NEWSದೇಶ-ವಿದೇಶ

ಜ.16ರಂದು ಲಸಿಕೆ ಅಭಿಯಾನ: ದೇಶದ ವಿವಿಧ ಭಾಗಗಳಿಗೆ ತಲುಪಿದ ಕೊರೊನಾ ಔಷಧ

ವಿಜಯಪಥ ಸಮಗ್ರ ಸುದ್ದಿ

ಪುಣೆ: ದೇಶಾದ್ಯಂತ ಸಂಕ್ರಾಂತಿ ಮುಗಿದ ಬಳಿಕ ಜನವರಿ 16ರಂದು ಲಸಿಕೆ ಅಭಿಯಾನ ನಡೆಯಲಿದ್ದು ಅದಕ್ಕೂ ಮೊದಲೇ ಇಂದು ಕೋವಿಶೀಲ್ಡ್ ದೇಶದ ವಿವಿಧ ಭಾಗಗಳಿಗೆ ತಲುಪಲಿದೆ. ತೀವ್ರ ಭದ್ರತೆ ನಡುವೆ ಮೊದಲ ಹಂತದಲ್ಲಿ ಲಸಿಕೆಯನ್ನು ಮೂರು ಟ್ರಕ್ ಗಳಲ್ಲಿ ದೇಶದ ವಿವಿಧ ಕಡೆಗಳಿಗೆ ತಲುಪಿಸಲಾಗುತ್ತಿದೆ.

ಇನ್ನು ಮೊದಲ ಹಂತದ ರವಾನೆಯಲ್ಲಿ 1088 ಕೆಜಿ ಕೋವಿಶೀಲ್ಡ್ ಲಸಿಕೆ ಹೊತ್ತ 34 ಪೊಟ್ಟಣಗಳನ್ನು ಪುಣೆಯಿಂದ ದೆಹಲಿಗೆ ರವಾನಿಸಲಾಗಿದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ತಿಳಿಸಿದ್ದಾರೆ.

ಜತೆಗೆ ಕೋವಿಶೀಲ್ಡ್ ಲಸಿಕೆಯನ್ನು ಹೊತ್ತ ಸ್ಪೈಸ್ ಜೆಟ್ ವಿಮಾನ ದೆಹಲಿ ತಲುಪಿದೆ. ಅದರ ಜತೆಗೆ ಮೂರು ಟ್ರಕ್ ಗಳಲ್ಲಿ ದೇಶದ 13 ಕಡೆಗಳಿಗೆ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ನಿಂದ ಕೋವಿಡ್-19 ಲಸಿಕೆ ಪೂರೈಕೆಯಾಗುತ್ತಿದೆ.

ಇಂದು ಪುಣೆಯಿಂದ ದೆಹಲಿ, ಚೆನ್ನೈ, ಕೋಲ್ಕತಾ, ಗುವಾಹಟಿ, ಶಿಲ್ಲಾಂಗ್, ಅಹಮದಾಬಾದ್, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಪಾಟ್ನಾ, ಬೆಂಗಳೂರು, ಲಕ್ನೊ ಮತ್ತು ಚಂಡೀಗಢಕ್ಕೆ 56.5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ 9 ವಿಮಾನಗಳಲ್ಲಿ ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಿಮಾನದಲ್ಲಿ ರವಾನೆಯಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಎಸ್ ಪುರಿ ತಿಳಿಸಿದ್ದಾರೆ.

ಒಟ್ಟು 8 ವಿಮಾನಗಳು, ಎರಡು ಕಾರ್ಗೊ ವಿಮಾನಗಳು ಮತ್ತು ಇತರ ನಿತ್ಯದ ವಾಣಿಜ್ಯ ವಿಮಾನಗಳು ಲಸಿಕೆಯನ್ನು ಹೊತ್ತೊಯ್ಯಲಿವೆ. ಇಂದು ಬೆಳಗ್ಗೆ 10 ಗಂಟೆಗೆ ಎಲ್ಲಾ ಲಸಿಕೆಗಳು ವಿತರಣೆಯಾಗಲಿವೆ ಎಂದು ವಿವರಿಸಿದರು.

ಪುಣೆ ವಿಮಾನ ನಿಲ್ದಾಣದಿಂದ ಲಸಿಕೆಯನ್ನು ಹೊತ್ತ ಮೊದಲ ವಿಮಾನ ದೆಹಲಿಗೆ ಹೊರಡಲಿದೆ ಎಂದು ಕೋವಿಶೀಲ್ಡ್ ಲಸಿಕೆಯನ್ನು ಪುಣೆಯಿಂದ ವಿವಿಧ ವಿಮಾನ ನಿಲ್ದಾಣಗಳಿಗೆ ತಲುಪಿಸುವ ಹೊಣೆ ಹೊತ್ತಿರುವ ಎಸ್.ಬಿ.ಲಾಜಿಸ್ಟಿಕ್ಸ್ ತಂಡದ ಸಂದೀಪ್ ಬೊಸಲೆ ತಿಳಿಸಿದ್ದಾರೆ.

ಕಳೆದೊಂದು ತಿಂಗಳಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ 5 ಕೋಟಿಗೂ ಅಧಿಕ ಮಂದಿಗೆ ಕೋವಿಡ್-19 ಲಸಿಕೆಯನ್ನು ಹಾಕಲಾಗಿದೆ. ಇಂದು ದೆಹಲಿ, ಕರ್ನಲ್, ಅಹಮದಾಬಾದ್, ಚಂಡೀಗಢ, ಲಕ್ನೊ, ಚೆನ್ನೈ, ಬೆಂಗಳೂರು, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಕೋಲ್ಕತ್ತಾ ಮತ್ತು ಗುವಾಹಟಿಗಳಿಗೆ ತಲುಪಲಿವೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...