NEWSನಮ್ಮಜಿಲ್ಲೆನಮ್ಮರಾಜ್ಯ

ಘಟಕ 28ರ ಮಹಮದ್‌ ಇಸ್ಮೈಲ್‌- ಅಂದು ಬಿಎಂಟಿಸಿ ಚಾಲಕ ಇಂದು ಭಿಕ್ಷುಕ

ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗಿಯಾಗದಿದ್ದರೂ ಶಿಕ್ಷೆ l ಬೇರೆ ದಾರಿ ಕಾಣದೆ ಭಿಕ್ಷುಕನಾದ ಸಾರಿಗೆ ನೌಕರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಎಂಟಿಸಿ 28ನೇ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಮದ್‌ ಇಸ್ಮೈಲ್‌  ಅವರು ಸಾರಿಗೆ ನೌಕರರು ಆರಂಭಿಸಿ ಮುಷ್ಕರದ ವೇಳೆ ವಜಾಗೊಂಡಿದ್ದು ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡದ ಹಿನ್ನೆಲೆಯಲ್ಲಿ ಅವರು ಇಂದು ಜೀನವ ನಿರ್ವಾಹಣೆಗಾಗಿ ಭಿಕ್ಷೆ ಬೇಡುತ್ತಿದ್ದಾರೆ.

ಅವರು ಭಿಕ್ಷೆ ಬೇಡುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ವಿಜಯಪಥ ಮೂಲ ಹುಡುಕಿಕೊಂಡು ಹೋದಾಗ ಚಾಲಕ ಮಹಮದ್‌ ಇಸ್ಮೈಲ್‌ ಅವರಿಗೆ ಕಿಡ್ನಿ ಸಮಸ್ಯೆ ಇರುವುದು ತಿಳಿದು ಬಂತು.

ಈ ನಡುವೆ ಏ.7ರಿಂದ ಸಾರಿಗೆ ನೌಕರರು ಆರಂಭಿಸಿದ ಅನಿರ್ಷ್ಟಾವಧಿ ಮುಷ್ಕರದಲ್ಲೂ ಮಹಮದ್‌ ಇಸ್ಮೈಲ್‌ 2ದಿನ ಡ್ಯೂಟಿ ಮಾಡಿರುವುದು ತಿಳಿದು ಬಂದಿದೆ. ಬಳಿಕ ಅವರಿಗೆ ಆರೋಗ್ಯ ಸಮಸ್ಯೆ ಬಿಗಡಾಯಿಸಿದ್ದರಿಂದ ಡ್ಯೂಟಿಗೆ ಹೋಗಲು ಸಾಧ್ಯವಾಗಿಲ್ಲ.

ಇದನ್ನು ಅಸ್ತ್ರವಾಗಿ ಬಳಸಿಕೊಂಡ ಬಿಎಂಟಿಸಿಯ ಅಧಿಕಾರಿಗಳು ಮಹಮದ್‌ ಇಸ್ಮೈಲ್‌ ಅವರನ್ನು ಮೊದಲು ಅಮಾನತು ಮಾಡಿ ನಂತರ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಅಕ್ಷರಸಹ ಬೀದಿಗೆ ಬಿದ್ದ ಚಾಲಕನ ಕುಟುಂಬ ಜೀವನ ನಿರ್ವಾಹಣೆಗಾಗಿ ಬೇರೆ ದಾರಿ ಕಾಣದೆ ಭಿಕ್ಷೆ ಬೇಡುವ ಕಾಯಕಕ್ಕೆ ಇಳಿದಿದೆ.

ಮಹಮದ್‌ ಇಸ್ಮೈಲ್‌  ಅವರು ಅಂದು ಬಿಎಂಟಿಸಿ ಚಾಲಕ ಇಂದು ಭಿಕ್ಷುಕ ಎಂದು ಇರುವ ಒಂದು ಬೋರ್ಟ್‌ ನೇತುಹಾಕಿಕೊಂಡು ಭಿಕ್ಷೆ ಬೇಡುತ್ತಿದ್ದಾರೆ.

