ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ರೈತ ಮಹಿಳೆಯರ ಜಿವನೋಪಾಯ ಸುಧಾರಣೆಗಾಗಿ ಹಸಿರು ಮೇವು ತಯಾರಿಕಾ ಪ್ರಾತ್ಯಕ್ಷಿಕೆಯಂತಹ ತರಬೇತಿ ಕಾರ್ಯಕ್ರಮ ಹಮ್ಮಿಕೊಳದಳುತ್ತಿದ್ದೇವೆ ಎಂದು ಧಾನ್ ಫೌಂಡೇಷನ್ ವಲಯ ಸಂಯೋಜಕ ಶಂಕರ್ ಪ್ರಸಾದ್ ತಿಳಿಸಿದ್ದಾರೆ.
ತಾಲೂಕಿನ ಬೋರೆಹೊಸಳ್ಳಿ ಗ್ರಾಮದಲ್ಲಿ ಧಾನ್ ಕಳಂಜಿಯಂ ಫೌಂಡೇಷನ್ ಹಾಗೂ ನಬಾರ್ಡ್, ಮೈಸೂರು ಸಹಯೋಗದಲ್ಲಿ ಶನಿವಾರ ‘ಹಸಿರು ಮೇವು ತಯಾರಿಕಾ ಪ್ರಾತ್ಯಕ್ಷಿಕೆ ಘಟಕ ಉದ್ಘಾಟಿ ಮಾತನಾಡಿದರು.
ರೈತರು ಆಧುನಿಕತೆಯನ್ನು ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು. ನಬಾರ್ಡ್ ನ ಸಹಯೋಗದಲ್ಲಿ ಆರಂಭಿಸಿರುವ ಈ ಪ್ರಾತ್ಯಕ್ಷಿಕೆ ಘಟಕ ಮುಂದಿನ ದಿನಗಳಲ್ಲಿ ಬೇರೆ ಹಳ್ಳಿಗಳಲ್ಲೂ ಕೂಡ ತೆರೆದು ತರಬೇತಿ ಕೊಡಲಾಗುವುದು ಹಾಗೂ ಇದರ ಸದುಪಯೋಗ ಪಡೆಯಬೇಕು ಎಂದು ಕಾರ್ಯಕ್ರಮ ಆಯೋಜನೆ ಮಾಡಿದ್ದ ಧಾನ್ ಫೌಂಡೇಷನ್ ತಾಲೂಕು ವ್ಯವಸ್ಥಾಪಕ ನಾರಾಯಣ ಹೆಗಡೆ ಕರೆ ನೀಡಿದರು.
ರೈತ ಮಹಿಳೆಯರಿಗೆ ಹಸಿರು ಹುಲ್ಲು ಹಾಗೂ ಜೋಳದ ದಂಟುಗಳನ್ನು ಬಳಸಿ ರಸಮೇವು ತಯಾರಿಸುವ ವಿಧಾನದ ಪ್ರಾತ್ಯಕ್ಷಿಕೆಯನ್ನು ಡಾ. ಮಧುಸೂದನ್ ನಡೆಸಿಕೊಟ್ಟರು.
ಒಕ್ಕೂಟದ ಅಧ್ಯಕ್ಷೆ ಲತಾ, ನಿರ್ದೇಶಕಿ ಜ್ಯೋತಿ, ಧಾನ್ ಸಿಬ್ಬಂದಿ ಮಂಜು, ಉಮಾ, ವಿನೋದಾ, ರಮ್ಯಾ ಹಾಗೂ ರೈತಮಹಿಳೆಯರು ಇದ್ದರು.