ಶಿವಮೊಗ್ಗ: ಹೊಟ್ಟೆ ನೋವು ತಾಳಲಾರದೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ನಡೆದಿದೆ.
ಚಂದ್ರಗುತ್ತಿ ಗ್ರಾಮದ ನಾಗರಾಜ ಮರಡಿ ಅವರ ಪುತ್ರಿ ಸುಚಿತ್ರಾ (17) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸುಚಿತ್ರಾರಿಗೆ ಕೆಲವು ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು. ಆದರೋ ನೋವು ಕಡಿಮೆಯಾಗದೆ ಬಳಲುತ್ತುದ್ದರು ಎಂದು ತಿಳಿದು ಬಂದಿದೆ.
ನೋವು ಹೆಚ್ಚಾದರಿಂದ ಪೋಷಕರು ಜಮೀನು ಕೆಲಸಕ್ಕೆ ತೆರವುದನ್ನೇ ಕಾದು ಕುಳಿತು ಸುಚಿತ್ರಾ ಈ ಅವಘಡ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದು, ಪೊಲೀಸರು ಘಟನೆ ಕುರಿತಂತೆ ಮುಂದಿನ ಕ್ರಮ ಜರುಗಿಸಿದ್ದಾರೆ.
ಬೆಂಗಳೂರಿಗೆ ಮತ್ತೆ ಕೋವಿಡ್ ಆತಂಕ: ವೀಕೆಂಡ್ ಲಾಕ್ಡೌನ್ನತ್ತ ಬಿಬಿಎಂಪಿ ಚಿತ್ತ