ಸಾರಿಗೆ ನೌಕರರು ಏ.7ರಿಂದ ತಮಗೆ ಆಗುತ್ತಿರುವ ವೇತನ ತಾರತಮ್ಯತೆ ಮತ್ತು ಅಧಿಕಾರಿಗಳ ಕಿರುಕುಳ ತಪ್ಪಿಸಿ ಎಂದು ಮುಷ್ಕರಕ್ಕೆ ಕರೆ ನೀಡಿದ್ದರು. ಆ ಮುಷ್ಕರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಧಿಕಾರಿಗಳು ಈ ರೀತಿಯ ಹಲವು ಅಮಾಯಕರಿಗೆ ಅಮಾನತು, ವರ್ಗವಾಣೆ ಮತ್ತು ವಜಾದಂತಹ ಶಿಕ್ಷೆ ನೀಡಿದ್ದಾರೆ.

ಏನೂ ತಪ್ಪನ್ನು ಮಾಡದ ನಮಗೆ ಈ ರೀತಿಯ ಶಿಕ್ಷೆ ನೀಡಿದ್ದು, ನಮಗೆ ನ್ಯಾಯ ಸಿಗಲು ಎಷ್ಟು ತಿಂಗಳು, ವರ್ಷ ಕಾಯಬೇಕೋ? ಅಲ್ಲಿಯವರೆಗೆ ಸಂಸಾರದ ನೊಗ ಎಳೆಯುವುದು ಹೇಗೆ ಎಂದು ಮನನೊಂದ ಹಲವು ನೌಕರರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ.

ಇಷ್ಟಾದರೂ ಅಧಿಕಾರಿಗಳು ಮಾತ್ರ ನೌಕರರ ಬಗ್ಗೆ ಕಿಂಚಿತ್ತೂ ಮಾನವೀಯತೆ ತೋರದ ಹಿನ್ನೆಲೆಯಲ್ಲಿ ಇಂದು ಈ ರೀತಿಯ ಭಿಕ್ಷೆ ಬೇಡುವ ಹಂತಕ್ಕೆ ಸಾರಿಗೆ ಸಂಸ್ಥೆಗಳ ಹಲವು ನೌಕರರು ತಲುಪಿರುವುದು ನಮ್ಮ ರಾಜ್ಯದ ಆಡಳಿತ ವೈಕರಿಗೂ ಹಿಡಿದ ಕನ್ನಡಿಯಾಗಿದೆ.

ಹತ್ತಾರು ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ದುಡಿಯುತ್ತಿರುವ (ಇವರು ಇಲ್ಲ ಎಂದರೆ ಸಂಸ್ಥೆಯೇ ಇಲ್ಲ) ಇಂಥ ನೌಕರರಿಗೆ ಶಿಕ್ಷೆ ನೀಡುವುದು ಎಷ್ಟು ಸರಿ ಎಂದು ರಾಜ್ಯದ ಪ್ರಜ್ಞಾವಂತ ನಾಗರಿಕರು ಕೇಳುತಿದ್ದಾರೆ. ಆದರೆ ಅವರಿಗೆ ಉತ್ತರ ಕೊಡಬೇಕಾದ ಅಧಿಕಾರಿಗಳು ಮತ್ತು ಸರ್ಕಾರ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದೆ.

ಇನ್ನು ಮುಂದಿನ ದಿನಗಳಲ್ಲಾದರೂ ನೊಂದು ಬೇಯುತ್ತಿರುವ ಸಾರಿಗೆ ನೌಕರರ ಸಮಸ್ಯೆ ನಿವಾರಣೆಯಾಗಿ ಅವರು ಇತರ ನೌಕರರಂತೆ ಜೀವನ ಸಾಗಿಸುವ ಕಾಲ ಬರಲಿ. ಈ ನಿಟ್ಟಿನ ನೂತನ ಮುಖ್ಯಮಂತ್ರಿಗಳು ಹೆಚ್ಚಿನ ಗಮನ ಹರಿಸಿ ಸಾರಿಗೆ ನೌಕರರ ಸಮಸ್ಯೆ ಪರಿಹರಿಸಿ ಒಂದು ಶಾಶ್ವತವಾದ ನೆಲೆ ಕಲ್ಪಿಸಲು ಮುಂದಾಗಬೇಕಿದೆ.

ಸಾರಿಗೆ ನಾಲ್ಕೂ ನಿಗಮಗಳ ನೌಕರರ ತುಟ್ಟಿಭತ್ಯೆ ಜುಲೈಯಿಂದಲೇ ಪಾವತಿಗೆ ಎಂಡಿ ಆದೇಶ

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...