ಕೊರೊನಾ ಸೋಂಕು ಇಡೀ ವಿಶ್ವವನ್ನೇ ಭಯಾನಕವಾಗಿ ಕಾಡುತ್ತಿದೆ. ಈ ನಡುವೆ ಕೆಲ ವೈದ್ಯಕೀಯ ತಜ್ಞರಿಂದ ಹಿಡಿದು ಸಾಮಾನ್ಯ ಜನರು ಕೊರೊನಾ ಸೋಂಕಿನ ಬಗ್ಗೆ ನೀಡಿರುವ ಹೇಳಿಕೆಯನ್ನು ವಿಜಯಪಥ ನಿಮ್ಮ ಮಾತು ನಮ್ಮ ಬರವಣಿಗೆಯಲ್ಲಿ ಹಂಚಿಕೊಂಡಿದೆ.
ಮೊದಲನೆಯದಾಗಿ ಈ ಸೋಂಕು ಕಾಡುತ್ತಿರುವುದು ಜ್ವರ ಅಥವಾ ಕೆಮ್ಮು ಅಥವಾ ಮೈ ಕೈ ನೋವು ಅಥವಾ ಶೀತ ಅಥವಾ ಉಸಿರಾಟದ ತೊಂದರೆ ಅಥವಾ ಪಲ್ಸ್‌ರೇಟ್‌ನಲ್ಲಿ ವ್ಯತ್ಯಾಸವಾಗುವುದು ಹೀಗೆ ಹಲವು ವಿಧಗಳಲ್ಲಿ ಕಾಡುತ್ತಿದೆ. ಈ ಎಲ್ಲಾ ಲಕ್ಷಣಗಳು ಇಲ್ಲವೇ, ಇದರಲ್ಲಿ ಯಾವುದಾದರೊಂದು ಲಕ್ಷಣವಿದ್ದರೂ ಅದು ಕೊರೊನಾ ಪಾಸಿಟಿವ್ ಎಂದು ಲ್ಯಾಬ್ ವರದಿಗಳು ಹೇಳುತ್ತವೆ.
ಇಲ್ಲ ಈ ಎಲ್ಲ ಲಕ್ಷಣಗಳಿದ್ದರೂ ಕೊರೊನಾ ಸೋಂಕು ಇಲ್ಲ ನೆಗೆಟಿವ್ ಎಂದೂ ಕೆಲವರಿಗೆ ಲ್ಯಾಬ್ ವರದಿ ಬರುತ್ತಿದೆ. ಅಂದರೆ ಕೊರೊನಾ ಒಂದು ನಿರ್ದಿಷ್ಟವಾಗಿ ಇದೆ ಎಂದು ಹೇಳಲಾಗದ ರೋಗ ಎಂದಾಯಿತು. ಅಂದರೆ ಕೊರೊನಾ ಸೋಂಕು ಇರುವ ರೋಗಿ ಸಾಮಾನ್ಯವಾಗಿ ಜ್ವರ, ಕೆಮ್ಮ, ನೆಗಡಿ, ಉಸಿರಾಟದ ತೊಂದರೆ ಹೀಗೆ ಆತನಿಗೆ ಯಾವ ಸಮಸ್ಯೆ ಇದೆಯೋ ಆ ರೋಗಕ್ಕೆ ಔಷಧ ತೆಗೆದುಕೊಳ್ಳುತ್ತಾನೆ. ಅಥವಾ ವೈದ್ಯರು ನೀಡುತ್ತಿದ್ದಾರೆ.
ಅಂದರೆ ಇಲ್ಲಿ ನಾವು ಪ್ರಮುಖವಾಗಿ ಗಮನಿಸಬೇಕಾದ ಅಂಶ ಕೊರೊನಾ ಪಾಸಿಟಿವ್ ಆದ ರೋಗಿಗಳಿಗೆ ಆತನ ಶರೀರದಲ್ಲಿ ಏನಾಗುತ್ತಿದೆಯೋ ಆ ಆಧಾರದ ಮೇಲೆ ಔಷಧಗಳನ್ನು ಕೊಡಲಾಗುತ್ತಿದೆ. ಜತೆಗೆ ಬಿಸಿ ಬಿಸಿಯಾದ ಊಟ ಬಿಸಿ ನೀರನ್ನು ಉಪಯೋಗಿಸಲು ಹೇಳಲಾಗುತ್ತಿದೆ.
