CrimeNEWSನಮ್ಮಜಿಲ್ಲೆ

ಸಾಸಲವಾಡ ಗ್ರ‍ಾಮದಲ್ಲಿ ಪಡಿತರ ವಿತರಿಸಲು ಆಗ್ರಹ: ಪಡಿತರ ಪಡೆಯಲು ಕೊಡಬೇಕು 10-20 ರೂ.ಲಂಚ

ವಿಜಯಪಥ ಸಮಗ್ರ ಸುದ್ದಿ

ವಿಜಯನಗರ: ಗ್ರ‍ಾಮದಲ್ಲಿ ಪಡಿತರ ವಿತರಿಸುವಂತೆ ಜಿಲ್ಲೆಯ ಕೂಡ್ಲಿಗಿ ತಾಲೂಕು ಹೆಗ್ಡಾಳು ಗ್ರ‍ಾಮ ಪಂಚಾಯ್ತಿ ವ್ಯಾಪ್ತಿಯ ಸಾಸಲವಾಡ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರ‍ಾಮದ ಪಲಾನುಭವಿಗಳು ಪಡಿತರ ಪಡೆಯಲು 2.5 ಕಿಮಿ ಹೋಗಿ ಬರಬೇಕಿದೆ. ಹೀಗಾಗಿ ಹೋಗಿ ಬರಲು ಬಸ್‌ ಅಥವಾ ಆಟೋದಲ್ಲಿ ಹೋದರೆ 20-30 ರೂ. ಟಿಕೆಟ್‌ ಆಗುತ್ತದೆ. ಮತ್ತು ಅಲ್ಲಿಗೆ ಹೋದರೆ ಡಿಪೋನಲ್ಲಿ 10-20 ರೂ. ಕೊಟ್ಟರೆ ಮಾತ್ರ ಪಡಿತರ ಕೊಡುತ್ತಿದ್ದಾರೆ. ಇಲ್ಲದಿದ್ದರೆ ವಾಪಸ್‌ ಕಳುಹಿಸುತ್ತಾರೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ.

ಇನ್ನು ಗ್ರಾಮದಲ್ಲಿಯೇ ಪಡಿತ ವಿತರಿಸಲು ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಮಾಡಿದ್ದಾರೆ. ಗ್ರಾಮದಲ್ಲಿ 275ಕ್ಕೂ ಹೆಚ್ಚು ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ ಹಾಗೂ ಮುನ್ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಪಡಿತರ ಸಾಮಗ್ರಿಗಳನ್ನು ಎರೆಡೂವರೆ ಕಿಮೀ ದೂರದ ಹೆಗ್ಡಾಳು ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಹೊತ್ತು ತರಬೇಕಿದ್ದು, ವೃದ್ಧರು ಮಹಿಳೆಯರು ವಿಕಲಾಂಗರು ಪಡಿತರ ಹೊತ್ತು ತರುವುದು ಅಸಾಧ್ಯವಾಗಿದೆ.

ಪಡಿತರ ಸಾಮಾಗ್ರಿ ತರಲು ವಾಹನಗಳನ್ನು ಅವಲಂಬಿಸಿದ್ದು ಪ್ರತಿ ತಿಂಗಳೂ ಪಡಿತರ ತರಲು, ಪ್ರತಿಯೊಬ್ಬ ಪಲಾನುಭವಿ ವಾಹನಕ್ಕಾಗಿ 20ರಿಂದ30 ರೂ. ವ್ಯಹಿಸಬೇಕಿದೆ. ಸರ್ಕಾರ ಕೊಡೋ ಉಚಿತ ಪಡಿತರ ಸಾಮಗ್ರಿಗೆ ಇಲ್ಲಿ ಹಣ ವ್ಯಯ ಮಾಡಲೇಬೇಕಿದೆ,ಇದು ಆಹಾರ ಇಲಾಖೆಯ ಅವೈಜ್ಞಾನಿಕ ನಡೆಗೆ ಜೀವಂತ ಸಾಕ್ಷಿಯಾಗಿದೆ.

ಅ”ನ್ಯಾಯ ಬೆಲೆ: ದೇವರು ಕೊಟ್ರೂ ಪೂಜಾರಿ ಕೊಡಲ್ಲೊಲ್ಲ ಎಂಬಂತೆ, ಸರ್ಕಾರ ಕಡು ಬಡವರಿಗೆ ಉಚಿತ ಪಡಿತರ ಆಹಾರ ಧಾನ್ಯಗಳನ್ನು ಮಂಜೂರು ಮಾಡುತ್ತಿದೆ, ಆದ್ರೆ ಹಿರೇಹೆಗ್ಡ‍ಳು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅದು ಸುಳ್ಳಾಗಿದೆ ಎನ್ನುತ್ತಾರೆ ಪಲಾನುಭವಿಗಳು ಹಾಗೂ ಗ್ರಾಮಸ್ಥರು.

