Vijayapatha – ವಿಜಯಪಥ
Saturday, November 2, 2024
Breaking NewsNEWSನಮ್ಮಜಿಲ್ಲೆ

ಬಿಎಂಟಿಸಿಯಿಂದ 90 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ: ಸಚಿವ ಶ್ರೀರಾಮುಲು

45 ನಿಮಿಷಗಳ ಚಾರ್ಜಿಂಗ್ ಮಾಡಿದರೆ ಸಾಕು 120 ಕಿಮೀ ಓಡುತ್ತವೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಸಚಿವ ಬಿ.ಶ್ರೀರಾಮುಲು ಗುರುವಾರ ಬೆಳಗ್ಗೆ 10:30ರಲ್ಲಿ ಬೆ.ಮ.ಸಾ.ಸಂಸ್ಥೆ ಘಟಕ 37 ಕೆಂಗೇರಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮೊದಲ ವಿದ್ಯುತ್ ಬಸ್‌ ಅನಾವರಣ ಮಾಡಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಬಳಿಕ ಮಾತನಾಡಿದ ಸಚಿವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಮೆಟ್ರೋ ಫೀಡರ್ ಸೇವೆಗಾಗಿ 9ಮೀಟರ್‌ ಹವಾನಿಯಂತ್ರಣ ರಹಿತ 90 ಎಲೆಕ್ಟ್ರಿಕ್ ಬಸ್‌ಗಳನ್ನು “ಒಟ್ಟು ವೆಚ್ಚದ ಒಪ್ಪಂದ” (GCC) ಆಧಾರದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸೇವಾ ಪೂರೈಕೆದಾರರ ಆಯ್ಕೆಯನ್ನು “ಟೆಂಡರ್ ಮೂಲಕ ಆಹ್ವಾನಿಸಲಾಗಿತ್ತು.

ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ 90 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ 50 ಕೋಟಿ ರೂ.ಗಳಷ್ಟು ಹಣಕಾಸಿನ ನೆರವು ನೀಡುತ್ತಿದೆ. ಅಂದರೆ ಪ್ರತಿ ಬಸ್‌ಗೆ 50 ಲಕ್ಷ ರೂ.ಗಳ ಪ್ರೋತ್ಸಾಹಧನ (90 ಬಸ್‌ಗಳಿಗೆ ರೂ.45 ಕೋಟಿ) ಬಿಡ್ಡರ್‌ಗೆ ಒದಗಿಸಲಾಗುವುದು ಮತ್ತು 5 ಕೋಟಿ ರೂ.ಗಳನ್ನು ಚಾರ್ಜಿಂಗ್ ಮೂಲಸೌಕರ್ಯ ಸ್ಥಾಪನೆಗೆ ಬಿಎಂಟಿಸಿ ಬಳಲಿಕೊಳ್ಳಲಿದೆ ಎಂದು ತಿಳಿಸಿದರು.

ಸದ್ಯ ಟೆಂಡರ್ ಅಂತಿಮಗೊಳಿಸಲಾಗಿದ್ದು, GCC ದರದಲ್ಲಿ ರೂ.51.67/km ವಿದ್ಯುತ್ ಯೊಂದಿಗೆ 180 ಆಶ್ವಾಸಿತ ಕಿಲೋಮೀಟರ್‌ಗಳಿಗೆ 10 ವರ್ಷಗಳ ಅವಧಿಗೆ M/s. NTPC ವ್ಯಾಪರ್ ವಿದ್ಯುತ್ ನಿಗಮದವರಿಗೆ ನೀಡಲಾಗಿದೆ. ಈ ಬಸ್ಸುಗಳು 33+D ಆಸನ ಸಾಮರ್ಥ್ಯ ಹೊಂದಿದ್ದು, M/s.JBM (ಒಕ್ಕೂಟ ಪಾಲುದಾರ) ನಿಂದ ಪೂರೈಸಲಾಗುತ್ತದೆ ಎಂದು ವಿವರಿಸಿದರು.

ಇನ್ನು ಈ 90 ಬಸ್‌ಗಳನ್ನು ಡಿಪೋ-8 (ಯಶವಂತಪುರ), ಡಿಪೋ-29 (ಕೆ.ಆರ್. ಪುರಂ) ಮತ್ತು ಡಿಪೋ-37 (ಕೆಂಗೇರಿ) ಗಳಿಂದ ನಿರ್ವಹಣೆ ಮಾಡಲಾಗುತ್ತದೆ. ಒಂದು ಬಾರಿ ಚಾರ್ಜ್‌ಗೆ 120 ಕಿಮೀ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, 45 ನಿಮಿಷಗಳ ಚಾರ್ಜಿಂಗ್ ಮಾಡಿದರೆ ಸಾಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎನ್. ಎಸ್. ನಂದೀಶ್ ರೆಡ್ಡಿ, ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ಹಾಗೂ ಮಂಡಳಿ ನಿರ್ದೇಶಕರು ಇದ್ದರು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