ಈ ಕೊರೊನಾ ಸಾಮಾನ್ಯವಾಗಿ ಒಂದು ವಾರ ಇಲ್ಲ ಹೆಚ್ಚೆಂದರೆ 14 ದಿನಗಳಲ್ಲಿ ಗುಣಮುಖವಾಗುತ್ತಿದೆ. ಅಂದರೆ ನಮಗೆ ಜ್ವರ ಸೇರಿದಂತೆ ಸಾಮಾನ್ಯವಾಗಿ ಬರುವ ರೋಗಗಳಾದ ನೆಗಡಿ, ಕೆಮ್ಮು, ಮೈ ಕೈ ನೋವು ಸೇರಿ ಇತರ ಎಲ್ಲ ರೋಗಗಳು ಇದೇ ರೀತಿ ವಾರದಿಂದ 14 ದಿನದಲ್ಲಿ ವಾಸಿಯಾಗುತ್ತವೆ. ಅಂದಮೇಲೆ ಈ ಕೊರೊನಾ ಕೂಡ ಒಂದು ದೃಢವಾದ ಇದು ಇಂಥದ್ದೆ ರೋಗ ಎಂದು ಹೇಳಲಾದ ರೋಗವಾಗಿದ್ದು, ಹಲವಾರು ವಿಧಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಕೆಲ ವೈದ್ಯರು (ಇಲ್ಲಿ ಎಲ್ಲಾ ವೈದ್ಯರು ಕೊರೊನಾ ಇದೆ ಅದು ಭಯಾನಕ ಕಾಯಿಲೆ ಎಂದು ಹೇಳಿಲ್ಲ) ಹೇಳುತ್ತಿದ್ದಾರೆ.
ಇನ್ನು ಕೊರೊನಾ ರೋಗ ಬಂದಿದೆ ಎಂದು ಹೇಳುತ್ತಿರುವ ವೈದ್ಯ ಸಮೂಹ ವಿಶೇಷವಾದ ಚಿಕಿತ್ಸೆಯನ್ನೇನೂ ಮಾಡುತ್ತಿಲ್ಲ. ಅವರು ಮಾಡುತ್ತಿರುವುದು ಉಸಿರಾಟದ ತೊಂದರೆ ಇರುವವರಿಗೆ ಆಕ್ಸಿಜನ್ ಅಳವಡಿಸುತ್ತಿದ್ದಾರೆ. ಜ್ವರದ ಲಕ್ಷಣ ಇರುವವರಿಗೆ ಡೋಲೊ 650 ಮಾತ್ರೆ ಕೊಡೊತ್ತಿದ್ದಾರೆ. ಇನ್ನು ಕೆಮ್ಮು ಇರುವವರಿಗೆ ಕೆಮ್ಮಿನ ಶಿರಪ್ ನೀಡುತ್ತಿದ್ದಾರೆ. ಹೀಗೆ ಸಾಮಾನ್ಯವಾಗಿ ನಮಗೆ ಈ ಸಮಸ್ಯೆ ಇದೆ ಎಂದು ಹೇಳುವ ರೋಗಿಗೆ ಅದಕ್ಕೆ ಬೇಕಾದ ಔಷಧ ಕೊಡುತ್ತಿದ್ದಾರೆ. ಅಷ್ಟೇ ಅಲ್ಲ ಆ ಔಷಧಗಳನ್ನು ತೆಗೆದುಕೊಳ್ಳುವ ಕೊರೊನಾ ಸೋಂಕಿತ ಗುಣಮುಖನಾಗಿ ಎಲ್ಲರಂತೆ ಇರುತ್ತಾನೆ.
ಅಂದರೆ ಕೊರೊನಾದಿಂದ ಸಾವಿನ ಪ್ರಮಾಣವು ಕೂಡ ತುಂಬಾ ತುಂಬ ಕಡಿಮೆ ಇದೆ. ಅಂದರೆ ನೂರರಲ್ಲಿ 2ರಿಂದ 3.5 ರಷ್ಟು ಮಂದಿಯಷ್ಟೇ ಮೃತಪಡುತ್ತಿದ್ದಾರೆ. ಇದನ್ನು ನಾವು ಗಮನಿಸಿದರೆ ಕೊರೊನಾ ಎಂಬ ರೋಗವೇ ಇಲ್ಲ ಎಂದು ಹೇಳಬಹುದೇನೋ?ನನಗೆ ಗೊತ್ತಿಲ್ಲ. ಆದರೂ ಜನರನ್ನು ದಿಕ್ಕು ತಪ್ಪಿಸಿ ಕೊರೊನಾ ಆರ್ಭಟ ಎಂದು ಬೊಬ್ಬೆ ಹೊಡೆಯುತ್ತಿರುವ ಕೆಲವರನ್ನು ನೋಡಿದರೆ ಎಂಥ ಕೋಪಬರುವುದು ಎಂಬುದನ್ನು ಈಗಾಗಲೇ ಕೆಲವರು ನಿಮ್ಮ ವಿಜಯಪಥ ಬಳಿ ಹಂಚಿಕೊಂಡಿದ್ದಾರೆ.
