CrimeNEWSಸಿನಿಪಥ

ಈಗಲೇ ಕ್ಷಮೆ ಕೇಳಿದರೆ ಒಳ್ಳೆಯವರಾಗುತ್ತೀರಿ ನೀವು: ಇಂದ್ರಜಿತ್ ಲಂಕೇಶ್ ವ್ಯಂಗ್ಯಭರಿತ ಸಲಹೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಈಗಲೇ ನೀವು ಕ್ಷಮೆ ಕೇಳಿದರೆ ಒಳ್ಳೆಯವರಾಗುತ್ತೀರಿ ಎಂದು ನಟ ದರ್ಶನ್‌ ಅವರಿಗೆ ನಿರ್ಮಾಪಕ ಇಂದ್ರಜಿತ್ ಲಂಕೇಶ್ ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲ್ಲೆ ಮಾಡಿರುವ ಘಟನೆ ನಡೆದಿರುವ ಬಗ್ಗೆ ಕ್ಷಮೆ ಕೇಳಿ ನ್ಯಾಯ ಒದಗಿಸಿಕೊಡಿ. ಇಲ್ಲ ಎಂದರೆ ನಾನು ಪೊಲೀಸ್ ಆಫೀಸರ್ ಮುಂದೆ ಎಲ್ಲವನ್ನೂ ಹೇಳಲು ಸಿದ್ಧ. ನಾನು ವೈಯಕ್ತಿಕವಾಗಿ ಮುಂದೆ ಬಂದು ಮಾತನಾಡಿದ್ದೇನೆ ಎಂದರು.

ಇನ್ನು ಈ ಪ್ರಕರಣವನ್ನು ಮತ್ತಷ್ಟು ಮುಂದುವರಿಸುವುದು ಬೇಡ. ಮತ್ತೆ ಮುಂದುವರಿಸಿದರೆ ಇನ್ನು ಹೆಚ್ಚಿನ ತೇಜೋವಧೆಯಾಗಲಿದೆ. ಸಂದೇಶ್, ಸಂದೇಶ್ ನಾಗರಾಜ್ ಅವರಲ್ಲಿ ಕ್ಷಮೆ ಕೇಳಿದ್ರೆ ಏನ್ ಕಳ್ಕೋತ್ತೀರಾ ಎಂದು ದರ್ಶನ್ ಅವರನ್ನು ಇಂದ್ರಜಿತ್ ಪ್ರಶ್ನಿಸಿದರು.

ಮೇರು ನಟ ಹೇಗಿರಬೇಕು ಎಂಬುದನ್ನು ಡಾ.ರಾಜ್ ಕುಮಾರ್ ನೋಡಿ ಕಲಿಯಬೇಕು. ನಿಮ್ಮ ಪ್ರತಿಯೊಂದು ಹೆಜ್ಜೆಯೂ ಮುಖ್ಯವಾಗುತ್ತದೆ. ಸಾಮಾನ್ಯರ ವೈಯಕ್ತಿಕ ಜೀವನ ಫೋಕಸ್ ಆಗುವುದಿಲ್ಲ. ನಿಮ್ಮ ಜೀವನ ಹೆಚ್ಚು ಫೋಕಸ್ ಆಗಲಿದೆ. ಹಾಗಾಗಿ ನಾನು ಮಾತನಾಡುತ್ತೀದ್ದೇನೆ ಎಂದರು.

ನನ್ನ ಟ್ರ್ಯಾಕ್ ರೆಕಾರ್ಡ್ ನೋಡಿದ್ದೀರಾ? ನನ್ನ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಸಮಾಜದ ಕಾಳಜಿಯಿಂದ ಮಾತನಾಡುತ್ತಿದ್ದೇನೆ. ಸಾಮಾನ್ಯ ಸಪ್ಲೈಯರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಕೊಡಿಸಲು ಮುಂದೆ ಬಂದಿದ್ದೇನೆ ಎಂದರು.

ಇದು ಜಾತಿ ವಿಷಯ ಅಲ್ಲ. ಶೋಷಿತನಿಗೆ ಅನ್ಯಾಯವಾಗಿದೆ. ಆಡಿಯೋದಲ್ಲಿ ಹೋಟೆಲ್ ಮಾಲೀಕ ತಪ್ಪೊಪ್ಪಿಕೊಂಡಿದ್ದಾರೆ. ಅವರು ವಿಸ್ತಾರವಾಗಿ ಮಾತಾಡಿದ್ದು, ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಸಂದೇಶ್ ಜೊತೆ ಮಾತನಾಡಿದ್ದು ನಾನೇ. ಕೇವಲ ಅವರೊಬ್ಬರ ಜೊತೆಯಲ್ಲ ಅಲ್ಲಿನ ಸಿಬ್ಬಂದಿ ಜೊತೆಯೂ ಸಹ ಮಾತನಾಡಿದ್ದೇನೆ ಎಂದು ಹೇಳಿದರು.

ಮೈಸೂರಿನ ಮಾಧ್ಯಮದ ಮೂಲಕ ಹಲವು ವಿಚಾರದಲ್ಲಿ ನೊಂದವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನ್ಯಾಯಲಯದ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ದರ್ಶನ್‍ನಿಂದ ಯಾವುದೇ ಕಾಲ್ ಬಂದಿಲ್ಲ. ಯಾರಿಂದಲೂ ಬೆದರಿಕೆ ಕರೆ ಬಂದಿಲ್ಲ. ರಾಜಿ ಸಂಬಂಧ ಯಾವುದೋ ಕಾಲ್ ಬಂದಿತ್ತು ಎಂದರು.

Leave a Reply

error: Content is protected !!
LATEST
KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