CrimeNEWSನಮ್ಮಜಿಲ್ಲೆನಮ್ಮರಾಜ್ಯ

ವಿಧವೆಯೊಂದಗಿನ ಸರಸಕ್ಕೆ ಅಡ್ಡಿಯಾದ ಪತ್ನಿ ಹತ್ಯೆಗೈದ ಪಾತಕಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂದು ಪತ್ನಿಯ ಕತ್ತು ಕೊಯ್ದು, ತಲೆ ಮೇಲೆ ಸಿಮೆಂಟ್​ ಇಟ್ಟಿಗೆ ಎತ್ತಿಹಾಕಿ ಭೀಕರವಾಗಿ ಹತ್ಯಮಾಡಿರುವ ಘಟನೆ  ಮುನ್ನೇಕೊಳಲುನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಆಂಧ್ರಪದೇಶದ ಚಿತ್ತೂರು ಮೂಲದ ನಾಗೇಶ್ ಎಂಬಾತನೆ ಪತ್ನಿ ಸಂಧ್ಯಾಳ  ಹತ್ಯೆಯಾಡಿದ್ದವ.  ನಂತರ ಈತ ಯಾರೋ ನನ್ನ ಪತ್ನಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರನ್ನು ನಂಬಿಸಲು ಸ್ಕೆಚ್‌ ಹಾಕಿ, ಅದರಂತೆ ಪ್ರಾಥಮಿಕ ತನಿಖೆ ವೇಳೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿತ್ತು. ಆದರೆ ಕೆಲವೆ ಗಂಟೆಯಲ್ಲಿ ಪ್ರಕರಣ ಭೇದಿಸಿದ ಮಾರತ್ತಳ್ಳಿ  ಪೊಲೀಸರು  ಕೊಲೆಯ ರಹಸ್ಯ ಕೇಳಿ ಸ್ವತಃ  ಬೆಚ್ಚಿಬಿದ್ದಿದ್ದಾರೆ.

ಅದೇನಪ್ಪ ಅಂದ್ರೆ, ಪತಿಯೇ ಆಕೆಯನ್ನು ಹತ್ಯೆಮಾಡಿ  ಬಳಿಕ ಪೊಲೀಸರ ದಾರಿ ತಪ್ಪಿಸಲು ಯಾರೋ ಅತ್ಯಾಚಾರ ಮಾಡಿ ಕೊಂದಿದ್ದಾರೆ ಎಂಬಂತೆ ಮೃತದೇಹದ ಬಟ್ಟೆ ಹರಿದು, ಸ್ಥಳದಲ್ಲಿ ಮಧ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್ ಲೋಟವಿಟ್ಟು ಊರಿಗೆ ಪರಾರಿಯಾಗಿದ್ದ.

ವಿಧೆವೆಯ ಮೋಹ ಪಾಸ!: ನಾಗೇಶನಿಗೆ ವಿಧೆವೆಯೊಬ್ಬಳ ಜೊತೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರವಾಗಿ ಪತ್ನಿಯೊಂದಿಗೆ ನಿತ್ಯ ಜಗಳವಾಡುತ್ತಿದ್ದ,  ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿರುವ ಈಕೆಯನ್ನೇ ಮುಗಿಸಿ ಬಿಟ್ಟರೆ ನಮ್ಮ ಸರಸ ಸಲ್ಲಾಪಕ್ಕೆ ಯಾರೂ ಅಡ್ಡಿಯಾಗುವುದಿಲ್ಲ ಎಂಬ ಭ್ರಮೆಯಲ್ಲಿ ಈ ಕೃತ್ಯ ಎಸಗಿದ್ದಾನೆ.

ಕೊಲೆ ಮಾಡುವುದಕ್ಕೂ ಮುನ್ನಾ ನಾಗೇಶ ಒಂದು ಡ್ರಾಮವನ್ನೇ ಮಾಡಿದ್ದಾನೆ. ಅದೇನೆಂದರೆ ಕೊಲೆಯ ಹಿಂದಿನ ದಿನವೇ ಊರಿಗೆ ಹೋಗುವುದಾಗಿ ಪತ್ನಿಗೆ ಹೇಳಿ, ಅದರಂತೆ ತಾಯಿಯೊಂದಿಗೆ ಊರಿಗೆ ಹೊರಟಿದ್ದ. ನಂತರ ಮಾರ್ಗಮಧ್ಯೆ ಇಳಿದು ಬೆಂಗಳೂರಿಗೆ ವಾಪಸ್ಸಾಗಿದ್ದ. ಮಧ್ಯರಾತ್ರಿ ಮನೆಗೆ ಬಂದ ಪಾತಕಿ ನಿದ್ರೆಯಲ್ಲಿದ್ದ ಹೆಂಡತಿ ತಲೆ ಮೇಲೆ ಸಿಮೆಂಟ್  ಇಟ್ಟಿಗೆ ಎತ್ತಾಕಿ, ಚಾಕುವಿನಿಂದ ಕತ್ತು ಕೊಯ್ದು ಬರಬರ್ಬರವಾಗಿ ಹತ್ಯಮಾಡಿದ್ದಾನೆ.

ಬುಧವಾರ ಬೆಳಗ್ಗೆ ಮಕ್ಕಳು ನಿದ್ರೆಯಿಂದ ಎಚ್ಚರವಾದಾಗ ವಿಷಯ ಗೊತ್ತಾಗಿದೆ.  ಇನ್ನು ಇತ್ತ ತನಗೇನೂ ಗೊತ್ತಿಲ್ಲ ಎಂಬಂತೆ ನಾಟಕ ಮಾಡುತ್ತಿದ್ದ ನಾಗೇಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತ್ನಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್