ಇನ್ನು ಒಂದು ಉದಾ: ಒಂದೇ ಕುಟುಂಬದ ಎಲ್ಲಾ ನಾಲ್ವರು ಸದಸ್ಯರಿಗೂ ಅವರಲ್ಲಿ ಇಬ್ಬರಿಗೆ ಜ್ವರ ಕಾಣಿಸಿಕೊಂಡಿತ್ತು. ಇನ್ನಿಬ್ಬರು ಸಾಮಾನ್ಯರಂತೆಯೇ ಇದ್ದರು. ಈ ನಾಲ್ವರನ್ನು ಕೋವಿಡ್ ಟೆಸ್ಟ್ ಮಾಡಿಸಿದಾಗ ಎಲ್ಲರಲ್ಲೂ ಕೊರೊನಾ ಪಾಸಿಟಿವ್ ಎಂದು ವರದಿ ಬಂತು. ಕೂಡಲೇ ಅವರಲ್ಲಿ ಒಬ್ಬರನ್ನು ತಾಲೂಕಿನ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಅವರು 12 ಗಂಟೆಯಲ್ಲೇ ಆ ಆಸ್ಪತ್ರೆಯಿಂದ ಮನೆಗೆ ಬಂದರು. ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡರು. ಈಗ ನಾಲ್ವರು ಸಾಮಾನ್ಯರಂತೆ ಇದ್ದಾರೆ. ಅದರಲ್ಲೂ ಇನ್ನಿಬ್ಬರಿಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲದಿದ್ದರೂ ಅವರು ಇತರರಂತೆ ಇದ್ದರೂ ಅವರಲ್ಲೂ ಕೊರೊನಾ ಪಾಸಿಟಿವ್ ಆಗಿದ್ದು ಹೇಗೆ? ಮತ್ತೆ ಅವರು ಯಾವುದೇ ಚಿಕಿತ್ಸೆ ಪಡೆಯದೆ ಗುಣಮುಖರಾದದ್ದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಒಂದೆ. ಅದು ಧೈರ್ಯ ಎಂದು ಹೇಳಬಹುದೇನೋ.
ಕೊರೊನಾ ಸೋಂಕಿನ ಬಗ್ಗೆ ಅಂತಾರಾಷ್ಟ್ರೀಯ ವೈದ್ಯರ ತಂಡ ತೆರೆದಿಟ್ಟ ಸತ್ಯ ಏನು?
ಇನ್ನು ಕೋವಿಡ್-19 ಈ ಹೆಸರು ಹೇಗೆ ಬಂತು ಕೋವಿಡ್ -19 ಅಂಥಾನೆ ಹೆಸರಿಟ್ಟವರು ಯಾರು. ಹೀಗೆ ಹಲವಾರು ಪ್ರಶ್ನೆಗಳನ್ನು ನಮ್ಮನ್ನು ಕಾಡೆ ಇರದು.
ಒಂದು ಮಾಹಿತಿ ಪ್ರಕಾರ 2015ರಲ್ಲೇ ವೈದ್ಯ ಮಾಫಿಯಾದ ಒಂದು ತಂಡ ಕೋವಿಡ್-19 ಎಂದು ಹೆಸರಿಟ್ಟು ಅದನ್ನು 2019ರ ಡಿಸೆಂಬರ್ ವೇಳೆಗೆ ಯೋಜಿತವಾಗಿ ಹರಡಿದೆ. ಇದಕ್ಕೆ ಸಮಂಜಸವಾದ ನಿದರ್ಶನವೆಂದರೆ ಪಿಪಿಇ ಕಿಟ್! ಈ ಕಿಟ್ ಹೀಗೆ ಇರಬೇಕು ಎಂದು ಹೇಳಿದ ವೈದ್ಯರು ಯಾರು? ಕೋವಿಡ್‌ಗೆ ಈ ಮಾತ್ರೆಗಳನ್ನೇ ತೆಗೆದುಕೊಳ್ಳಬೇಕು ಎಂದು ಸೂಚಿಸಿದ ವೈದ್ಯರು ಯಾರು? ಲ್ಯಾಬ್‌ಗಳಿಗೆ ಈ ಮಾದರಿಯ ಲಕ್ಷಣವಿರುವುದು ಕೋವಿಡ್ ಪಾಸಿಟಿವ್ ಎಂದು ಹೇಳಿದವರು ಯಾರು? ಇದೆಲ್ಲದಕ್ಕೂ ಉತ್ತರ ಹುಡುಕಲು ಹೋದರೆ ಇದೊಂದು ವೈದ್ಯ ಮಾಫಿಯಾದ ಕೈವಾಡ ಇದೆ ಎನ್ನುವುದು ಪಕ್ಕವಾಗುತ್ತದೆ.
