ಬೆಂಗಳೂರು: ಪ್ರಪಂಚಾದ್ಯಂತ ಆವರಿಸಿರುವ ಕೊರೊನಾ ವಿಶ್ವಮಾರಿಯ ನಡುವೆಯೂ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡುತ್ತಿದ್ದು, ವಿಜಯ ದಶಮಿಯ 10ನೇ ದಿನವಾದ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.
ಈ ನಡುವೆ ಇಂದು ಮುಂಜಾನೆಯೇ ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಕಾಮನೆಗಳು. ಅಧರ್ಮದ ವಿರುದ್ಧ ಧರ್ಮದ ವಿಜಯದ ಸಂಕೇತವೇ ವಿಜಯದಶಮಿ. ಈ ಕೊರೊಮಹಾಮಾರಿಯ ವಿರುದ್ಧ ನಮಗೆ ನಾಡದೇವತೆ ಚಾಮುಂಡೇಶ್ವರಿ ಗೆಲುವನ್ನು ಅನುಗ್ರಹಿಸಲಿ, ಜನರಿಗೆ ಆರೋಗ್ಯ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ ಎಂದು ಸಿಎಂ ತಿಳಿಸಿದ್ದಾರೆ.
ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಕಾಮನೆಗಳು. ಅಧರ್ಮದ ವಿರುದ್ಧ ಧರ್ಮದ ವಿಜಯದ ಸಂಕೇತವೇ ವಿಜಯದಶಮಿ. ಈ ಕೊರೋನಾ ಮಹಾಮಾರಿಯ ವಿರುದ್ಧ ನಮಗೆ ನಾಡದೇವತೆ ಚಾಮುಂಡೇಶ್ವರಿ ಗೆಲುವನ್ನು ಅನುಗ್ರಹಿಸಲಿ, ಜನರಿಗೆ ಆರೋಗ್ಯ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ. #ನಾಡಹಬ್ಬದಸರಾ#Vijayadashami2020 pic.twitter.com/S2zpI2YfDo
— B.S. Yediyurappa (@BSYBJP) October 26, 2020