NEWSನಮ್ಮಜಿಲ್ಲೆನಮ್ಮರಾಜ್ಯ

ಮೈಸೂರು ಜಿಲ್ಲಾಧಿಕಾರಿಗೆ ಇಗೋಗೆ ಬೇಸತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ರಾಜೀನಾಮೆ!

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮೈಸೂರಿನಲ್ಲಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿ ಮಧ್ಯೆ ಬೀದಿ ರಂಪಾಟ ನಡೆಯುತ್ತಿರುವ ಮಧ್ಯೆ ಇದೀಗ ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಐಎಎಸ್ vs ಐಎಎಸ್ ವಾರ್​ ಶುರುವಾಗಿದೆ. ಕೋವಿಡ್​ ನಿರ್ವಹಣೆ ವಿಚಾರ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಅವರ ನಡೆಗೆ ಬೇಸತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ರಾಜ್ಯ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಪತ್ರ ಬರೆದಿದ್ದು, ಈ ಸಂಬಂಧ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಲಸ ಮಾಡಿದರೂ ಪಾಲಿಕೆ ಕೆಲಸ ಮಾಡುತ್ತಿಲ್ಲ ಎಂದು ನಮ್ಮನ್ನು ಗುರಿಯಾಗಿಸಿಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ರೀತಿಯ ಜಿಲ್ಲಾಧಿಕಾರಿ ಯಾವುದೇ ಜಿಲ್ಲೆಗೂ ಸಿಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಬ್ಬ ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿಗೆ ತೊಂದರೆ ಕೊಡುವುದು ಸರಿಯಲ್ಲ. ಜಿಲ್ಲಾಧಿಕಾರಿ ನನ್ನ ಮೇಲಿನ ಕೋಪಕ್ಕೆ ಬೇರೆ ಅಧಿಕಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಒಬ್ಬ ಅಧಿಕಾರಿಯ ಇಗೋದಿಂದಾಗಿ ಪರ್ಸನಲ್‌ ಆಗಿ ಟಾರ್ಗೆಟ್ ಮಾಡಲಾಗಿದೆ. ಎಲ್ಲರಿಗೂ ಒಂದು ಸಹನೆ ಇರುತ್ತದೆ. ಪ್ರತಿದಿನ ನಮ್ಮ ಅಧಿಕಾರಿಗಳನ್ನು ಸಭೆ ಕರೆದು ಅವಮಾನ‌ ಮಾಡಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದರು.

ಕೊರೊನಾದ ಎರಡನೇ ಅಲೆಯ ಕೊನೆಯಲ್ಲಿದ್ದೇವೆ. ನಾನೀಗ ನೋವಿನ ವಿಚಾರದಲ್ಲಿ ಮಾತನಾಡುತ್ತಿದ್ದೇನೆ ಎಂದು ಗದ್ಗದಿತರಾದರು. ಮೈಸೂರು ಮಹಾನಗರ ಪಾಲಿಕೆ‌ ಮೇಲೆ ಯುದ್ಧ ನಡೆಯುತ್ತಿದೆ. ಅವರಿಂದ ಒಂದು‌ ರೀತಿ ನೋವನ್ನುಂಟು‌ ಮಾಡುವ ಕೆಲಸವಾಗುತ್ತಿದೆ. 2014ರ ಬ್ಯಾಚಿನ ಅಧಿಕಾರಿಯಾಗಿ ಹಲವು ಅಧಿಕಾರಿಗಳ ಜತೆ ಕೆಲಸ ಮಾಡುತ್ತಿದ್ದೇನೆ. ಆದರೆ ಈ ರೀತಿ ಅವಮಾನ ಆಗಿರಲಿಲ್ಲ. ಪ್ರತಿ ಅಧಿಕಾರಿಗೂ ಕರೆ ಮಾಡಿ ಅವಮಾನ ಮಾಡುತ್ತಾರೆ. ನನಗೆ ಅಧಿಕಾರಿಯಾಗಿ ಯಾವುದೇ ಕೆಲಸ ಮಾಡಲು ಆಸಕ್ತಿ ಇಲ್ಲದಾಗಿದೆ ಎಂದು ರೋಹಿಣಿ ಸಿಂಧೂರಿ ತಮಗೆ ಕಾಟ ಕೊಡುತ್ತಿರುವುದರ ಬಗ್ಗೆ ಶಿಲ್ಪಾ ನಾಗೇಶ್ ಬಿಡಿಸಿ ಬಿಡಿಸಿ ಹೇಳಿದ್ದಾರೆ.