ಅಂದ ಮೇಲೆ ಕೊರೊನಾ ಸೋಂಕು ಎಂಬುವುದು ಡೆಂಘೆ, ಚಿಕೂನ್‌ಗುನ್ಯಕಿಂತಲು ಭಯನಾಕ ರೋಗವೇನಲ್ಲ ಎಂಬುದನ್ನು ಕೆಲ ತಜ್ಞ ವೈದ್ಯರು ದೃಢಪಡಿಸಿದ್ದಾರೆ. ಈ ಕೊರೊನಾಕ್ಕೆ ಯಾವುದೇ ಮಾಸ್ಕ್, ಪಿಪಿಇ ಕಿಟ್ ಇಲ್ಲದೆ ಇಂದಿಗೂ ಸಾವಿರಾರು ರೋಗಿಗಳನ್ನು ಹಲವು ವೈದ್ಯರು ಗುಣಪಡಿಸುತ್ತಿದ್ದಾರೆ. ಆ ಕೊರೊನಾ ಪೀಡಿತರೆಲ್ಲ ಚಿಕಿತ್ಸೆ ಪಡೆದು ಅರಾಮವಾಗಿದ್ದಾರೆ. ಇಷ್ಟಾದರೂ ವೈದ್ಯ ಮಾಫಿಯಾ ಕೋವಿಡ್-19 ಎಂದು 2015ರಲ್ಲೇ ಒಂದು ಯೋಜನೆ ರೂಪಿಸಿ ಅದನ್ನು ವ್ಯವಸ್ಥಿತವಾಗಿ 2019ರಲ್ಲಿ ಹರಡಿದೆ. ಇನ್ನು ಈ ಪ್ರಾಜೆಕ್ಟ್ ಮುಗಿಸುವುದಕ್ಕೂ ಸಮಯ ನಿಗದಿ ಮಾಡಿದು ಅದು 2025ಕ್ಕೆ ಮುಗಿಯಲಿದೆ ಎಂದು ಈಗಾಗಲೇ ಯೋಜನೆ ರೂಪಿಸಿರುವ ಇದೇ ವೈದ್ಯ ಮಾಫಿಯಾ ಗ್ಯಾಂಗ್ ಉಲ್ಲೇಖಿಸಿರುವುದು ಈಗಾಗಲೇ ಸಾಮಾಜಿ ಜಾಲತಾಣದಲ್ಲಿ ಹರಿದಾಡಿದೆ. ಕೆಲ ಮಾಧ್ಯಮಗಳಲ್ಲೂ ವರದಿ ಬಂದಿದೆ.
ಸೋ ಇನ್ನಾದರೂ ಈ ಪಿತೂರಿ ಮಾಡಿರುವ ಮೆಡಿಕಲ್ ಮಾಫಿಯಾದ ಹುಟ್ಟಡಗಿಸಲು ವಿಶ್ವಸಂಸ್ಥೆ ಮುಂದಾಗಬೇಕು. ನಾವು ಈ ಮಾಫಿಯಾದಿಂದ ಆರ್ಥಿಕವಾಗಿ ಮಾನಸಿಕವಾಗಿಯೂ ಹಿಂದೆ ಬಿದ್ದರುವುದನ್ನು ವಿಶ್ವದ ಎಲ್ಲ ದೇಶಗಳು ಮನಗಾಣಬೇಕು. ಈ ಮೂಲಕ ವಿಶ್ವ ಮಾನವರು ನೆಮ್ಮದಿಯಾಗಿದೆ ಬದುಕಲು ಬಿಡಬೇಕು ಎಂಬುವುದು ನಮ್ಮ ಕಳಕಳಿ.
ಇಲ್ಲಿ ಬಹುಮುಖ್ಯವಾದ ವಿಷಯವನ್ನು ಪ್ರತಿಯೊಬ್ಬರೂ ಗಮನಿಸಬೇಕು. ಅದೇನೇಂದರೆ ಕೊರೊನಾ ಇಲ್ಲ ಎಂದು ನೀವು ಹೇಳುತ್ತಿದ್ದೀರಿ ಆದರೆ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವ ಬಗ್ಗೆ ಇನ್ನು ಈಗಾಗಲೇ ಇಷ್ಟು ಮಂದಿ ಸಾವನ್ನಪ್ಪಿರುವ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಳಬಹುದು.
ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ನೀಡುತ್ತೇವೆ ಅಲ್ಲಿವರೆಗೂ …… ನಮಸ್ತೆ