ಬೆಂಗಳೂರು: ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಸೇವೆಯಿಂದ ವಜಾ ಆಗಿರುವ ಎಲ್ಲಾ ಅಂದರೆ ಟ್ರೈನಿಯವರನ್ನು ಒಳಗೊಂಡಂತೆ ವಜಾ ಆದ ನೌಕರರು ಲೇಬರ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಇನ್ನು ಎರಡು ಒಂದು ದಿನ ಮಾತ್ರ ಉಳಿದಿದೆ. ಹೀಗಾಗಿ ಪ್ರತಿಯೊಬ್ಬರೂ ಶೀಘ್ರದಲ್ಲೇ ದಾವೆ ಹೂಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಮನವಿ ಮಾಡಿದೆ.
ನವೆಂಬರ್ 13ರ ಒಳಗಾಗಿ ಲೇಬರ್ ಕೋರ್ಟ್‌ನಲ್ಲಿ ಪ್ರಕರಣದ ಸಂಬಂಧ ಅರ್ಜಿ ಸಲ್ಲಿಸಬೇಕಿದ್ದು, ಸೇವೆಯಿಂದ ವಜಾಗೊಂಡಿರುವ ಅಂದರೆ ಈಗ ಕೋರ್ಟ್ ಮೊರೆ ಹೋಗಿರುವವರನ್ನು ಹೊರತುಪಡಿಸಿ ಉಳಿದ ಪ್ರತಿಯೊಬ್ಬರೂ ವಜಾ ಮಾಡಿರುವ ವಿರುದ್ಧ ವಕಾಲತ್ತುಹಾಕಬೇಕಿದೆ.
ಜತೆಗೆ ಕಳೆದ ತಿಂಗಳಲ್ಲಿ ವಜಾ ಆದ ನೌಕರರು ಸೇರಿದಂತೆ ಎಲ್ಲರೂ ಅರ್ಜಿ ಸಲ್ಲಿಸಿ. ನಾವು ಶನಿವಾರ ಲೋಕ ಆದಾಲತ್‌ಗೆ ದಿನಾಂಕ ನಿಗದಿ ಪಡಿಸುತ್ತೇವೆಂದು ಸಾರಿಗೆ ಸಚಿವರು, ನಿಗಮಗಳ ಅಧ್ಯಕ್ಷರು ತಿಳಿಸಿದ್ದಾರೆ.
ಇನ್ನು ಪ್ರಮುಖವಾಗಿ ಕೋರ್ಟ್‌ನಲ್ಲಿ ದಾವೆ ಹೂಡದ ನೌಕರರ ಪ್ರಕರಣವನ್ನು ಪರಿಗಣಿಸುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಲೇಬರ್‌ಕೋರ್ಟ್‌ನಲ್ಲೇ ಮೊದಲು ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.
ವಕಾಲತ್‌ಗೆ ಬೇಕಾಗಿರುವ ದಾಖಲೆಗಳು: ಎಸ್‌ಪಿ, ಡಿಸ್ಮಿಸ್ ಕಾಪಿ, ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸಿರುವ ಕಾಪಿ, ಮೇಲ್ಮನವಿ ಪ್ರಾಧಿಕಾರ ತಿರಸ್ಕರಿಸಿರುವ ಕಾಪಿ, ಎರಡು ತಿಂಗಳ ವೇತನ ಪಟ್ಟಿ, ಆಧಾರ್ ಕಾರ್ಡ್, ಸಂಸ್ಥೆ ನೌಕರರಿಗೆ ಕೊಟ್ಟಿರುವ ಉಚಿತ ಪಾಸ್ ಕಾಪಿಯ 2-2 ನಕಲು (ಝರೆಕ್ಸ್) ಪ್ರತಿಗಳನ್ನು ಕೋರ್ಟ್‌ಗೆ ಸಲ್ಲಿಸಬೇಕಿದೆ.