ನಗರ ಪ್ರದೇಶಕ್ಕೆ ಒಂದು ಮಾನದಂಡ, ಗ್ರಾಮೀಣ ಪ್ರದೇಶಕ್ಕೆ ಒಂದು ಮಾನದಂಡ ನೀಡುತ್ತಾರೆ. ಸೂಕ್ತವಾಗಿ ಕೊರೊನಾ ನಿರ್ವಹಣೆ ಮಾಡಿದರೂ, ಪಾಲಿಕೆ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸಲಾಗುತ್ತಿದೆ. ನಾವು ಏನು ಕೆಲಸ ಮಾಡುತ್ತಿಲ್ಲ ಎಂದು ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಈ ರೀತಿ ಹೇಳುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಜಿಲ್ಲಾಡಳಿತದಿಂದ‌ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‌ಆರ್ ಫಂಡ್‌ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ. ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ನೇರವಾಗಿ ರೋಹಿಣಿ ಸಿಂಧೂರಿ ವಿರುದ್ದ ಆರೋಪ ಮಾಡಿದರು.

ನನ್ನ ಮೇಲೆ ಫೈಟ್ ಮಾಡಿದ್ದರೆ ನಾನು ಫೈಟ್ ಮಾಡುತ್ತಾ ಇದೆ. ಆದರೆ ಪಾಲಿಕೆಯ ಕೆಳ ಹಂತದ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವುದನ್ನು ನಾನು ಸಹಿಸುವುದಿಲ್ಲ. ಕೇಸ್ ಇಲ್ಲದ ಏರಿಯಾಗಳನ್ನ ರೆಡ್ ಜೋನ್ ಅಂತಾ ಘೋಷಣೆ ಮಾಡಿದ್ದಾರೆ. ಎಲ್ಲರೂ ಡಿಸಿಗೆ ದುರಹಂಕಾರ ಸಹಿಸಿಕೊಳ್ಳಿ ಎಂದು ಹೇಳುತ್ತಿದ್ದರು. ಇವರಿಗಾಗಿ ಮೈಸೂರು ನಗರದವನ್ನು ನಾನು ಬಲಿ ಕೊಡಲು ಆಗುವುದಿಲ್ಲ ಎಂದರು.

ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದೆ. ಇದೇ ಹಿನ್ನಲೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ. ನಾನು ಸೋಲು ಒಪ್ಪಿಕೊಂಡು ರಾಜೀನಾಮೆ ಕೊಡುತ್ತಿಲ್ಲ. ಬದಲಿಗೆ ನನ್ನ ರಾಜೀನಾಮೆ ಪ್ರತಿಭಟನೆ ಸಂಕೇತ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಜಾತಿ ವಿಚಾರದಲ್ಲೂ ನನ್ನ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ. ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಈ ನಿರ್ಧಾರದಿಂದ ಯಾರಿಗೆ ಸಂತೋಷ ಆಗುತ್ತದೆ ಆಗಲಿ. ನಿರಂತರ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಬೇಸರ ಹೊರ ಹಾಕಿದರು.

ಜಿಲ್ಲಾಧಿಕಾರಿ (ರೋಹಿಣಿ ಸಿಂಧೂರಿ) ಜಾತಿ ವಿಚಾರವಾಗಿಯೂ ನನ್ನ ಬಗ್ಗೆ ಮಾತನಾಡಿದ್ದಾರೆ. ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ನನಗೆ ನಿರಂತರವಾಗಿ ಅವಮಾನ ಮಾಡಿದ್ದಾರೆ. ನಾನು ಪ್ರೆಸ್ ಮೀಟ್ ಕರೆದಿರುವುದನ್ನು ಏಕೆ ಅಂತಾ ಎಲ್ಲರ ಬಳಿ ಕೇಳಿದ್ದಾರೆ. ಏಕೆ ಈ ರೀತಿ ಭಯ ಅವರಿಗೆ. ನಾನು ಐಎಎಸ್ ಅಧಿಕಾರಿಯಾದಾಗ ಒಂದು ಮೌಲ್ಯದೊಂದಿಗೆ ಬಂದಿದ್ದೇನೆ. ನಾನು‌ ಕರ್ನಾಟಕದವಳೇ. ನಾನು ಯಾರ ಶಿಫಾರಸ್ಸಿನಿಂದಲೂ ಬಂದಿಲ್ಲ. ಸೌಮ್ಯ ಸ್ವಭಾವದಿಂದ ನಡೆದುಕೊಂಡರೂ ಅವಮಾನ ಮಾಡಿದ್ದಾರೆ. ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರು ಯಾವುದಕ್ಕೂ ಸೋಲಬೇಡಿ. ಜಿಲ್ಲಾಧಿಕಾರಿಯವರೇ ನಿಮ್ಮ ಚೀಪ್ ಮೆಂಟಾಲಿಟಿ ಸರಿ ಮಾಡಿಕೊಳ್ಳಿ. ಇಲ್ಲ ಮೈಸೂರು ಬಿಟ್ಟು ತೊಲಗಿ ಎಂದೂ ಶಿಲ್ಪಾನಾಗ್ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ್ದಾರೆ.