ಸರ್ಕಾರ ಮಂಜೂರು ಮಾಡಿರುವ ಪ್ರಮಾಣದಂತೆ ಪಡಿತರ ವಿತರಿಸುತ್ತಿಲ್ಲ ಬೇಕಾ ಬಿಟ್ಟಿಯಾಗಿ ವಿತರಿಸಲಾಗುತ್ತಿದೆ, ಪ್ರತಿಯೊಬ್ಬರಿಂದ ತಲಾ 10-20ರೂ. ಟೋಕನ್ ಗೆಂದು ವಸೂಲಿ ಮಾಡಲಾಗುತ್ತದೆ ಎಂದು ಸಾಸಲವಾಡದ ಗ್ರ‍ಾಮಸ್ಥರು ದೂರಿದ್ದಾರೆ.

ಟೋಕನ್‌ಗೆ ಹಾಗೂ ಪಡಿತರಕ್ಕಾಗಿ ಹೀಗೆ ಎರೆಡು ಬಾರಿ ಪ್ರತಿಯೊಬ್ಬರೂ ಪ್ರತಿ ತಿಂಗಳು ನ್ಯಾಯಬೆಲೆ ಕೇಂದ್ರಕ್ಕೆ ಅಲೆದಾಡಬೇಕಿದೆ. ಆಹಾರ ಸಾಮಗ್ರಿಗಳು ಸಂಪೂರ್ಣ ಕಲುಷಿತಗೊಂಡಿರುತ್ತದೆ ಹಾಗೂ ಕಸ ಮಿಶ್ರಿತವಾಗಿರುತ್ತದೆ. ನ್ಯಾಯ ಬೆಲೆ ಅಂಗಡಿಯ ನಿರ್ವಹಣೆ ಸಂಪೂರ್ಣ ಕಳಪೆಯಿದ್ದು ಕೂಡಲೇ ಬದಲಿಸಬೇಕೆಂದು ಸಾಸಲವಾಡ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿಯೇ ವಿತರಣೆಗೆ ಒತ್ತಾಯ: ಸಾಸಲವಾಡ ಗ್ರಾಮದಲ್ಲಿ ಪಡಿತರ ವಿತರಿಸುವಂತೆ ಕ್ರಮ ಕೈಗೊಳ್ಳಬೇಕಿದೆ, ಅದಕ್ಕಾಗಿ ಹಲವು ವರ್ಷಗಳಿಂದ ತಾಲೂಕಾಡಳಿತಕ್ಕೆ ಗ್ರ‍ಾಮದಿಂದ ಮನವಿ ಮಾಡಲಾಗಿದ್ದು. ತಹಸೀಲ್ದಾರರಾಗಲೀ ಆಹಾರ ಇಲಾಖೆಯಾಗಲಿ ಈ ವರೆಗೂ ಸ್ಪಂದಿಸಿಲ್ಲ ಎಂದು ಸಾಸಲವಾಡ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಸಿದ್ದಾರೆ.

ಕಾರಣ ತಾವು ತಹಸೀಲ್ದಾರರಲ್ಲಿ ಸಂಬಂಧಿಸಿದಂತೆ ಈ ಮೂಲಕ ಅಂತಿಮವಾಗಿ ಮನವಿ ಮಾಡುತ್ತಿದ್ದು, ತಹಸೀಲ್ದಾರರು ಶೀಘ್ರವೇ ನ್ಯಾಯಬೆಲೆ ಅಂಗಡಿಯಲ್ಲಾಗುವ ಅನ್ಯಾಯಗಳನ್ನು ತಡೆಯಬೇಕಿದೆ.

ಸಾಸಲವಾಡ ಗ್ರಾಮದಲ್ಲಿಯೇ ಪಡಿತರ ಆಹಾರ ಸಾಮಾಗ್ರಿಗಳನ್ನು ವಿತರಿಸುವಂತೆ ಕ್ರಮ ಕೈಗೊಳ್ಳಬೇಕಿದೆ. ನಿರ್ಲಕ್ಷ್ಯ ತೋರಿದ್ದಲ್ಲಿ ತಾವು ಅನುಭವಿಸುತ್ತಿರುವ ತೊಂದರೆಗಳನ್ನು ವಿಡಿಯೋ ಮಾಡಿ ಸಾಕ್ಷಿ ಸಮೇತ ಜಿಲ್ಲಾಧಿಕಾರಿಗಳ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದ್ದಾರೆ.

ಹೆಗ್ಡಾಳು ನ್ಯಾಯಬೆಲೆ ಅಂಗಡಿಯಲ್ಲಾಗುವ ಅನ್ಯಾಯಗಳನ್ನು ಹಾಗೂ ಅಕ್ರಮಗಳನ್ನು, ವಿಡಿಯೋ ಮಾಡಿ ಸಾಕ್ಷಿ ಪುರಾವೆ ಹಾಗೂ ದಾಖಲುಗಳ ಸಮೇತ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ಸಾಸಲವಾಡ ಗ್ರ‍ಾಮದ ಮಹಿಳೆಯರು ಎಚ್ಚರಿಸಿದ್ದಾರೆ.

