ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಇಂದು (ಅ.24) ಮುಂಜಾನೆ ಬರೋಬ್ಬರಿ ನಲವತ್ತು ಅಡಿ ಎತ್ತರದಿಂದ ಕ್ರೇನ್ ಕೆಳಗೆ ಬಿದ್ದಿದ್ದು, ಯಾವುದೇ ಪ್ರಾಣಾಪಾಯಿವಿಲ್ಲದೆ ಭಾರೀ ಅನಾಹುತ ತಪ್ಪಿದಂತ್ತಾಗಿದೆ. ಈ ಅವಘಡಕ್ಕೆ ಸಿಬ್ಬಂದಿಗಳ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದೆ.
ಸಿಲ್ಕ್ ಬೋರ್ಡ್ – ಕೆ.ಆರ್.ಪುರಂ ಮಾರ್ಗವಾಗಿ ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ನಡೆಯುತ್ತಿದೆ. ಇಂದು ಬೆಳಗ್ಗೆ ಸುಮಾರು 6.30ಕ್ಕೆ ಮೆಟ್ರೋ ಸಗ್ಮೆಂಟ್ಸ್ ಜೋಡಿಸುವ ಮಿಷನ್ ಅರ್ಧಕ್ಕೆ ಕಟ್ ಆಗಿ ಕೆಳಗೆ ಬಿದ್ದಿದೆ. ಆದರೂ ಸ್ಥಳದಲ್ಲಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಕುಸಿದಿರುವ ಲಾಂಚಿಂಗ್ ಗಾರ್ಡ್ ಮಷೀನ್ ಮೇಲಕ್ಕೆ ಎತ್ತುವ ಕಾರ್ಯದಲ್ಲಿ ಸದ್ಯ ನಿರತರಾಗಿದ್ದಾರೆ.
ಅಸಂಬಲ್ ಜೋಡಿಸುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಇಂಜಿನಿಯರ್ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದ್ರೆ ಘಟನೆ ನಡೆದು ಆರು ಗಂಟೆಗಳಾದ್ರೂ ಯಾವ ಮೆಟ್ರೋ ಅಧಿಕಾರಿಗಳು ಆಗಮಿಸಿರಲಿಲ್ಲ.
ನಮ್ಮ ಮೆಟ್ರೋ ರೈಲು ಬೆಂಗಳೂರಿನ ನಗರದ ಜೀವನಾಡಿಯಾಗಿ ಬದಲಾಗುತ್ತಿದೆ. ನಗರದ ಎಲ್ಲ ಭಾಗಗಳಿಗೂ ಮೆಟ್ರೋ ರೈಲು ತಲುಪಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ.
ಆದರೆ, ಈ ಕಾಮಗಾರಿ ಸ್ಥಳದಲ್ಲಿ ಪದೇಪದೇ ಅವಘಡಗಳು ನಡೆಯುತ್ತಿದ್ದು, ಕಾರ್ಮಿಕರು ಹೆದರಿಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದೀಗ ಮತ್ತೊಂದು ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ನೂರಾರು ಪ್ರಯಾಣಿಕರು ಪಾರಾಗಿದ್ದಾರೆ.