Vijayapatha – ವಿಜಯಪಥ
Saturday, November 2, 2024
CrimeNEWSನಮ್ಮಜಿಲ್ಲೆ

ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದ ಪತ್ನಿಯ ಪ್ರಿಯಕರನ ಇರಿದು ಹತ್ಯೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮನೆಯಿಂದ ಪತಿ ಹೊರಹೋಗುವುದನ್ನೇ ಕಾದು ಕುಳಿತಿರುತ್ತಿದ್ದ ಪ್ರಿಯಕರ. ಇತ್ತ ಪತಿ ಹೊರ ಹೋಗುವುದನ್ನೇ ಎದುರು ನೋಡುತ್ತಿದ್ದ ಪತ್ನಿ. ಈ ನಡುವೆ ಮಾಮೂಲಿನಂತೆ ಪತಿ ಕೆಲಸಕ್ಕೆ ಹೋಗುತ್ತಿದ್.‌ ನಂತರ ಪ್ರಿಯಕರನ ಜತೆ ವಿವಾಹಿತೆಯ ಚಕ್ಕಂದ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಹೇಗೋ ಪತ್ನಿಯು ಪರಪುರಷನೊಂದಿಗೆ ನಡೆಸುತ್ತಿದ್ದ ಸರಸ ಸಲ್ಲಾಪದ ವಿಷಯ ತಿಳಿದ ಪತಿ ಹೊಂಚುಹಾಕಿ ಮನೆಯಿಂದ ಕೆಲಸಕ್ಕೆ ಹೋದವನಂತೆ ಹೊರ ಹೋಗಿ ಮತ್ತೆ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿಯ ಸಲ್ಲಾಪ ಕಂಡು ಕೋಪಗೊಂಡ ಪತಿ ಮಂಚದ ಕೆಳಗೆ ಅವಿತಿದ್ದ ಪತ್ನಿಯ ಪ್ರಿಯತಮನನ್ನು ಹೊರ ಎಳೆದು ಕೊಲೆ ಮಾಡಿದ್ದಾನೆ.

ಈ ಘಟನೆ ಸಿಲಿಕಾನ್ ಸಿಟಿಯ ಅಂದ್ರಹಳ್ಳಿಯಲ್ಲಿ ನಡೆದಿದೆ. ಶಿವು ಕೊಲೆಯಾದವ. ಪತ್ನಿ ವಿನುತಾ ಮತ್ತು ಪತಿ ಭರತ್ ಏಳು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ನಡುವೆ ಪತ್ನಿ ವಿನುತಾ ಜೊತೆ ಶಿವು ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಗಂಡ ಕೆಲಸಕ್ಕೆಂದು ಮನೆಯಿಂದ ಹೋದ ಬಳಿಕ ಶಿವು ವಿನುತಾಳನ್ನ ಭೇಟಿಯಾಗಲು ಬರುತ್ತಿದ್ದನು. ಪತಿ ಇಲ್ಲದಿದ್ದಾಗ ಪ್ರಿಯತಮನ ಜೊತೆ ಚಕ್ಕಂದ ಆಡುತ್ತಿದ್ದ ಪತ್ನಿಯ ಕಳ್ಳ ಕೆಲಸ ಭರತ್ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಒಂದು ದಿನ ಕೆಲಸಕ್ಕೆಂದು ಹೋದ ಭರತ್, ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವ ಸಲುವಾಗಿ ಏಕಾಏಕಿ ಮನೆಗೆ ರೀಎಂಟ್ರಿ ಕೊಟ್ಟಿದ್ದಾನೆ.

ಇತ್ತ ಕೆಲಸಕ್ಕೆಂದು ಹೋಗಿದ್ದ ಪತಿ ಏನೂ ಹೇಳದೆ ಮನೆಗೆ ಏಕಾಏಕಿ ಬರುತ್ತಿದ್ದಂತೆಯೇ ಗಾಬರಿಗೊಂಡ ವಿನುತಾ, ತನ್ನ ಪ್ರಿಯಕರನನ್ನು ಮಂಚದ ಕೆಳಗೆ ಅವಿತುಕೊಳ್ಳುವಂತೆ ಹೇಳಿದ್ದಾಳೆ. ಆದರೆ ಇದನ್ನು ಮನಗಂಡ ಭರತ್, ಮಂಚದ ಕೆಳಗೆ ಅವಿತಿದ್ದ ಶಿವುನನ್ನು ಹೊರಗೆ ಎಳೆದು ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ.

ಇರಿತದಿಂದ ಗಂಭೀರವಾಗಿ ಗಾಯಗೊಂಡ ಶಿವು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಭರತ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