ನಾನು ಮಧ್ಯಮ ವರ್ಗದಿಂದ ಬಂದವಳೆ. ಐಎಎಸ್ ಮಾಡುವುದು ಸುಲಭವಲ್ಲ. ಚೀಪ್ ಲೆವೆಲ್‌ಗೆ ಇಳಿದಾಗ ಅದೇ ಚೀಪ್ ಲೆವೆಲ್‌ಗೆ ಹೋಗಿ ಫೈಟ್ ಮಾಡಲು ಆಗುವುದಿಲ್ಲ. ಹಾಗಾಗಿ ಐಎಎಸ್ ಕೆಲಸಕ್ಕೆ ರಾಜೀನಾಮೆ ನೀಡುತ್ತಿರುವೆ ಎಂದು ಶಿಲ್ಪಾನಾಗ್ ಇದೇ ವೇಳೆ ಪ್ರಕಟಿಸಿದರು.

ಸರ್ಕಾರಿ ಆಸ್ಪತ್ರೆಗೆ ಹೋದರೆ ಸರಿಯಾದ ಔಷಧ ಇಲ್ಲ. ಸಿಎಸ್‌ಆರ್ ಮೂಲಕ ಕೆಲಸ ಮಾಡುತ್ತಿದ್ದೆವು. ಅದಕ್ಕೆ ಬ್ರೇಕ್ ಹಾಕುವ ಕೆಲಸ‌ ಮಾಡುತ್ತಿದ್ದಾರೆ. ಅವರು (ರೋಹಿಣಿ ಸಿಂಧೂರಿ) ಹಠ, ಹಗೆ ಏಕೆ ಸಾಧಿಸುತ್ತಿದ್ದಾರೆ ಗೊತ್ತಿಲ್ಲ. ನಗರದಲ್ಲಿ ಚೆನ್ನಾಗಿ ಕೆಲಸ ಆಗಿದೆ ಅಂತಾ ಅಸೂಯೆ ಆಗಿದ್ದರೆ ಅದು ನನಗೆ ಗೊತ್ತಿಲ್ಲ. ನಾನು ಹೇಳುವುದು ಇಷ್ಟೇ ಜನಪ್ರತಿನಿಧಿಗಳು ಯಾವುದೇ ಕಾನೂನು ಬಾಹಿರ ಆದೇಶ ಕೊಟ್ಟಿಲ್ಲ. ಬೇರೆ ಎಲ್ಲಾ ಅಧಿಕಾರಿಗಳು ಸಹಕಾರ ನೀಡಿದ್ದಾರೆ.

ರಾಜೀನಾಮೆ ನೀಡಿ ಬೇರೆ ನನ್ನ ಜೀವನ ನೋಡಿಕೊಳ್ಳುತ್ತೇನೆ. ಮೂರನೇ ಅಲೆಗೂ ನಾವು ಸಿದ್ದತೆ ಮಾಡಿಕೊಳ್ಳುತ್ತಿದ್ದೆವು. ಆದರೆ ಏಕೆ ಈ ರೀತಿ ಬಂದು ನಿಂತಿದೆ ಗೊತ್ತಿಲ್ಲ. ನಾನು ಬಿಟ್ಟು ಹೋದರೆ ಸರಿಯಾಗಬಹುದು ಅಂತಾ ಹೋಗುತ್ತಿದ್ದೇನೆ. ಸೀನಿಯರ್ ಅಧಿಕಾರಿಗಳಿಗೆ ಚೀಪ್ ಆಗಿ ಮಾತನಾಡುವುದು. ಹೋಗು ಬಾ ಅಂತಾ ಅವಮಾನ ಮಾಡುವುದು. ಸುಮ್ಮನೆ ನಾನಸೆನ್ಸ್ ಟಾಕ್ ಮಾಡಿಕೊಂಡು, ನಾನೇ ಸುಪ್ರೀಂ, ನಾನೇ ಜಿಲ್ಲಾಧಿಕಾರಿ ಅಂದುಕೊಂಡಿದ್ದಾರೆ ಅವರು (ರೋಹಿಣಿ ಸಿಂಧೂರಿ) ಎಂದು ಶಿಲ್ಪಾ ನಾಗ್ ತಮ್ಮ​ ಅಸಮಾಧಾನ ಹೊರಹಾಕಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