ಬೆಳಗಾವಿ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ಯಾರನ್ನು ಬೆಳೆಸುವುದಿಲ್ಲ, ಅವರ ಕುಟುಂಬದವರನ್ನಷ್ಟೇ ಬೆಳೆಸುತ್ತಾರೆ, ಬೇರೆಯವರನ್ನು ಬೆಳೆಸುವಂತೆ ನಾಟಕವಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌಡರ ಕುಟುಂಬ ಕಣ್ಣೀರು ಹಾಕುವುದರಲ್ಲಿ ನಿಸ್ಸೀಮರು ಅವರ ಕಣ್ಣೀರಿಗೆ ಬೆಲೆ ಇಲ್ಲ. ಇನ್ನು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 19 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ ಎಂದರೆ ಅದನ್ನು ಅವರ ಮನೆಯಿಂದ ತಂದು ಕೊಟ್ಟಿದ್ದಾರೆ. ಅವರು ನಮ್ಮ ಶಾಸಕರು ಸೇರಿದ್ದರಿಂದ ತಾನೆ ಸಿಎಂ ಆಗಿದ್ದು, ಇನ್ನು ಜನರ ತೆರಿಗೆ ಹಣವನ್ನು ಕೊಟ್ಟಿದ್ದಾರೆ. ಅವರ ಜೇಬಿನಿಂದ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದರು.
ಇನ್ನು ಶಾಸಕರ ಸಮಸ್ಯೆ ಆಲಿಸದೆ ವೆಸ್ಟೆಂಡ್ ಹೋಟಲಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದರೆ. ಶಾಸಕರು ಏನು ಮಾಡಬೇಕು. ಒಂದು ವೇಳೆ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿದ್ದರೆ ಅದಕ್ಕೆ ಅವರ ನಡವಳಿಕೆಯೇ ಕಾರಣ ಎಂದು ಕುಟುಕಿದರು.