ಬಳ್ಳಾರಿ: ವೃತ್ತಿ ಬದುಕಿಗೆ ನಿವೃತ್ತಿ ಸಿಗುವ ದಿನವೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಪಿಎಸ್ಐ ಬದುಕಿಗೆ ವಿದಾಯ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆ ಎಸ್ಐ ಯಲ್ಲಪ್ಪ ಕದ್ರಳ್ಳಿ (60) ಕೊರೊನಾ ಸೋಂಕಿಗೆ ಇಂದು ಬಲಿಯಾಗಿದ್ದಾರೆ.
ಕಳೆದ 34 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಯಲಪ್ಪ ಕದ್ರಳ್ಳಿ ಅವರು ಇಂದು ವೃತ್ತಿ ಬದುಕಿಗೆ ನಿವೃತ್ತಿ ಪಡೆಯಬೇಕಿತ್ತು. ಆದರೆ ನಿವೃತ್ತಿ ಪಡೆಯುವ ದಿನವೇ ತಮ್ಮ ಬದುಕಿಗೇ ವಿದಾಯ ಹೇಳಿದ್ದು, ವಿಧಿಯನ್ನು ಶಪಿಸುವಂತಾಗಿದೆ.
ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಂಕು ಉಲ್ಬಣವಾದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅಸುನೀಗಿದ್ದಾರೆ.