ಅನ್ಯಾಯದಲ್ಲಿ ಆಹಾರ ಇಲಾಖೆಗೆ ಆಹಾರ.!?:  ರಾಜಾರೋಷವಾಗಿ ಈ ನ್ಯಾಯಬೆಲೆ ಅಂಗಡಿಯರು ಬಡವರ ಆಹಾರ ತಿಂದು ಅಕ್ರಮ ಎಸಗುತ್ತಿದ್ದಾರೆ, ಇದನ್ನು ಮನಗಂಡೂ ಇಲಾಖೆ ಗಪ್ ಚುಪ್ ಆಗಿರುವುದನ್ನು ಕಂಡರೆ ತಮ್ಮಲ್ಲಿ ಅಚ್ಚರಿ ಮೂಡಿಸಿದೆ. ಅನ್ಯಾಯ ಎಸಗುವ ಅಕ್ರಮಕೋರರು ತಮ್ಮ ಅನ್ಯಾಯದ ಆಹಾರವನ್ನು ಆಹಾರ ಇಲಾಖೆಗೂ ಉಣಬಡಿಸಿದ್ದಾರೆಯೇ..!?ಎಂಬ ಅನುಮಾನ ಇದೆ ಎಂದು ಗ್ರಾಮದ ಕೆಲ ಮುಖಂಡರು ಶಂಕೆ ವ್ಯಕ್ತಪಡಿಸಿದ್ದಾರೆ.

ಅನ್ಯಾಯದ ವಿರುದ್ಧ ತಾವು ಸಾಕಷ್ಟು ಬಾರಿ ದೂರು ನೀಡಿಲಾಗಿದೆ, ಆಹಾರ ಇಲಾಖೆಯವರು ಕ್ರಮ ಕೈಗೊಳ್ಳಲಾಗದೇ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದು ಅವರು ಅ ನ್ಯಾಯಬೆಲೆ ಅಂಗಡಿಯವರ ಆಹಾರ ಸೇವಿಸಿದ್ದಾರೆನ್ನಲು ಸಾಕ್ಷಿಯಾಗಿದ್ದು, ನ್ಯಾಯಬೆಲೆ ಅಂಗಡಿಯಲ್ಲಿ ಜರುಗುವ ಪ್ರತಿ ಅನ್ಯಾಯಕ್ಕೆ ಅಧಿಕಾರಿಗಳು ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಕ್ಟೋಬರ್ ಮಾಹೆಯ ಪಡಿತರ ಆಹಾರ ಸಾಮಾಗ್ರಿಗಳನ್ನು ಸಾಸಲವಾಡ ಗ್ರಾಮದಲ್ಲಿಯೇ ವಿತರಿಸುವಂತೆ ತಹಸೀಲ್ದಾರರು ಶೀಘ್ರವೇ ಕ್ರಮಕೈಗೊಳ್ಳಬೇಕಿದೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಜರುಗುತ್ತಿರುವ ಅನ್ಯಾಯ ಅಕ್ರಮಗಳನ್ನು ತಡೆಯಬೇಕು.

ಸಂಪೂರ್ಣ ಉಚಿತ ವಾಗಿ ಪಡಿತರ ಆಹಾರ ಸಾಮಗ್ರಿ ವಿತರಿಸುವಂತೆ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕೆಂದು, ಸಾಸಲವಾಡ ಗ್ರಾಮದ ಶಾರದಾ ಮಹಿಳಾ ಸಂಘ ಸೇರಿದಂತೆ ವಿವಿಧ ಮಹಿಳಾ ಸಂಘಗಳ ಪದಾಧಿಕಾರಿಗಳು.

ಗ್ರಾಮಸ್ಥರಾದ ಸುನಂದಮ್ಮ, ಗಿರಿಜಮ್ಮ, ನಾಗಮ್ಮ, ಕೊಟ್ರೇಶ,ವೀರಭದ್ರಪ್ಪ, ಶಿವಾನಂದಪ್ಪ,ಬಸಮ್ಮ,ಸುಲೋಚನಮ್ಮ,ಬಸವರಾಜ,ಮಲ್ಲಪ್ಪ,ರಾಜು ಸೇರಿದಂತೆ.ಗ್ರಾಮದ ಹಿರಿಯರು ಮತ್ತು ರೈತ ಹಾಗೂ ದಲಿತ ಪರ ವಿವಿದ ಸಂಘಟನೆಗಳ ಪದಾಧಿಕಾರಿಗಳು ತಹಶಿಲ್ದಾರರಲ್ಲಿ ಈ ಮೂಲಕ ಒತ್ತಾಯಿಸಿದ್ದಾರೆ.

l ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008927428

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...