ನ್ಯೂಡೆಲ್ಲಿ: ದಾಖಲೆಯ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆಯಾಗುವ ಪರ್ವ ದೇಶದಲ್ಲಿ ಮುಂದುವರಿಸಿದ್ದು, ಭಾನುವಾರ ಕೂಡ ಭಾರತದಲ್ಲಿ 94,372 ಜನರಲ್ಲಿ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 47 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕೆಲ ದಿನಗಳಿಂದ ಪ್ರತಿದಿನ 90,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ಇನ್ನು 3 ದಿನಗಳಲ್ಲಿ ಸೋಂಕಿತರ ಸಂಖ್ಯೆ 50 ಲಕ್ಷ ಗಡಿ ದಾಟುವುದು ಖಚಿತವಾಗಿದೆ. ಪ್ರಸ್ತುತ ದೇಶದಲ್ಲಿ ಸೋಂಕಿತರ ಸಂಖ್ಯೆ 47,54,357ಕ್ಕೆ ತಲುಪಿದೆ.
ಈ ನಡುವೆ 24 ಗಂಟೆಗಳಲ್ಲಿ 1,114 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಮೃತರ ಸಂಖ್ಯೆ 78,586ಕ್ಕೆ ಏರಿಕೆಯಾಗಿದೆ.
ದೇಶದ 47,54,357 ಮಂದಿ ಸೋಂಕಿತರ ಪೈಕಿ ಈ ವರೆಗೂ 37,02,596 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, 9,73,175 ಸಕ್ರಿಯ ಪ್ರಕರಣಗಳು ದೇಶದ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 22,084 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದು, 391 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ನಿನ್ನೆ ಮತ್ತೆ ಆಂಧ್ರಪ್ರದೇಶದಲ್ಲಿ 9901 (67 ಸಾವು), ಕರ್ನಾಟಕ 9140 (94 ಸಾವು), ಉತ್ತರಪ್ರದೇ 6784 (67 ಸಾವು) ಹಾಗೂ ನ್ಯೂಡಿಲ್ಲಿಯಲ್ಲಿ 4321 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 28 ಮಂದಿ ಬಲಿಯಾಗಿದ್ದಾರೆ.
ಭಾನುವಾರ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆಯ ವಿವರದ ಪಟ್ಟಿ
ಇಂದಿನ 12/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/blIS832vkL pic.twitter.com/xOrXgI8p1Y
— K'taka Health Dept (@DHFWKA) September 12, 2020