ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಎಲ್ಲರ ಪರಿಶ್ರಮದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ ಜನ ಸೇವಕ ಸಮಾವೇಶದಲ್ಲಿ ಮಾತನಾಡಿ, ಗ್ರಾಪಂನಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಶಕ್ತಿಯುತವಾಗಿದೆ ಎಂದು ಅಮಿತ್ ಶಾ ಸಂತಸ ಪಟ್ಟರು.
ಇನ್ನು ಪಕ್ಷದ ಚಿಹ್ನೆಯಡಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮುಂದಿನ ದಿನಗಳಲ್ಲಿ ನಡೆಯಲಿದ್ದು, ಅದರಲ್ಲಿ ಇನ್ನಷ್ಟು ಗೆಲುವು ಸಾಧಿಸಬೇಕು. ಅದಕ್ಕೆ ನಿಮ್ಮ ಪರಿಶ್ರಮವು ಮುಖ್ಯ ಎಂದು ಗ್ರಾಪಂ ಸದಸ್ಯರಿಗೆ ಸಲಹೆ ನೀಡಿದರು.
ಇಲ್ಲಿಯವರೆಗೆ ನೀವು ನಿಮ್ಮ ಮನೆಯ ಜವಾಬ್ದಾರಿ ಹೊತ್ತಿದ್ದೀರಿ. ಈಗ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಈಗ ನಿಮ್ಮ ಹಳ್ಳಿಯ ಜವಾಬ್ದಾರಿಯನ್ನು ಹೊತ್ತಿದ್ದೀರಿ. ನಿಮ್ಮ ಶ್ರಮ ಹೇಗಿರಬೇಕು ಎಂದರೆ, ಗ್ರಾಮದ ಉದ್ಧಾರ. ಅದು ಇಡೀ ದೇಶಕ್ಕೆ ಮಾದರಿಯಾಗುವಂತೆ ಇರಬೇಕು. ಆ ಮಟ್ಟದಲ್ಲಿ ನಿಮ್ಮ ಶ್ರಮ ಇರಬೇಕು ಎಂದು ಕರೆ ನೀಡಿದರು.
ಇನ್ನು ವಿಶ್ರಾಂತಿ ಪಡೆಯದೆ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೇ ನಮಗೆ ಆದರ್ಶ. ಅವರಂತೆ ರಾಜ್ಯದ ಅಭಿವೃದ್ಧಿಗೆ ನಾವು ಶ್ರಮಿಸುತ್ತಿದ್ದು, ನೀವು ನಿಮ್ಮ ಗ್ರಾಮಗಳ ಅಭಿವೃದ್ಧಿಗೆ ಶ್ರಮಸಬೇಕು. ಅಸಾಧ್ಯವೆಂಬುವುದು ಯಾವುದು ಇಲ್ಲ. ಜಿಲ್ಲೆಯ ಅಧ್ಯಕ್ಷ ಉಪಾಧ್ಯಕ್ಷರ ಶ್ರಮದಿಂದಲ್ಲೂ ಇಷ್ಟೆಲ್ಲರೂ ಚುನಾಯಿತರಾಗಿದ್ದೀರಿ ಎಂದು ಹೇಳಿದರು.
ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಹೇಗಿರಬೇಕು ಎಂದರೆ ನಿಮ್ಮ ಹಳ್ಳಿಯ ಜನ ನೀವು ಗ್ರಾಮದಲ್ಲಿ ಮಾಡಿರುವ ಅಭಿವೃದ್ಧಿಯನ್ನು ನೋಡಿ ಇವರಂತೆ ಇರಬೇಕು ಎಂದು ಹೇಳುವ ರೀತಿಯಲ್ಲಿ ಇರಬೇಕು. ಆ ಮಟ್ಟದಲ್ಲಿ ನಿಮ್ಮ ಶ್ರಮ ಹಳ್ಳಿಯ ಉದ್ಧಾರಕ್ಕೆ ಮೀಸಲಿರಬೇಕು ಎಂದು ಸಲಹೆ ನೀಡಿದರು.
ನೀವು ಮಾತನಾಡಬಾರದು ನೀವು ಮಾಡಿರುವ ಕೆಲಸ ಮಾತನಾಡಬೇಕು. ಇನ್ನು ಗ್ರಾಮಗಳ ಅಭಿವೃದ್ಧಿ ನಿಮ್ಮ ಕೈಯಲ್ಲೇ ಇದೆ ಅದನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಂಡು ಒಳ್ಳೆ ಹೆಸರು ಬರುವಂತೆ ನಡೆದುಕೊಳ್ಳಿ ಎಂದು ಹೇಳಿದರು.