ಮೈಸೂರು: ಲಂಚ ಪಡೆದಿದ್ದೇನೆ ಏನೀಗಾ ? ಯಾರು ಕೊಟ್ಟಿದ್ದಾರೆ ಕರೆದುಕೊಂಡು ಬಾ ಎಂದು ಸಾರ್ವಜನಿಕವಾಗಿ ಜನರ ಜೊತೆ ಒಬ್ಬ ಪಿಡಿಒ ಮಾತಿನ ಚಕಮಕಿ ನಡೆಸಿದ್ದಾರೆ.
ಪಿಡಿಒ ಹೀಗೆ ಮಾತನಾಡಿರುವುದು ಈಗ ವಿಡಿಯೋ ರೂಪದಲ್ಲಿ ವೈರಲ್ ಆಗಿದೆ.
ನಂಜನಗೂಡು ತಾಲೂಕು ಕವಲಂದೆ ಗ್ರಾಮ ಪಂಚಾಯಿತಿ ಪಿಡಿಒ ಪುರುಷೋತ್ತಮ ವಿರುದ್ಧ ಲಂಚ ಪಡೆದ ಆರೋಪ ಕೇಳಿಬಂದಿದೆ.
ಪಿಡಿಒ ಪುರುಷೋತ್ತಮ ಖಾತೆ ಬದಲಾವಣೆಗೆ ಮೂರೂವರೆ ಸಾವಿರ ರೂಪಾಯಿ ಲಂಚ ಕೇಳಿರುವ ಆರೋಪ ಕೇಳಿಬಂದಿದೆ. ಲಂಚ ಪಡೆದರೂ ಸಹ ಕೆಲಸ ಮಾಡಿಕೊಟ್ಟಿಲ್ಲ ಅಂತಾ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡಿಒ ಸಾರ್ವಜನಿಕರ ನಡುವಣ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿದೆ. ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಆದರೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.
ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ ಶಾಸಕರ ರಾಜಕೀಯ ಭವಿಷ್ಯ ಸಮಾಧಿ : ಡಿಕೆಶಿ