ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ಮುಗಿದಿದ್ದು ಬಿಜೆಪಿ ಅಭ್ಯರ್ಥಿಗಳೇ ಮುನ್ನಡೆ ದ್ದಾರೆ.
ಇನ್ನು ನಾಲ್ಕನೇ ಸುತ್ತಿನ ಮತ ಎಣಿಕೆ ಕಾರ್ಯವು ಮುಗಿದಿದ್ದು ಯಾವ ಅಭ್ಯರ್ಥಿಗಳು ಎಷ್ಟೆಷ್ಟು ಮತ ಗಳಿಸಿದ್ದಾರೆ ಎಂಬುದರ ವಿವರ…
ಮುನಿರತ್ನಗೆ 23005 ಮತಗಳು ಬಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 8666 ಮತಗಳು ಬಿದ್ದಿವೆ. ಮುನಿರತ್ನ 11634 ಮತಗಳ ಮುನ್ನಡೆಯಲ್ಲಿದ್ದಾರೆ. ಜೆಡಿಎಸ್ ಕೃಷ್ಣಮೂರ್ತಿಗೆ 619 ಮತಗಳು ಬಿದ್ದಿದೆ.
ಶಿರಾದಲ್ಲಿ ಮೂರು ಸುತ್ತಿನ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ 8642, ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ 7577 ಮತ್ತು ಜೆಡಿಎಸ್‌ನ ಅಮ್ಮಾಜಮ್ಮ 4842 ಮತಗಳನ್ನು ಪಡೆದಿದ್ದಾರೆ.
ಆರ್‌ಆರ್ ನಗರದಲ್ಲಿ 4,62,201 ಮತದಾರರು ಇದ್ದು ಒಟ್ಟು 2,09,828 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 412 ಅಂಚೆ ಮತಗಳು ಚಲಾವಣೆ ಆಗಿತ್ತು. ಶಿರಾದಲ್ಲಿ 2,15,694 ಮತದಾರರು ಇದ್ದು 1,77,645 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 6,821 ಅಂಚೆ ಮತಗಳು ಚಲಾವಣೆ ಆಗಿತ್ತು.
ಇನ್ನು ಬಿಹಾರದಲ್ಲೂ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟ ಬಂಧನ್ ನಡುವೆ ತೀವ್ರ ಪೈಪೋಟಿ ಏರಪಟ್ಟಿದ್ದು ಕೆಲವೊಮ್ಮೆ ಮಹಾಘಟ ಬಂಧನ್ ಮತ್ತೊಮ್ಮೆ ಎನ್‌ಡಿಎ ನಡುವೆ ಹಾವು ಏಣಿ ಆಟ ನಡೆಯುತ್ತಿದೆ.
ರಾಜರಾಜೇಶ್ವರಿ ನಗರ ಉಪಚುನಾವಣೆ
6ನೇ ಸುತ್ತಿನಲ್ಲಿ ಬಿಜೆಪಿ 34083 ಮುನ್ನಡೆ, ಕಾಂಗ್ರೆಸ್ 18968 ಹಿನ್ನಡೆ, ಜೆಡಿಎಸ್ 1288 ಹಿನ್ನಡೆ
ಶಿರಾ ಉಪಚುನಾವಣೆ
4 ನೇ ಸುತ್ತಿನಲ್ಲಿ ಬಿಜೆಪಿ 11770 ಮುನ್ನಡೆ, ಕಾಂಗ್ರೆಸ್ 10251 ಹಿನ್ನಡೆ ಮತ್ತು ಜೆಡಿಎಸ್ 5719 ಹಿನ್ನಡೆ
ರಾಜರಾಜೇಶ್ವರಿ ನಗರ ಉಪಚುನಾವಣೆ
7ನೇ ಸುತ್ತಿನಲ್ಲಿ ಬಿಜೆಪಿ 41898 ಮುನ್ನಡೆ, ಕಾಂಗ್ರೆಸ್ 19792 ಹಿನ್ನಡೆ, ಜೆಡಿಎಸ್ 1300 ಹಿನ್ನಡೆ
ಶಿರಾ ಉಪಚುನಾವಣೆ
5 ನೇ ಸುತ್ತಿನಲ್ಲಿ ಬಿಜೆಪಿ 13870 – ಮುನ್ನಡೆ, ಕಾಂಗ್ರೆಸ್ 12016- ಹಿನ್ನಡೆ ಮತ್ತು ಜೆಡಿಎಸ್ 7382 -ಹಿನ್ನಡೆ