Vijayapatha – ವಿಜಯಪಥ
Friday, November 1, 2024
NEWSನಮ್ಮರಾಜ್ಯಸಂಸ್ಕೃತಿ

ಹಡಪದ (ಕ್ಷೌರಿಕ) ಪ್ರತ್ಯೇಕ ಅಭಿವೃದ್ಧಿ ನಿಗಮ?: ಕೊಟ್ಟ ಮಾತು ಈಡೇರಿಸದ ಸಿಎಂ ಬಿಎಸ್‌ವೈ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಹಡಪದ (ಕ್ಷೌರಿಕ) ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಲಬುರಗಿಯಲ್ಲಿ 2017ರಲ್ಲೇ ವಾಗ್ದಾನ ಮಾಡಿದ್ದು, ಈವರೆಗೂ ಆ ಮಾತಿನಂತೆ ನಡೆದುಕೊಂಡಿಲ್ಲ ಎಂದು ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಯುವಕ ಸಂಘ ಕಲಬುರಗಿ ಜಿಲ್ಲೆಯ ಯೂತ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಆರೋಪಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಪ್ರಸ್ತುತ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನಂದರೆ ಆರ್ಥಿಕವಾಗಿ , ಶೈಕ್ಷಣಿಕವಾಗಿ , ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜದವರು ಆದ ನಾವು 12 ನೇ ಶತಮಾನದ ಪೂರ್ವದಿಂದ ಆಯಾ ಪದ್ಧತಿಯಿಂದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ನಮ್ಮ ಮೂಲ ವೃತ್ತಿಯಾದ ಕ್ಷೌರಿಕ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಾ ಬರುತ್ತಿದ್ದೇವೆ. ಆದರೆ, ಕರ್ನಾಟಕದಲ್ಲಿ ಬಹು ಸಂಖ್ಯೆಯಲ್ಲಿರುವ ಹಡಪದ (ಕ್ಷೌರಿಕ) ಸಮಾಜವನ್ನು ಸರ್ಕಾರವು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವ ಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾದ ಶಿವಶರಣ ಹಡಪದ ಅಪ್ಪಣ್ಣನವರ ವಂಶಸ್ಥರು ಮತ್ತು ಕರ್ನಾಟಕದ ಮೂಲ ನಿವಾಸಿಗಳು ಹಡಪದ (ಕ್ಷೌರಿಕ) ಸಮಾಜದವರು. ಹೀಗಾಗಿ ನೀವು ಈ ಹಿಂದೆ ಏನು ಮಾತುಕೊಟ್ಟಿದ್ದೀರೋ ಅದರಂತೆ ನಮ್ಮ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಮೂಲತಃ ಕನ್ನಡಿಗರಿಗೆ ಅನ್ಯಾಯ
ಕರ್ನಾಟಕದಲ್ಲಿ 13 ರಿಂದ 15 ಲಕ್ಷ ಹಡಪದ ಸಮಾಜದ ಜನರಿದ್ದೇವೆ. ಈ ಸಣ್ಣ ಸಣ್ಣ ಸಮುದಾಯಕ್ಕೆ ಕೊಟ್ಟ. ಮಾತಿನಂತೆ ಸಿಎಂ ಬಿ.ಎಸ್ ಯಡಿಯೂರಪ್ಪನವರು ನಡೆಯಬೇಕು ಎಂದು ಹಡಪದ ಸಮಾಜದ ಮೂಲಕ ಒತ್ತಾಯಿಸಿದ್ದಾರೆ.

ಕರ್ನಾಟಕದ ಮೂಲ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವ ಹಡಪದ , ಕ್ಷೌರಿಕ , ನಾವಿ , ಕ್ಷೌರದ , ಕಾಯಕದ ಕೆಲಸಿ ನಯನಜ ಕ್ಷತ್ರಿಯ , ಬಂಡಾರಿ , ಚೌರಿಯ ಕವುಟಿಯನ್ ಮಹಾಲೆ , ಮಂಗಳ , ಮೇಲಗಾರ , ನಾಡಿಗ , ನಾಪಿತ , ನವಲಿಗ್ , ವಾಜಾಂತ್ರಿ , ನಯನಜ ಹೀಗೆ ಕರ್ನಾಟಕದ ಮೂಲ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವ ಸಮುದಾಯಗಳಿಗೆ ಅನ್ಯಾಯ ವಾಗಿದೆ. ಈ ಬಗ್ಗೆ ತಮಗೆ ಮತ್ತು ಹಲವಾರು ಶಾಸಕರು, ಸಚಿವರಿಗೆ ಹಗಲವು ಬಾರಿ ಮನವಿ ಮಾಡಿದ್ದೇವೆ ಆದರೂ ಏನು ಪ್ರಯೋಜವಾಗಿಲ್ಲ ಎಂದು ಹೇಳಿದ್ದಾರೆ.

ಅಂದು ವಿಪಕ್ಷದ ನಾಯಕರಾಗಿದ್ದ ಇಂದಿನ ಮುಖ್ಯಮಂತ್ರಿಯಾಗಿರುವ ನೀವು 2017ರ ಮೇ 2 ರಂದು ಕಲಬುರಗಿಯಲ್ಲಿ ನಮ್ಮ ಸಮಾಜದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಹಡಪದ(ಕ್ಷೌರಿಕ) ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಹಡಪದ ಸಮಾಜವನ್ನು ಪ್ರ ವರ್ಗ 1 ಕ್ಕೆ ಸೇರುತ್ತವೆ ಮತ್ತು ಹಡಪದ ಸಮಾಜವನ್ನು ಎಸ್ಟಿಗೇ ಸೇರ್ಪಡೆ. ಈರಣ್ಣ ಸಿ. ಹಡಪದ ಸಣ್ಣೂರ ಅವರನ್ನು ನಿಗಮ ಮಂಡಳಿಗೆ ನಾಮನಿರ್ದೇಶನ ಮಾಡುವೆ ಎಂದು ವಾಗ್ದಾನ ಮಾಡಿದ್ರಿ. ಆದರೆ ಇಲ್ಲಿಯವರೆಗೆ ಆ ಆಶ್ವಾಸನೆ ಮತ್ತು ಭರವಸೆ ಈಡೇರಿಲ್ಲ. ಆದ ಕಾರಣ ಶೀಘ್ರದಲ್ಲೇ ನಮ್ಮ ಸಮಾಜದ ಮಂಡಳಿ ರಚಿಸಬೇಕು.

 l ಮಲ್ಲಿಕಾರ್ಜುನ ಬಿ ಹಡಪದ  

ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಯುವಕ ಸಂಘ ಕಲಬುರಗಿ ಜಿಲ್ಲೆಯ ಯೂತ್ ಪ್ರಧಾನ ಕಾರ್ಯದರ್ಶಿ

Leave a Reply

error: Content is protected !!
LATEST
ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