕು ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಪ್ರಮುಖ ಆಗ್ರಹಗಳ

  • ಈ ಕೂಡಲೇ ಹೆಚ್ಚಳ ಮಾಡಿರುವ ಅಭಿವೃದ್ಧಿ ಶುಲ್ಕ ಹೆಚ್ಚಳ ಆದೇಶವನ್ನು ಹಿಂಪಡೆಯಬೇಕು.
  • ಸರಿಯಾದ ಕುಡಿಯುವ ನೀರು ಹಾಗೂ ಒಳ ಚರಂಡಿ ವ್ಯವಸ್ಥೆ ಇರುವ ಮನೆಗಳಿಂದ ಮಾತ್ರ ಅಭಿವೃದ್ಧಿ ಶುಲ್ಕ ಪಡೆದುಕೊಳ್ಳಬೇಕು.
  • ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕಿ ಪ್ರತಿ ತಿಂಗಳು 200-300 ರೂ.ಗೆ ಕಾವೇರಿ ನೀರು ಸೌಲಭ್ಯ ಸಿಗುವ ತನಕ ನೀರು ಸರಬರಾಜು ಮಾಡಬೇಕು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